ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಸಂಕೋಲೆ ಬೇಡ

Last Updated 27 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಅದರ ಪ್ರಬಲ ಪ್ರತಿಪಾದಕ ಎಸ್‌.ಎಂ. ಜಾಮದಾರ ಅವರು ಮಾಧ್ಯಮಗಳ ಮೂಲಕ, ‘ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೈಲಾರ ಮಹಾದೇವ ಸ್ವಾತಂತ್ರ್ಯ ಹೋರಾಟಗಾರರು, ಲಿಂಗಾಯತರು’ ಎಂದು ಅಪ್ಪಣೆ ಕೊಡಿಸಿದ್ದಾರೆ.

ನನ್ನ ಕಳಕಳಿ ಏನೆಂದರೆ, ನಮ್ಮ ಅನೇಕ ದಾರ್ಶನಿಕರು, ಮಹನೀಯರನ್ನು ಒಂದೊಂದು ಜಾತಿಗೆ ಸೀಮಿತ ಮಾಡಲಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಎಲ್ಲರೂ ನಮ್ಮವರೇ ಎಂಬ ಭಾವದಿಂದ ದುಡಿದ ಗಾಂಧಿ, ಅಂಬೇಡ್ಕರ್‌ ಮುಂತಾದವರ ಭಾವಚಿತ್ರಗಳಿಗೆ ಮಸಿ ಬಳಿದು ಹಲವು ಬಾರಿ ಅವರನ್ನು ಅವಮಾನಿಸಿದ್ದಿದೆ.

ಆದರೆ ನಮ್ಮ ನಾಡಿಗಾಗಿ ಪ್ರಾಣತೆತ್ತ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಅವಮಾನಿಸಿದ ಉದಾಹರಣೆಗಳಿಲ್ಲ. ನಮ್ಮ ಭಾಷೆ, ಜಲ, ನೆಲ ಘನತೆಗಾಗಿ ಹೋರಾಡಿದ ಐತಿಹಾಸಿಕ ವ್ಯಕ್ತಿಗಳನ್ನು ನಾವು ಜಾತಿ ಸಂಕೋಲೆಯಲ್ಲಿ ಬಂಧಿಸುವುದು ಯಾವ ನ್ಯಾಯ?

-ಗರ್ತಿಕೆರೆ ಚಂದ್ರಪ್ಪ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT