ಭಕ್ತಿಯೇ ಮುಖ್ಯ

ಗುರುವಾರ , ಜೂನ್ 20, 2019
31 °C

ಭಕ್ತಿಯೇ ಮುಖ್ಯ

Published:
Updated:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀನು ಸೇವಿಸಿ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಚಾರ ವಿವಾದವಾಗಿದೆ.

ಆಹಾರ ಅವರವರ ಸಂಪ್ರದಾಯ, ಪದ್ಧತಿ ಹಾಗೂ ವಿವೇಚನೆಗೆ ಬಿಟ್ಟ ವಿಷಯ. ಸಸ್ಯಾಹಾರವನ್ನು ಸೇವಿಸಿದವರು ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂಬ ಕಟ್ಟಪ್ಪಣೆ ಆಗಲೀ, ನಿಯಮವಾಗಲೀ ವೇದಶಾಸ್ತ್ರಗಳಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ.

ದೇವರಲ್ಲಿ ನಂಬಿಕೆ ಇರುವವರಿಗೆ, ಭಕ್ತ ಮತ್ತು ಭಗವಂತನ ಮಧ್ಯೆ ಭಕ್ತಿಯೇ ಪ್ರಧಾನವಾಗಿರುತ್ತದೆ.

ಭಕ್ತ ಕುಂಬಾರ ಚಿತ್ರದ ಹಾಡಿನಲ್ಲಿ, ‘ಮಾನವ ಮೂಳೆ ಮಾಂಸದ ತಡಿಕೆ, ಅದರ ಮೇಲಿದೆ ತೊಗಲಿನ ಹೊದಿಕೆ’ಎಂಬ ಸಾಲುಗಳಿವೆ. ಮಾನವ ದೇಹ ಮೂಳೆ ಮಾಂಸಗಳ ಜೊತೆಗೆ ಮಲ ಮೂತ್ರಗಳನ್ನೂ ತುಂಬಿಕೊಂಡಿರುವುದು ಸತ್ಯವಲ್ಲವೇ? ಇಂಥ ಮಾನವ, ದೇವಸ್ಥಾನ ಪ್ರವೇಶಿಸಿದರೆ ದೇವಸ್ಥಾನ ಅಪವಿತ್ರವಾಗುತ್ತದೆಯೇ? ಕೊಲೆ, ಸುಲಿಗೆ, ಅತ್ಯಾಚಾರ, ಕಳ್ಳತನವನ್ನು ಮಾಡಿದವರು ದೇವಾಲಯವನ್ನು ಪ್ರವೇಶಿಸಿದರೆ ಲೋಪವಿಲ್ಲ. ಆದರೆ ಮಾಂಸ ಸೇವಿಸಿದವರು ಪ್ರವೇಶ ಮಾಡಿದರೆ ಅಪರಾಧವೇ?

ಸಿದ್ದರಾಮಯ್ಯ ಅವರು ಹೇಳಿದ ಹಾಗೆ, ಮಹಾ ಭಕ್ತನಾದ ಬೇಡರ ಕಣ್ಣಪ್ಪನು, ಬೇಟೆಯಾಡಿ ತಂದ ಮಾಂಸವನ್ನು ದೇವರಿಗೆ ಅರ್ಪಿಸಲಿಲ್ಲವೇ? ಭಗವಂತನಿಗೆ ನಂಬಿ ಬಂದವನ ‘ಭಕ್ತಿ’ ಮುಖ್ಯವೇ ಹೊರತು ಅವನ ಆಚಾರ, ವಿಚಾರ, ಆಹಾರ ಅಥವಾ ಮಡಿ–ಮೈಲಿಗೆ ಸಂಪ್ರದಾಯಗಳಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು.

-ಡಾ. ಡಿ.ತಿಮ್ಮಯ್ಯ, ಮೈಸೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry