ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ಮೆ.ವಾ. ವಿದ್ಯುತ್ ಹೆಚ್ಚುವರಿ ಖರೀದಿ

Last Updated 27 ಅಕ್ಟೋಬರ್ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: ಇಂಧನ ಇಲಾಖೆಯು ಪ್ರತಿ ಯೂನಿಟ್‌ಗೆ ₹ 4.08 ದರದಲ್ಲಿ 500 ಮೆಗಾವಾಟ್ ವಿದ್ಯುತ್ ಹೆಚ್ಚುವರಿಯಾಗಿ ಖರೀದಿಸಲಿದೆ.

ರಾಜ್ಯದಲ್ಲಿನ ಜೆಎಸ್‌ಡಬ್ಲ್ಯು, ಆಂಧ್ರಪ್ರದೇಶದ ಸೆಂಬ್‌ಕಾರ್ಪ್ ಗಾಯತ್ರಿ ಪವರ್ ಕಾಂಪ್ಲೆಕ್ಸ್‌ನಿಂದ ಒಪ್ಪಂದ ಆಗಿದ್ದು, ಮುಂದಿನ ವಾರದಿಂದ ಖರೀದಿ ಆರಂಭವಾಗಲಿದೆ. 2018ರ ಮೇ 18ಕ್ಕೆ ಖರೀದಿ ಒಪ್ಪಂದ ಮುಗಿದಿದೆ. 1,000 ಮೆ.ವಾ. ವಿದ್ಯುತ್ ಖರೀದಿಗಾಗಿ ಟೆಂಡರ್ ಕರೆದಿದ್ದರೂ ಅಂತಿಮವಾಗಿ 500 ಮೆ.ವಾ. ಕೆಇಆರ್‌ಸಿ ಒಪ್ಪಿಗೆ ನೀಡಿದೆ.

ಶುಕ್ರವಾರದ ಮಾಹಿತಿ ಪ್ರಕಾರ, ರಾಜ್ಯಕ್ಕೆ ಪ್ರತಿ ದಿನ 167 ಮಿಲಿಯನ್ ಯೂನಿಟ್ (8,037 ಮೆ.ವಾ.) ಬೇಡಿಕೆ ಇದೆ. ಆದರೆ, ಕಳೆದ ವರ್ಷದ ಅಕ್ಟೋಬರ್‌ನಲ್ಲಿ 195ರಿಂದ 200 ಮಿಲಿಯನ್ ಯೂನಿಟ್‌ ಬೇಡಿಕೆ ಇತ್ತು. ಈ ತಿಂಗಳ ಸರಾಸರಿ ಬೇಡಿಕೆ 116ರಿಂದ 160 ಮಿಲಿಯನ್ ಯೂನಿಟ್ ಇದೆ.

ಬೇಡಿಕೆ ಹೆಚ್ಚುತ್ತಿದೆ

‘ವಿದ್ಯುತ್‌ ಬೇಡಿಕೆ ಈಗಾಗಲೇ ಹೆಚ್ಚುತ್ತಿದೆ. ಮುಂದಿನ ವಾರ ಇನ್ನೂ ಬೇಡಿಕೆ ಬರುವ ಸಾಧ್ಯತೆ ಇದೆ. ಕಲ್ಲಿದ್ದಲು ಮೂಲದ ಬಗ್ಗೆ ಅನಿಶ್ಚಿತತೆ ಇದ್ದು, ಪರ್ಯಾಯ ಮೂಲಗಳನ್ನು ಶೋಧಿಸಲಾಗುತ್ತಿದೆ’ ಎಂದು ಪಿಸಿಕೆಎಲ್ ವ್ಯವಸ್ಥಾಪಕ ನಿರ್ದೇಶಕ ಟಿ.ಎಚ್.ಎಂ. ಕುಮಾರ್ ಹೇಳಿದರು.

ಇನ್ನೂ 500 ಮೆ.ವಾ. ಖರೀದಿಗೆ ಕೆಇಆರ್‌ಸಿ ಒಪ್ಪಿಗೆ ಕೊಡಲಿದೆ ಎಂಬ ಭರವಸೆಯ ಮೇಲೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಕುಮಾರ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT