ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಿ ಹತ್ಯೆ ಕುರಿತ ದಾಖಲೆಗಳ ಬಿಡುಗಡೆ

Last Updated 27 ಅಕ್ಟೋಬರ್ 2017, 20:26 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮಾಜಿ ಅಧ್ಯಕ್ಷ ಜಾನ್‌ ಎಫ್‌ ಕೆನಡಿ ಅವರ ಹತ್ಯೆಗೆ ಸಂಬಂಧಿಸಿದ 2,891 ರಹಸ್ಯ ಕಡತಗಳನ್ನು ಅಮೆರಿಕ ರಾಷ್ಟ್ರೀಯ ಪತ್ರಾಗಾರ ಇಲಾಖೆ ಬಿಡುಗಡೆ ಮಾಡಿದೆ.

ಆದರೆ, ಸೇನೆ ಮತ್ತು ಗುಪ್ತಚರ ಇಲಾಖೆ ಕಾರ್ಯಾಚರಣೆಗೆ ಸಂಬಂಧಿಸಿದ ಕೆಲ ಸೂಕ್ಷ್ಮ ದಾಖಲೆಗಳನ್ನು ಬಹಿರಂಗಪಡಿಸುವುದನ್ನು ತಡೆಹಿಡಿಯಲಾಗಿದೆ.

1963ರ ನವೆಂಬರ್‌ 22ರಂದು ಡಲ್ಲಾಸ್‌ನಲ್ಲಿ ಕೆನಡಿ ಅವರ ಹತ್ಯೆ ನಡೆದಿತ್ತು. ಅವರ ಹತ್ಯೆಯಿಂದ ರಾಷ್ಟ್ರವೇ ಬೆಚ್ಚಿಬಿದ್ದಿತ್ತು. ಹತ್ಯೆಯ ಹಿಂದಿರುವವರ ಬಗ್ಗೆ ಹಲವು ತರ್ಕಗಳು ಹುಟ್ಟಿಕೊಂಡಿದ್ದವು. ಇದೀಗ ದಾಖಲೆಗಳ ಬಿಡುಗಡೆ ಎಲ್ಲರ ಕುತೂಹಲ ಕೆರಳಿಸಿದೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆದೇಶದ ಮೇರೆಗೆ 2,891 ದಾಖಲೆಗಳನ್ನು ಬಹಿರಂಗಪಡಿಸಲಾಗಿದೆ. ಮುಂದಿನ ಆರು ತಿಂಗಳುಗಳ ಒಳಗೆ ದಾಖಲೆಗಳ ಪರಾಮರ್ಶೆ ನಡೆಸುವಂತೆ ಟ್ರಂಪ್‌ ಅವರು ಸೂಚಿಸಿದ್ದಾರೆ ಎಂದು ರಾಷ್ಟ್ರೀಯ ಪತ್ರಾಗಾರದ ಪ್ರಕಟಣೆ ತಿಳಿಸಿದೆ.

‘ಭದ್ರತಾ ಏಜೆನ್ಸಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಟ್ರಂಪ್‌ ಬಯಸುತ್ತಾರೆ. ಹೀಗಾಗಿ ಜನರಿಗೆ ಸತ್ಯವನ್ನು ತಿಳಿಸುವ ಉದ್ದೇಶದಿಂದ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದರು’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸರಹಾ ಸ್ಯಾಂಡರ್ಸ್‌ ತಿಳಿಸಿದ್ದಾರೆ.

ಕಳೆದ ಜುಲೈ 24ರಂದು 3,810 ಸಂಬಂಧಿಸಿದ ದಾಖಲೆಗಳನ್ನು ರಾಷ್ಟ್ರೀಯ ಪತ್ರಾಗಾರ ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT