ಹೊಸದುರ್ಗದಲ್ಲಿ ಜನಸ್ನೇಹಿ ಕ್ಯಾಂಟೀನ್‌ ಉದ್ಘಾಟನೆ

ಬುಧವಾರ, ಜೂನ್ 19, 2019
32 °C

ಹೊಸದುರ್ಗದಲ್ಲಿ ಜನಸ್ನೇಹಿ ಕ್ಯಾಂಟೀನ್‌ ಉದ್ಘಾಟನೆ

Published:
Updated:

ಹೊಸದುರ್ಗ: ಇಲ್ಲಿನ ಎಸ್‌ಆರ್‌ಎಸ್‌ ಫೌಂಡೇಷನ್‌ನಿಂದ ಪಟ್ಟಣದ ಹುಳಿಯಾರು ವೃತ್ತದಲ್ಲಿ ಶುಕ್ರವಾರ ರಿಯಾಯ್ತಿ ದರದಲ್ಲಿ ತಿಂಡಿ ಹಾಗೂ ಊಟ ಒದಗಿಸುವ ಜನಸ್ನೇಹಿ ಕ್ಯಾಂಟೀನ್‌ ತೆರೆಯಲಾಗಿದೆ.

‘ಮೂರು ತಿಂಗಳ ಹಿಂದೆ ನಮ್ಮ ಸಂಸ್ಥೆ ಹಾಗೂ ಹೊಸನಗರದ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ತಾಲ್ಲೂಕಿನ ಸಿರಿಗೊಂಡನಹಳ್ಳಿಯಲ್ಲಿ ಗೋಶಾಲೆ ಸ್ಥಾಪಿಸಿದ್ದೆವು. ಆಗ ಕೆಲವು ರೈತರು ಬರದಲ್ಲಿ ಜಾನುವಾರುಗೆ ಮೇವು ಕೊಟ್ಟಿದ್ದೀರಿ. ನಮಗೂ ಊಟ ಕೊಡಿ ಎಂದು ಕೇಳಿದ್ದರು.

ಹಾಗಾಗಿ ಜನರ ಸೇವೆ ಮಾಡುವ ಉದ್ದೇಶದಿಂದ ರಿಯಾಯ್ತಿ ದರದಲ್ಲಿ ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ಕೋಡುವ ಉದ್ದೇಶದಿಂದ ಕ್ಯಾಂಟೀನ್‌ ತೆರೆಯಲಾಗಿದೆ’ ಎಂದು ಎಸ್‌ಆರ್‌ಎಸ್‌ ಫೌಂಡೇಷನ್‌   ಮುಖ್ಯಸ್ಥ ಎ.ಆರ್‌.ಶಮಂತ್‌ ತಿಳಿಸಿದರು.

‘ಬೆಳಿಗ್ಗೆ 8.30ರಿಂದ 10ರ ವರೆಗೆ ₹ 9ರ ದರದಲ್ಲಿ ಚಿತ್ರನ್ನಾ, ಪುಳಿಯೊಗರೆ, ಪುಲಾವ್‌, ಟೊಮೆಟೋ ಬಾತ್‌, ಉಪ್ಪಿಟ್ಟು ನೀಡಲಾಗುವುದು. ಹಾಗೆಯೇ ಮಧ್ಯಾಹ್ನ 1ರಿಂದ 3ರ ವರೆಗೆ ₹ 15ರ ದರದಲ್ಲಿ ಅನ್ನ ಸಂಬಾರು, ಹಪ್ಪಳ, ಉಪ್ಪಿನಕಾಯಿ, ಚಟ್ನಿ ಒದಗಿಸಲಾಗುವುದು. ಇಬ್ಬರು ಅಡುಗೆ ತಯಾರಿಸುವವರು, ಮೂರು ಮಂದಿ ಸಹಾಯಕರು ಹಾಗೂ ಒಬ್ಬರೂ ಕ್ಯಾಷಿಯರ್‌ ಇದ್ದಾರೆ.

ತಿಂಡಿ ಮತ್ತು ಊಟದ ಅವಧಿಯಲ್ಲಿ ಎಷ್ಟು ಜನರು ಬಂದರೂ ವ್ಯವಸ್ಥೆ ಮಾಡಲಾಗುವುದು. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಉದ್ದೇಶಕ್ಕಾಗಿ ಮಾತ್ರ ಕ್ಯಾಂಟೀನ್‌ ತೆರೆದಿಲ್ಲ. ಚುನಾವಣೆಯ ನಂತರವೂ ನಿರಂತರವಾಗಿ ಬಡಜನರಿಗೆ ಸೇವೆ ಒದಗಿಸಲಾಗುವುದು‘ ಎಂದು ಹೇಳಿದರು.

‘ಮಧ್ಯಾಹ್ನದ ಊಟ ಸೇವಿಸಿದ ಹಮಾಲಿ ಕಾರ್ಮಿಕ ಕಾಳಪ್ಪ ಮಾತನಾಡಿ, ₹ 9ಕ್ಕೆ ತಿಂಡಿ, ₹15ಕ್ಕೆ ಊಟ ಹೊರಗಡೆ ಎಲ್ಲಿಯೂ ಸಿಗುವುದಿಲ್ಲ. ಇಷ್ಟು ಕಡಿಮೆ ದರಕ್ಕೆ ರುಚಿ ಹಾಗೂ ಶುಚಿಯಾಗಿ ತಿಂಡಿ ಹಾಗೂ ಊಟ ನೀಡುತ್ತಿರುವುದು ನಮ್ಮತ್ತ ಬಡ ಕಾರ್ಮಿಕರಿಗೆ ಹೆಚ್ಚು ಉಪಯೋಗ ಆಗಲಿದೆ. ಈ ಸೇವೆ ನಿರಂತರವಾಗಿರಲಿ‘ ಎಂದು ತಿಳಿಸಿದರು.

ಪೂಜಾರ್‌ ಪ್ರಕಾಶ್‌, ನಾಗರಾಜು, ಮಂಜುನಾಥ್‌, ಗೋಪಿ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry