ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಳಲಿ ರಾಜರಾಜೇಶ್ವರಿ ದೇಗುಲ ಜೀರ್ಣೋದ್ಧಾರ

Last Updated 28 ಅಕ್ಟೋಬರ್ 2017, 9:04 IST
ಅಕ್ಷರ ಗಾತ್ರ

ಬಜ್ಪೆ: ಪೊಳಲಿ ರಾಜರಾಜೇಶ್ವರಿ ದೇಗುಲದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಇದೀಗ ಗರ್ಭಗುಡಿಯ ಕಾಮಗಾರಿ ಪ್ರಗತಿಯಲ್ಲಿದೆ. ಕೇರಳದಿಂದ ಬಂದ ಶಿಲ್ಪಿಗಳು ದೇಗುಲದ ಕಾಮಗಾರಿಯಲ್ಲಿ ನಿರತರಾ ಗಿದ್ದಾರೆ. ಪೊಳಲಿ ದೇಗುಲದ ಗರ್ಭ ಗುಡಿಯಲ್ಲಿ ಶ್ರೀರಾಜರಾಜೇಶ್ವರಿ ಪ್ರಧಾ ನ ದೇವತೆಯಾಗಿದ್ದು, ಉಳಿದಂತೆ ಭದ್ರ ಕಾಳಿ, ಶ್ರೀಗೌರಿ, ಗಣೇಶ, ಸುಬ್ರಹ್ಮಣ್ಯ, ಬ್ರಹ್ಮಬಟುಕ, ವಿಷ್ಣುಬಟುಕ, ರುದ್ರ ದೇವ, ಶಿವಮೂರ್ತಿ, ಮಂತ್ರೇಶ, ಭೈರವ ವಿಗ್ರಹಗಳು, ದೇವತೆಗಳ ಮೂರ್ತಿಗಳು ಇಲ್ಲಿವೆ.

‘2 ಅಥವಾ 3ನೇ ಶತಮಾನದಲ್ಲಿ ಪೊಳಲಿ ಪ್ರಮುಖ ಪಟ್ಟಣವಾಗಿದ್ದು,  ಕ್ರಿ.ಶ. 1446 ಸಂದರ್ಭ ದೇಗುಲ ಬೆಳಕಿಗೆ ಬಂದಿರುವ ಬಗ್ಗೆ ಅಂದಾಜಿಸಲಾಗಿದೆ.ಆದರೆ ಫಲ್ಗುಣಿ ನದಿಯಲ್ಲಿ ಉಂಟಾದ ಪ್ರವಾಹದಿಂದ ಪೊಳಲಿ ಪಟ್ಟಣ ನಾಮವಶೇಷಗೊಂಡು ಬಳಿಕ ಪೊಳಲಿ ರಾಜರಾಜೇಶ್ವರಿ ದೇಗುಲವಷ್ಟೇ ಉಳಿದಿರುವ ಸಾಧ್ಯತೆ ಇದೆ’ ಎಂಬುದು ಇತಿಹಾಸಕಾರರ ಅಭಿಪ್ರಾಯವಾಗಿದೆ.

ಪೊಳಲಿ ದೇಗುಲದ ಗರ್ಭಗುಡಿಯು ನಾಲ್ಕು ಅಡಿ ಎತ್ತರ ನೆಲಗಟ್ಟಿನ ಮೇಲೆ ಪೂರ್ವಾಭಿಮುಖವಾಗಿ ಕಟ್ಟಲಾಗಿತ್ತು. ಮುಖಮಂಟಪವು ಗರ್ಭಗುಡಿಯ ಸಮತಟ್ಟಿನ ನೆಲೆಗಟ್ಟಿನ ಮೇಲೆ ಕಟ್ಟಿದ್ದು, ಹೊರಭಾಗದ ಅಂತರವು ಒಂದಡಿ ತಗ್ಗಾಗಿ ರಚಿಸಲಾಗಿದೆ. ಇದರ ಸುತ್ತಲೂ ಮರದ ದಳಿ ಇತ್ತು.

ದೇವಾಲಯವನ್ನು ಸಂಪೂರ್ಣವಾಗಿ ತಾಮ್ರದಿಂದ ಹೊದಿಸಲಾಗಿತ್ತು. ಗರ್ಭಗುಡಿ ಮಣ್ಣಿನಿಂದ ರಚಿತವಾಗಿದೆ. ಮುಂದುಗಡೆ ದುರ್ಗಾಪರಮೇಶ್ವರಿ ದೇಗುಲ, ಶ್ರೀಕ್ಷೇತ್ರಪಾಲ ದೇಗುಲಗಳಿವೆ. ಈ ಎಲ್ಲಾ ದೇಗುಲವನ್ನು ತೆಗೆದು ಇಂದು ಹೊಸತಾಗಿ ಶಿಲಾಮಯ ದೇಗುಲವನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ದೇಗುಲ ಕಾರ್ಯ ಮುಗಿದು, ಬ್ರಹ್ಮಕಲಶೋತ್ಸವ ನಡೆಯುವ ಸಾಧ್ಯತೆ ಇದೆ.

ದುರ್ಗಾಪರಮೇಶ್ವರಿ ದೇಗುಲದ ಮುಕ್ಕಾಲು ಭಾಗ ಪೂರ್ಣಗೊಂಡಿದ್ದು, ಶಿಲಾಮಯ ದೇಗುಲ ನಿರ್ಮಾಣ ಗೊಂಡಿದೆ. ಈಗ ಪ್ರಧಾನ ದೇವರಿರುವ ಗರ್ಭಗುಡಿಯ ಕಾಮಗಾರಿ ನಡೆಯು ತ್ತಿದೆ. ಮಧ್ಯಭಾಗದ ಮಣ್ಣಿನ ಆಲಯ ವನ್ನು ಉಳಿಸಿ ಅದರ ಸುತ್ತಲು ಕಲ್ಲಿ ನಿಂದ ಗರ್ಭಗುಡಿ ಕಾಮಗಾರಿ ನಡೆಸಲಾಗುತ್ತಿದೆ. ಪೊಳಲಿ ಸಾವಿರ ಸೀಮೆಯ ಭಕ್ತರು ಕರಸೇವೆಯ ಮೂಲಕ ಸೇವೆ ಮಾಡುತ್ತಿದ್ದಾರೆ. ಊರಿನ ಭಕ್ತರು ಪೊಳಲಿಯ ದೇಗುಲ ನಿರ್ಮಾಣದ ಕಾರ್ಯದಲ್ಲಿ ಸೇರಿಕೊಂಡಿದ್ದಾರೆ. ಪುನ ರುತ್ಥಾನದ ವೇಳೆ ಶಿಲಾಶಾಸನವೂ ಪತ್ತೆಯಾಗಿದೆ.

ಪೊಳಲಿ ಸಾವಿರ ಸೀಮೆಗೆ ಸಂಬಂಧಪಟ್ಟಂತೆ ಹಲವಾರು ದೇಗುಲ ಗಳಿದ್ದು, ಅವೆಲ್ಲವೂ ಮಣ್ಣಿನೊಳಗಡೆ ಹುದುಗಿ ಹೋಗಿರುವ ಬಗ್ಗೆ ಆಧಾರಗಳು ಸಿಕ್ಕಿವೆ. ಮುಖ್ಯವಾಗಿ ಫಲ್ಗುನಿ ನದಿಯ ಇಕ್ಕೆಲಗಳಲ್ಲಿ ಶಿವ, ಗಣಪತಿ ದೇವರ ದೇಗುಲಗಳಿದ್ದು ಅವು ನಾಶಗೊಂಡಿದೆ. ಇದಕ್ಕೆ ಪೂರಕವೆಂಬಂತೆ ಗಂಜಿ ಮಠದಲ್ಲಿ ಶಿವನ ದೇಗುಲ, ಮಳಲಿ ಯಲ್ಲಿ ಸೂರ್ಯನಾರಾಯಣ ದೇಗುಲ ಅಥವಾ ಶಿವ ದೇಗುಲ, ಮಳಲಿ ಫಲ್ಗುಣಿ ನದಿ ಸಮೀಪ ಕೊರಗೊಟ್ಟು ಎಂಬಲ್ಲಿ ಶಿವದೇಗುಲವಿತ್ತು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT