ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಾಲಿ ಸಕ್ಕರೆ ಕಾರ್ಖಾನೆ ಆಡಳಿತದಿಂದ ರೈತರಿಗೆ ಅಗೌರವ’

Last Updated 28 ಅಕ್ಟೋಬರ್ 2017, 9:59 IST
ಅಕ್ಷರ ಗಾತ್ರ

ಸಿಂದಗಿ: ‘ತಾಲ್ಲೂಕಿನ ಮಲಘಾಣ ಗ್ರಾಮದಲ್ಲಿನ ಮನಾಲಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಈ ಭಾಗದ ಗ್ರಾಮಗಳ ರೈತರಿಗೆ ಅಗೌರವ ತೋರಿದೆ’ ಎಂದು ವಕೀಲ ಪಿ.ಬಿ.ಬಿರಾದಾರ ಟೀಕಿಸಿದ್ದಾರೆ.

‘ಈಚೆಗೆ ಬಾಗಲಕೋಟೆ–ವಿಜಯಪುರ ಜಿಲ್ಲೆಯ ಕೆಲವು ರಾಜಕೀಯ ಮುಖಂಡರನ್ನು ಕರೆಯಿಸಿ ಕಾರ್ಖಾನೆ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಕಾರ್ಖಾನೆ ಸುತ್ತಮುತ್ತಲಿನ ಕೋರಹಳ್ಳಿ, ಆಲಹಳ್ಳಿ, ಬಬಲೇಶ್ವರ, ಆಸಂಗಿಹಾಳ, ನಾಗರಹಳ್ಳಿ, ಉಚಿತನಾವದಗಿ, ಗುಂದಗಿ, ದೇವಣಗಾಂವ, ಬಮ್ಮನಹಳ್ಳಿ, ದೇವರನಾವದಗಿ, ಕುಮಸಗಿ ಹೀಗೆ ಹಲವಾರು ಗ್ರಾಮಗಳ ರೈತರನ್ನು ಆಹ್ವಾನಿಸದೇ ಅಗೌರವ ತೋರಿಸಿರುವುದು ಖಂಡನೀಯ’ ಎಂದು ಇಲ್ಲಿ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

‘11 ಗ್ರಾಮಗಳ ರೈತರನ್ನು ಸಭೆಗೆ ಆಹ್ವಾನಿಸಿಲ್ಲ. ಆಹ್ವಾನವಿರದಿದ್ದರೂ ಸಭೆ ಯಲ್ಲಿ ಹಾಜರಿದ್ದ ರೈತ ಮುಖಂಡರನ್ನು ತೀರ ಅಗೌರವ ರೀತಿಯಲ್ಲಿ ಕಂಡಿದ್ದಾರೆ. ಈ ಕಾರ್ಖಾನೆ ಮಲಘಾಣ ಗ್ರಾಮಕ್ಕೆ ಸೀಮಿತ ಅನ್ನೋ ಹಾಗೇ ನಡೆದುಕೊಳ್ಳುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

See also:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT