ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಸಿ ನಿವ್ವಳ ಲಾಭ ಏರಿಕೆ

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಐಟಿಸಿ ಲಿಮಿಟೆಡ್‌ನ ನಿವ್ವಳ ಲಾಭ ₹2,640 ಕೋಟಿಗಳಿಗೆ ತಲುಪಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ ₹2,500 ಕೋಟಿ ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 5.59 ರಷ್ಟು ಅಲ್ಪ ಹೆಚ್ಚಳ ಆಗಿದೆ. ಜಿಎಸ್‌ಟಿಯಲ್ಲಿ ಸಿಗರೇಟ್‌ ಮೇಲೆ ಗರಿಷ್ಠ ತೆರಿಗೆ ವಿಧಿಸಲಾಗಿದೆ. ಹಾಗಾಗಿ ಲಾಭದಲ್ಲಿ ಅಲ್ಪ ಹೆಚ್ಚಳ ಸಾಧಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಒಟ್ಟು ವರಮಾನ ₹14, 091 ಕೋಟಿಗಳಿಂದ ₹10,258 ಕೋಟಿಗಳಿಗೆ ಇಳಿಕೆ ಕಂಡಿದೆ.

ಜುಲೈ 1 ರಿಂದ ಜಿಎಸ್‌ಟಿ ಜಾರಿಗೆ ಬಂದಿದೆ. ಹಾಗಾಗಿ, ಕಾರ್ಯಾಚರಣೆ
ಯಿಂದ ಬಂದಿರುವ ವರಮಾನವನ್ನು ಹಿಂದಿನ ಅವಧಿಗೆ ಹೋಲಿಕೆ ಮಾಡುವಂತಿಲ್ಲ ಎಂದು ಕಂಪೆನಿ ತಿಳಿಸಿದೆ.

ಸಿಗರೇಟ್‌ನಿಂದ ಬರುವ ವರಮಾನ₹8,528 ಕೋಟಿಗಳಿಂದ ₹ 4,554 ಕೋಟಿಗಳಿಗೆ, ಶೇ 46.56 ರಷ್ಟು ಕುಸಿತ ಕಂಡಿದೆ.

ಎಫ್‌ಎಂಸಿಜಿ ವಹಿವಾಟಿನಿಂದ ಬಂದಿರುವ ಒಟ್ಟಾರೆ ವರಮಾನವೂ ₹11,200 ಕೋಟಿಗಳಿಂದ ₹7,358 ಕೋಟಿಗಳಿಗೆ ಇಳಿಕೆ ಯಾಗಿದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT