ರಾಮಮಂದಿರ ವಿವಾದ– ರವಿಶಂಕರ್‌ ಗುರೂಜಿ ಮಧ್ಯಸ್ಥಿಕೆ

ಶುಕ್ರವಾರ, ಮೇ 24, 2019
23 °C

ರಾಮಮಂದಿರ ವಿವಾದ– ರವಿಶಂಕರ್‌ ಗುರೂಜಿ ಮಧ್ಯಸ್ಥಿಕೆ

Published:
Updated:
ರಾಮಮಂದಿರ ವಿವಾದ– ರವಿಶಂಕರ್‌ ಗುರೂಜಿ ಮಧ್ಯಸ್ಥಿಕೆ

ಬೆಂಗಳೂರು: ಅಯೋಧ್ಯೆ ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಆರ್ಟ್‌ ಆಫ್‌ ಲಿವಿಂಗ್‌ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ನಿರ್ಮೋಹಿ ಅಕ್ಷರದ ಆಚಾರ್ಯ ರಾಮದಾಸ್‌ ಸೇರಿದಂತೆ ಹಲವು ಸ್ವಾಮೀಜಿಗಳು ಮತ್ತು ಮುಸ್ಲಿಂ ಧಾರ್ಮಿಕ ಗುರುಗಳ ಜೊತೆ ಅವರು ಸಂಪರ್ಕದಲ್ಲಿದ್ದಾರೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

‘ರಾಮಮಂದಿರ ವಿಷಯ ಎರಡು ಸಮುದಾಯಗಳು ಸೌಹಾರ್ದಯುತವಾಗಿ ಬೆರೆಯಲು ಅವಕಾಶ ಒದಗಿಸಲಿದೆ. ಅಲ್ಲದೆ, ವಿವಾದ ಬಗೆಹರಿಸುವ ನಿಟ್ಟಿನಲ್ಲಿ ದೊಡ್ಡತನ ತೋರಲು ದಾರಿ ಮಾಡಿಕೊಡಲಿದೆ ಎಂದು ರವಿಶಂಕರ್‌ ಭಾವಿಸಿದ್ದಾರೆ. ಎರಡೂ ಸಮುದಾಯಗಳ ಧಾರ್ಮಿಕ ನಾಯಕರ ಒಪ್ಪಿಗೆ ಮತ್ತು ಸಕಾರಾತ್ಮಕ ಚಿಂತನೆಯಿಂದ ಪರಿಹಾರ ಕಂಡುಕೊಳ್ಳುವುದು ಅವರ ಉದ್ದೇಶವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry