ಭಾನುವಾರ, ಸೆಪ್ಟೆಂಬರ್ 15, 2019
23 °C

ಜಿಎಸ್‌ಟಿಎನ್‌: ಬಗೆಹರಿಯದ ತಾಂತ್ರಿಕ ದೋಷ

Published:
Updated:
ಜಿಎಸ್‌ಟಿಎನ್‌: ಬಗೆಹರಿಯದ ತಾಂತ್ರಿಕ ದೋಷ

ಬೆಂಗಳೂರು: ‘ಜಿಎಸ್‌ಟಿಎನ್‌ ಜಾಲತಾಣದಲ್ಲಿ ಇರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ಇನ್ಪೋಸಿಸ್‌ನ ತಜ್ಞರ ತಂಡ ಈ ಬಗ್ಗೆ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಸಮಸ್ಯೆಗಳು ಹೆಚ್ಚು ಸಂಕೀರ್ಣವಾಗಿರುವುದರಿಂದ ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ’ ಎಂದು ಜಿಎಸ್‌ಟಿಎನ್‌ ತಾಂತ್ರಿಕ ಸಮಸ್ಯೆ ನಿವಾರಣೆಗೆ ರಚಿಸಿರುವ ಸಚಿವರ ತಂಡದ ಅಧ್ಯಕ್ಷ, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ತಿಳಿಸಿದರು.

ನಗರದಲ್ಲಿ ಶನಿವಾರ ಸಚಿವರ ತಂಡದ ಮೂರನೇ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿಎನ್‌ ಮತ್ತು ಇನ್ಫೊಸಿಸ್‌ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಪರಿಹಾರ ನೀಡಲಿದೆ ಎಂದರು.

ಅಕ್ಟೋಬರ್‌ 30ರ ಒಳಗೆ ಶೇ 80 ರಷ್ಟು ಸಮಸ್ಯೆಗಳು ಬಗೆಹರಿಯಲಿವೆ ಎಂದು ಸಚಿವರ ತಂಡ ಭರವಸೆ ನೀಡಿತ್ತು. ಆದರೆ ಬಹಳಷ್ಟು ಸಮಸ್ಯೆಗಳು ಹಾಗೆಯೇ ಉಳಿದಿವೆ. ‘ಇನ್‌ವೈಸ್‌ ಅಪ್ಲೋಡ್‌ ಮಾಡಲು ಆಗುತ್ತಿಲ್ಲ’. ‘ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಸರಳವಾಗಿಲ್ಲ’ ಎಂದು ವರ್ತಕರು ಜಿಎಸ್‌ಟಿಎನ್‌ಗೆ ದೂರು ನೀಡುತ್ತಲೇ ಇದ್ದಾರೆ.

‘ಜಿಎಸ್‌ಟಿಎನ್‌ನಲ್ಲಿ ಇರುವ 47 ಸಮಸ್ಯೆಗಳನ್ನು ಇನ್ಫೊಸಿಸ್‌ ಗಮನಕ್ಕೆ ತರಲಾಗಿತ್ತು. ಅದರಲ್ಲಿ 27 ಸಮಸ್ಯೆಗಳನ್ನು ಸೆಪ್ಟೆಂಬರ್‌ ತಿಂಗಳ ಒಳಗೆ ಪರಿಹರಿಸುವ ಗಡುವು ನೀಡಲಾಗಿತ್ತು. ಆದರೆ ಅದರಲ್ಲಿ 18 ನ್ನು ಬಗೆಹರಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ. ಇನ್ನು  9 ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಇನ್ನಷ್ಟು ತಜ್ಞರನ್ನು ತಂಡಕ್ಕೆ ಸೇರಿಸಿಕೊಂಡು ಆದಷ್ಟೂ ಬೇಗ ಎಲ್ಲದಕ್ಕೂ ಪರಿಹಾರ ಸೂಚಿಸುವಂತೆ ತಿಳಿಸಲಾಗಿದೆ’

ಜಿಎಸ್‌ಟಿಆರ್‌–1ರಲ್ಲಿ ಮಾರಾಟಕ್ಕೆ ಸಂಬಂಧಿಸಿದಂತೆ 45 ಕೋಟಿ ಇನ್‌ವೈಸ್‌ ಅಪ್ಲೋಡ್‌ ಆಗಿದೆ. ಜಿಎಸ್‌ಟಿಆರ್‌–2ನಲ್ಲಿ ಖರೀದಿಗೆ ಸಂಬಂಧಿಸಿದ ಇನ್‌ವೈಸ್‌ ಜತೆ ಹೋಲಿಕೆ ಮಾಡಬೇಕು. ಇದಕ್ಕೆ ಅಕ್ಟೋಬರ್‌ 31 ಕೊನೆಯ ದಿನ. ಈ ಹಂತದಲ್ಲಿ ಸಮಸ್ಯೆ ಎದುರಾಗುತ್ತಿದೆ. ಹಾಗಾಗಿ ಇದುವರೆಗೆ ಕೇವಲ 12 ಲಕ್ಷ ಜಿಎಸ್‌ಟಿಆರ್‌–2 ರಿಟರ್ನ್ ಸಲ್ಲಿಕೆಯಾಗಿದೆ. ಎಂದು ಮಾಹಿತಿ ನೀಡಿದರು.

Post Comments (+)