ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರ್ಜಾಲ ಕಿರುಕುಳಕ್ಕೆ ಅಂಕುಶ ಬೇಕು’

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂತರ್ಜಾಲ ಕಿರುಕುಳದ ಕಾರಣದಿಂದ ಮಹಿಳೆಗೆ ನಿಜವಾಗಿಯೂ ಏನನಿಸುತ್ತದೆಯೋ ಅದನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗದಂಥ ಪರಿಸ್ಥಿತಿ ಎದುರಾಗಿದೆ. ಹಾಗೊಮ್ಮೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಅವಳಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ’ ಎಂದು ಮಲಯಾಳಂ ಸುದ್ದಿವಾಹಿನಿಯ ನಿರೂಪಕಿ ಸಿಂಧು ಎಸ್‌. ಅಭಿಪ್ರಾಯಪಟ್ಟರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಸ್ಪೀಕ್‌ ಔಟ್‌’ ವೇದಿಕೆಯಲ್ಲಿ ‘ಸುಮ್ಮನಿರಿ – ಇದು ಟ್ರೋಲ್‌ಗಳ ಜಮಾನ’  ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಅಂತರ್ಜಾಲದಲ್ಲಿ ಪತ್ರಕರ್ತೆಯರನ್ನೇ ಹೆಚ್ಚಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ. ಹೀಗೆ ಮಹಿಳೆಯ ಮೇಲೆ ಮಾನಸಿಕವಾಗಿ ನಡೆಸುವ ಕಿರುಕುಳವನ್ನು ನಿರ್ಬಂಧಿಸುವ ಕಠಿಣ ಕಾನೂನು ನಮ್ಮಲ್ಲಿನ್ನೂ ಇಲ್ಲ. ಇಂಥ ಕಿರುಕುಳದಿಂದ ಮಹಿಳೆಯನ್ನು ರಕ್ಷಿಸಲು ಹೊಸದೊಂದು ದಾರಿಯನ್ನು ಕಂಡುಕೊಳ್ಳುವತ್ತ ಗಂಭೀರವಾಗಿ ಯೋಚಿಸಬೇಕಿದೆ’ ಎಂದು ಹೇಳಿದರು.

ಸಿಂಧು ಅವರೊಂದಿಗೆ ಎನ್‌.ಡಿ.ಟಿ.ವಿ. ವಾಹಿನಿಯ ನಿಧಿ ರಾಜ್ದಾನ್‌ ಮತ್ತು ಹಿರಿಯ ಪತ್ರಕರ್ತೆಯರಾದ ಅಮ್ಮು ಜೋಸೆಫ್‌ ಮತ್ತು ಲಕ್ಷ್ಮೀ ಮೂರ್ತಿ ಗೋಷ್ಠಿಯಲ್ಲಿ ಪಾಲ್ಗೊಂಡು ಪತ್ರಕರ್ತೆಯರ ಮೇಲೆ ಅಂತರ್ಜಾಲದಲ್ಲಿ ನಡೆಯುತ್ತಿರುವ ಕಿರುಕುಳದ ವಿವಿಧ ಆಯಾಮಗಳ ಕುರಿತು ಚರ್ಚಿಸಿದರು.

‘ಅಂತರ್ಜಾಲ ಕಿರುಕುಳ ಎನ್ನುವುದು ತುಂಬ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ನಡೆಯುತ್ತದೆ. ನೀವು ಕೇವಲ ಬಲಪಂಥೀಯ ಟ್ರೋಲ್‌ಗಳ ಬಗ್ಗೆ ಮಾತ್ರ ಮಾತನಾಡುತ್ತೀರಿ ಕಾಂಗ್ರೆಸ್‌ ಟ್ರೋಲ್‌ಗಳನ್ನೂ ಟೀಕಿಸಿ ಎಂದು ಹಲವರು ನನಗೆ ಹೇಳುತ್ತಾರೆ. ಬಲಪಂಥೀಯ ಟ್ರೋಲ್‌ಗಳಿಗೂ ಕಾಂಗ್ರೆಸ್‌ ಟ್ರೋಲ್‌ಗಳಿಗೂ ವ್ಯತ್ಯಾಸವಿದೆ. ಕಾಂಗ್ರೆಸ್‌ ಟ್ರೋಲ್‌ಗಳು ಅನಾಮಿಕರಿಂದ ನಡೆಯುತ್ತವೆ. ಅವು ಮೂರ್ಖತನದಿಂದ ಕೂಡಿರುತ್ತದೆ. ಆದರೆ ಬಲಪಂಥೀಯ ಟ್ರೋಲ್‌ಗಳು ನಿಂದನಾತ್ಮಕವಾಗಿರುತ್ತದೆ ಮತ್ತು ಬೆದರಿಕೆ ಹಾಕುವ ರೀತಿಯಲ್ಲಿ ಇರುತ್ತವೆ’ ಎಂದು ನಿಧಿ ರಾಜ್ದಾನ್‌ ಹೇಳಿದರು.

‘ಅಂತರ್ಜಾಲದಲ್ಲಿ ಮಹಿಳೆಯ ಮೇಲೆ ಮಾತ್ರವಲ್ಲ, ಪುರುಷರ ಮೇಲೂ ದಾಳಿ ನಡೆಯುತ್ತದೆ. ಆದರೆ ಮಹಿಳೆಯ ಮೇಲೆ ನಡೆಯುವ ದಾಳಿಯ ಸ್ವರೂಪ ತುಂಬ ಬೇರೆಯಾದದ್ದು. ಅಂತರ್ಜಾಲದಲ್ಲಿ ಮಾತ್ರವಲ್ಲ, ಸಮಾಜದಲ್ಲಿಯೂ ಪರಿಸ್ಥಿತಿ ಹಾಗೆಯೇ ಇದೆ’ ಎಂದರು ಲಕ್ಷ್ಮೀ ಮೂರ್ತಿ.  ‘ಇಂದು ಭಾರತದಲ್ಲಿ ಟ್ರೋಲ್‌ ಮಾಡುವುದು ಒಂದು ವೃತ್ತಿಯಾಗಿದೆ. ಅಂತರ್ಜಾಲದಲ್ಲಿ ಮಹಿಳೆಯರನ್ನು ಟ್ರೋಲ್‌ ಮಾಡುವುದಕ್ಕಾಗಿ ಹಣವನ್ನೂ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT