ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ್‌, ಯಶವಂತ್‌ಗೆ ಚಿನ್ನದ ಪದಕ

ಮಹಾರಾಷ್ಟ್ರದ ಸೈಕ್ಲಿಸ್ಟ್‌ಗಳ ಪಾರಮ್ಯ
Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಜಮಖಂಡಿ: ‌ಕರ್ನಾಟಕದ ನವೀನ್ ಜಾನ್ ಮತ್ತು ಯಶವಂತ ಬಿರಾದರ ಶನಿವಾರ ಇಲ್ಲಿ ಆರಂಭವಾದ 22ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದರು.

ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್ ಆಶ್ರಯದಲ್ಲಿ ಆರಂಭವಾದ ಸ್ಪರ್ಧೆಯ ಪುರುಷರ 40 ಕಿ.ಮೀ ವೈಯಕ್ತಿಕ ವಿಭಾಗದಲ್ಲಿ ನವೀನ್ ಮತ್ತು ಬಾಲಕರ ವಿಭಾಗದ 10 ಕಿ.ಮೀ ಸ್ಪರ್ಧೆಯಲ್ಲಿ ಯಶವಂತ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಮಹಿಳೆಯರ 30 ಕಿ.ಮೀ ಎಲೈಟ್‌ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಪುಣೆಯ ರುತುಜಾ ಸಾತಪುತೆ ಮಹಾರಾಷ್ಟ್ರ ತಂಡಕ್ಕೆ ಮೊದಲ ಚಿನ್ನದ ಪದಕ ತಂದಿತ್ತರು. ಅವರಿಗೆ ತೀವ್ರ ಪೈಪೋಟಿ ನೀಡಿದ ಬೆಂಗಳೂರಿನ ಸಮೀರಾ ಅಬ್ರಹಾಂ 16 ಸೆಕೆಂಡ್‌ಗಳ ಅಂತರದಲ್ಲಿ ಹಿಂದುಳಿದರು.

2014ರಲ್ಲಿ ಇಲ್ಲಿ  ನಡೆದಿದ್ದ ರಾಷ್ಟ್ರೀಯ ಕೂಟದಲ್ಲಿ ರುತುಜಾ ಬೆಳ್ಳಿ ಪದಕ ಪಡೆದಿದ್ದರು. ರುತುಜಾ  ಫೆಬ್ರುವರಿಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ ಸಿದ್ಧತೆಗಾಗಿ ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತಂಡದ ತರಬೇತಿ ಶಿಬಿರದಲ್ಲಿದ್ದಾರೆ.  ಜೂನಿಯರ್ ಬಾಲಕಿಯರ ವೈಯಕ್ತಿಕ ಸ್ಪರ್ಧೆಯಲ್ಲಿ ಮಧುರಾ ವಾಯ್ಕರ್ ಚಿನ್ನ ಮುಡಿಗೇರಿಸಿಕೊಂಡರು. ತಾಲ್ಲೂಕಿನ ಕುಲ್ಲಳ್ಳಿಯ ಮೇಘಾ ಗೂಗಡ ದ್ವಿತೀಯ ಸ್ಥಾನ ಪಡೆದರು.

ಮೊದಲ ದಿನದ ಫಲಿತಾಂಶ:

ಪುರುಷರು: ವೈಯಕ್ತಿಕ ವಿಭಾಗ:40 ಕಿ.ಮೀ: ನವೀನ್‌ ಜಾನ್ (ಕರ್ನಾಟಕ–50ನಿಮಿಷ, 41.121ಸೆಕೆಂಡು)–1, ಅರವಿಂದ್ ಪನ್ವಾರ್ (ರೈಲ್ವೇಸ್–51ನಿ.51.441ಸೆ)–2, ಮಂಜಿತ್‌ಸಿಂಗ್ (ಸರ್ವಿಸಸ್–52ನಿ.23.908ಸೆ)–3; ಜೂನಿಯರ್  ವೈಯಕ್ತಿಕ ವಿಭಾಗ (23 ವರ್ಷದೊಳಗಿನವರು): 40 ಕಿ.ಮೀ : ರಾಜ್‌ಬೀರ್‌ ಸಿಂಗ್ (ಪಂಜಾಬ್–54ನಿ,02.168ಸೆ)–1, ಅಮನ್ ಪಂಜಾನಿ (ತೆಲಂಗಾಣ–55ನಿ:30:052ಸೆ)–2, ಪುಣ್ಯಪ್ರತಾಪ್‌ ಸಿಂಗ್ (ದೆಹಲಿ–55ನಿ:36.356ಸೆ)–3, ಬಾಲಕರ ವಿಭಾಗ: 10 ಕಿ.ಮೀ: ಅಶ್ವಿನ್ ಪಟೇಲ್ (ಮಹಾರಾಷ್ಟ್ರ–39ನಿ:45.188ಸೆ)–1, ವಿಪಿನ್ ಸೈನಿ (ಹರಿಯಾಣ–40ನಿ:19.281ಸೆ)–2, ಪ್ರೇಮ್ ಮೂಂಡ್ (ರಾಜಸ್ತಾನ–40ನಿ:21.197ಸೆ)–3

ಬಾಲಕರು: 10 ಕಿ.ಮೀ ವೈಯಕ್ತಿಕ ವಿಭಾಗ: ಯಶವಂತ ಬಿರಾದಾರ (ಕರ್ನಾಟಕ–13ನಿ,52.782ಸೆ)–1, ದಿನೇಶ್ ಕಿಚರ್ (ರಾಜಸ್ತಾನ–13ನಿ,56.578ಸೆ)–2,  ಲಾಯಪ್ಪ ಮುಧೋಳ (ಕರ್ನಾಟಕ–14ನಿ,17.192ಸೆ).–3

20 ಕಿ.ಮೀ ಸಾಮಾನ್ಯ ಸೈಕಲ್‌ ರೇಸ್ ವಿಭಾಗ: ಕೃಷ್ಣ (ಗುಜರಾತ್–34ನಿ.28.00ಸೆ–1), ಹರಿಜಿತ್‌ ಸಿಂಗ್, ಸಂತೋಷ್ ಜೈಸ್ವಾಲ್ (ಇಬ್ಬರೂ ಉತ್ತರ ಪ್ರದೇಶ).

ಮಹಿಳೆಯರ ಎಲೈಟ್ ವಿಭಾಗ: 30 ಕಿ. ಮೀ:  ರುತುಜಾ ಸಾತಪುತೆ (ಮಹಾರಾಷ್ಟ್ರ–43ನಿ.32.195ಸೆ), ಸಮೀರಾ ಅಬ್ರಹಾಂ (ಕರ್ನಾಟಕ–43ನಿ 48.849ಸೆ), ಅಮೃತಾ ರಘುನಾಥ್ (ಕೇರಳ–46ನಿ, 21.948ಸೆ).

30 ಕಿ.ಮೀ: ಮಧುರಾ ವಾಯ್ಕರ್ (ಮಹಾರಾಷ್ಟ್ರ–31ನಿ:16.480ಸೆ), ಮೇಘಾ ಗೂಗಡ (ಕರ್ನಾಟಕ–31ನಿ:24.635ಸೆ), ಸಾವಿತ್ರಿ ಹೆಬ್ಬಾಲಟ್ಟಿ (ಕರ್ನಾಟಕ–31ನಿ, 32.519ಸೆ). ಯೂತ್ ಬಾಲಕಿಯರು: 10 ಕಿ.ಮೀ : ಪೂಜಾ ಧನೋಲೆ (ಮಹಾರಾಷ್ಟ್ರ–16ನಿ:08.268ಸೆ), ಅಂಕಿತಾ ರಾಠೋಡ್ (ಕರ್ನಾಟಕ–16ನಿ:11.043ಸೆ), ಕೆ.ಸ್ನೇಹಾ (ಕೇರಳ–16ನಿ:38.659ಸೆ).

₹6.5 ಲಕ್ಷ ಮೊತ್ತದ ಸೈಕಲ್‌!

ಜಮಖಂಡಿ: ‌ಅತಿಥೇಯರಿಗೆ ಮೊದಲ ಚಿನ್ನದ ಪದಕ ತಂದುಕೊಟ್ಟ ನವೀನ್‌ ಜಾನ್ ಅಮೆರಿಕಾದಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಮುಗಿಸಿದ್ದಾರೆ. ನವೀನ್ ಪೋಷಕರು ಮೂಲತಃ ಕೇರಳದವರಾದರೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿರುವ ನವೀನ್‌ಜಾನ್‌ ಅದಕ್ಕಾಗಿ ಬೆಲ್ಜಿಯಂನಲ್ಲಿ ಸೈಕ್ಲಿಂಗ್ ತರಬೇತಿ ಪಡೆದು ಬಂದಿದ್ದಾರೆ. ಈ ಟೂರ್ನಿಯಲ್ಲಿ ಹೆಚ್ಚು ಪದಕ ಪಡೆದು ಕನಸು ಮಾಡಿಕೊಳ್ಳುವೆ ಎಂದು ‘ಪ್ರಜಾವಾಣಿ’ಯೊಂದಿಗೆ ಸಂಭ್ರಮ ಹಂಚಿಕೊಂಡರು. ₹6.5 ಲಕ್ಷ ಮೊತ್ತದ ಅತ್ಯಾಧುನಿಕ ರಿಡ್ಲಿ ಸೈಕಲ್‌ನೊಂದಿಗೆ ಪೈಪೋಟಿಗೆ ಇಳಿದಿದ್ದ ಜಾನ್ ಎಲ್ಲರ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT