ರಣಜಿ: ನಿಶ್ಚಲ್‌, ರೋನಿತ್‌ಗೆ ಅವಕಾಶ

ಸೋಮವಾರ, ಜೂನ್ 17, 2019
27 °C

ರಣಜಿ: ನಿಶ್ಚಲ್‌, ರೋನಿತ್‌ಗೆ ಅವಕಾಶ

Published:
Updated:

ಬೆಂಗಳೂರು: ಮಹಾರಾಷ್ಟ್ರ ಎದುರಿನ ರಣಜಿ ಟ್ರೋಫಿ ಪಂದ್ಯಕ್ಕೆ ಶನಿವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ಡಿ.ನಿಶ್ಚಲ್‌ ಮತ್ತು ರೋನಿತ್‌ ಮೋರೆ ಅವರು 15 ಸದಸ್ಯರ ಬಳಗದಲ್ಲಿ ಸ್ಥಾನ ಗಳಿಸಿದ್ದಾರೆ. ಅಭಿಷೇಕ್‌ ರೆಡ್ಡಿ, ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ರಾಜ್ಯ ತಂಡವನ್ನು ಮುನ್ನಡೆಸುತ್ತಿರುವ ಕಾರಣ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಶಿವಮೊಗ್ಗದಲ್ಲಿ ನಡೆದ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಕೆ.ಎಲ್‌.ರಾಹುಲ್‌ ಕೂಡ ತಂಡದಲ್ಲಿಲ್ಲ. ಮಹಾರಾಷ್ಟ್ರ ಎದುರಿನ ಪಂದ್ಯ ನವೆಂಬರ್‌ 1ರಿಂದ 4ರವರೆಗೆ ಪುಣೆಯಲ್ಲಿ ಜರುಗಲಿದೆ.

ತಂಡ ಇಂತಿದೆ: ಆರ್‌.ವಿನಯ್‌ ಕುಮಾರ್‌ (ನಾಯಕ), ಆರ್‌.ಸಮರ್ಥ್‌, ಕರುಣ್‌ ನಾಯರ್‌, ಮಯಂಕ್‌ ಅಗರವಾಲ್‌, ಮಿರ್‌ ಕೌನೇನ್‌ ಅಬ್ಬಾಸ್‌, ಪವನ್‌ ದೇಶಪಾಂಡೆ, ಸಿ.ಎಂ.ಗೌತಮ್‌ (ವಿಕೆಟ್ ಕೀಪರ್‌), ಸ್ಟುವರ್ಟ್‌ ಬಿನ್ನಿ, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌, ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ಡಿ.ನಿಶ್ಚಲ್‌ ಮತ್ತು ರೋನಿತ್‌ ಮೋರೆ. ಮುಖ್ಯ ಕೋಚ್‌: ಪಿ.ವಿ.ಶಶಿಕಾಂತ್‌, ಸಹಾಯಕ ಕೋಚ್‌: ಜಿ.ಕೆ.ಅನಿಲ್‌ ಕುಮಾರ್‌.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry