ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಧಿಕಾರಿ ಪದವಿಯಿಂದ ಸ್ವಾಮೀಜಿ ವಜಾ

* ಲೈಂಗಿಕ ಹಗರಣದ ಆರೋಪ ಎದುರಿಸುತ್ತಿರುವ ದಯಾನಂದ ಸ್ವಾಮೀಜಿ * ಮಠದ ಬಿಕ್ಕಟ್ಟು ಬಗೆಹರಿಸಲು ಸಮಿತಿ ರಚನೆ
Last Updated 28 ಅಕ್ಟೋಬರ್ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಸಮೀಪದ ಹುಣಸಮಾರನಹಳ್ಳಿಯ ಜಂಗಮ ಮಠದ ಉತ್ತಾರಾಧಿಕಾರಿ ಪದವಿಯಿಂದ ದಯಾನಂದ ಸ್ವಾಮೀಜಿ ಅವರನ್ನು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಶನಿವಾರ ವಜಾಗೊಳಿಸಿದರು. ಮಠದ ಬಿಕ್ಕಟ್ಟು ಬಗೆಹರಿಸಲು ಒಂಬತ್ತು ಮಂದಿಯ ಸಮಿತಿ ರಚಿಸಿದ್ದಾರೆ.

ಮಧ್ಯಾಹ್ನ 12ಗಂಟೆ ಸುಮಾರಿಗೆ ಮಠಕ್ಕೆ ಬಂದ ಜಗದ್ಗುರುಗಳು, ವಿವಾದಿತ ಸ್ವಾಮೀಜಿ ದಯಾನಂದ ಅವರ ಸಂಬಂಧಿಕರು ಹಾಗೂ ಟ್ರಸ್ಟಿಗಳ ಜತೆ ಒಂದೂವರೆ ತಾಸು ಚರ್ಚೆ ನಡೆಸಿದರು. ಆ ನಂತರ ಅವರನ್ನು ಉತ್ತರಾಧಿಕಾರಿ ಪಟ್ಟದಿಂದ ಕೆಳಗಿಳಿಸಿರುವ ನಿರ್ಧಾರ ಪ್ರಕಟಿಸಿದರು.

ಪ್ರತಿಭಟನೆ: ದಯಾನಂದ ಸ್ವಾಮೀಜಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ರಕ್ಷಣಾ ವೇದಿಕೆ, ಬಹುಜನ ಸಮಾಜವಾದಿ ಪಕ್ಷ, ಪ್ರಜಾ ವಿಮೋಚನಾ ಚಳವಳಿ ಸಂಘಟನೆಗಳ ಕಾರ್ಯಕರ್ತರು ಮಠದ ಬಳಿ ಪ್ರತಿಭಟನೆ
ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT