ಗುಜರಾತ್‌ಗೆ ಚಿರತೆಗಳು

ಭಾನುವಾರ, ಮೇ 26, 2019
32 °C

ಗುಜರಾತ್‌ಗೆ ಚಿರತೆಗಳು

Published:
Updated:
ಗುಜರಾತ್‌ಗೆ ಚಿರತೆಗಳು

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ 12 ಚಿರತೆಗಳನ್ನು ಗುಜರಾತ್‌ನ ಅಹಮದಾಬಾದ್ ಹಾಗೂ ಬೆಂಗಳೂರು ಸಮೀಪದ ಬನ್ನೇರುಘಟ್ಟಕ್ಕೆ ಕಳುಹಿಸಲಾಗುತ್ತಿದೆ.

ಸಿಂಹಧಾಮದಲ್ಲಿ 6 ಮರಿಗಳು ಒಳಗೊಂಡಂತೆ ಪ್ರಸ್ತುತ 26 ಚಿರತೆಗಳಿವೆ. ಅವುಗಳಲ್ಲಿ 6 ಚಿರತೆಗಳನ್ನು ಅಹಮದಾಬಾದ್‌ನ ಕಮಲಾ ನೆಹರೂ ಜೈವಿಕ ಉದ್ಯಾನಕ್ಕೆ ಹಾಗೂ ಅಷ್ಟೇ ಸಂಖ್ಯೆಯ ಚಿರತೆಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಕಳುಹಿಸಲಾಗುತ್ತಿದೆ.

ಮೊದಲು 18 ಚಿರತೆಗಳನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಮೈಸೂರು ಸಮೀಪದ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕಿತ್ತು. ಆದರೆ, ಅಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಸದ್ಯ ಎರಡು ಉದ್ಯಾನಗಳಿಗೆ 12 ಚಿರತೆ ಕಳುಹಿಸಲಾಗುತ್ತಿದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry