ಇಂದಿರಾ ಕ್ಯಾಂಟೀನ್‌ ನವೆಂಬರ್‌ನಲ್ಲಿ ಆರಂಭ

ಗುರುವಾರ , ಜೂನ್ 20, 2019
26 °C

ಇಂದಿರಾ ಕ್ಯಾಂಟೀನ್‌ ನವೆಂಬರ್‌ನಲ್ಲಿ ಆರಂಭ

Published:
Updated:
ಇಂದಿರಾ ಕ್ಯಾಂಟೀನ್‌ ನವೆಂಬರ್‌ನಲ್ಲಿ ಆರಂಭ

ಆನೇಕಲ್‌: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ಸ್ಥಾಪನೆ ಮಾಡುವ ಸಲುವಾಗಿ ತಾಲ್ಲೂಕು ಕಚೇರಿ ಆವರಣದಲ್ಲಿ ಶಾಸಕ ಬಿ.ಶಿವಣ್ಣ ಸ್ಥಳ ಪರಿಶೀಲನೆ ನಡೆಸಿದರು.

ಆನೇಕಲ್‌ಗೆ ಕ್ಯಾಂಟೀನ್ ಮಂಜೂರಾಗಿದ್ದು ಕೇಂದ್ರ ಭಾಗದಲ್ಲಿ ಪ್ರಾರಂಭ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ ಎಂದರು.

ಸರ್ಕಾರ ಬೆಂಗಳೂರಿನಲ್ಲಿ ಪ್ರಾರಂಭಿಸಿರುವ  ಕ್ಯಾಂಟೀನ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಆನೇಕಲ್‌ನಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗುವುದು. ನವೆಂಬರ್ ಅಂತ್ಯದೊಳಗೆ ಕ್ಯಾಂಟೀನ್‌ ಪಟ್ಟಣದಲ್ಲಿ ಪ್ರಾರಂಭಿಸಲಾಗುವುದು ಎಂದು ಶಾಸಕರು ತಿಳಿಸಿದರು.

ತಹಶೀಲ್ದಾರ್ ಆಶಾ ಪರ್ವೀನ್‌, ಪುರಸಭಾ ಅಧ್ಯಕ್ಷ ಲಕ್ಷ್ಮೀಕಾಂತರಾಜು, ಉಪಾಧ್ಯಕ್ಷೆ ಹೇಮಲತಾ ಸುರೇಶ್, ಸದಸ್ಯರಾದ ಎನ್.ಎಸ್‌.ಪದ್ಮನಾಭ, ಮಲ್ಲಿಕಾರ್ಜುನ್‌, ಮುಖ್ಯಾಧಿಕಾರಿ ಸತ್ಯನಾರಾಯಣ, ಮುಖಂಡರಾದ ಗೋಪಾಲರೆಡ್ಡಿ, ಬಳ್ಳೂರು ನಾರಾಯಣಸ್ವಾಮಿ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry