ಸಿರಿ ಧಾನ್ಯ ಕಣಜ ಈ ಹೊಲ

ಶುಕ್ರವಾರ, ಮೇ 24, 2019
33 °C

ಸಿರಿ ಧಾನ್ಯ ಕಣಜ ಈ ಹೊಲ

Published:
Updated:
ಸಿರಿ ಧಾನ್ಯ ಕಣಜ ಈ ಹೊಲ

ತಾಲ್ಲೂಕಿನ ಹಲವು ರೈತರು ನೈಸರ್ಗಿಕ ಕೃಷಿಯತ್ತ ಗಮನ ಹರಿಸಿದ್ದು, ಲಕ್ಷ್ಮೀಪುರದ ರೈತ ಎ.ಎಂ. ತೋಟಯ್ಯ ಮಳೆಯಾಶ್ರಿತ ಜಮೀನಿನಲ್ಲಿ ಈ ಪದ್ಧತಿಯಲ್ಲೇ ಸಿರಿಧಾನ್ಯ ಬೆಳೆದಿರುವುದು ವಿಶೇಷ. ಅವರ ಹೊಲ ಹೊಲ ಸಿರಿ ಧಾನ್ಯಗಳ ಕಣಜದಂತೆ ಕಾಣುತ್ತದೆ.

ತಮ್ಮ ಒಂದೂ ಕಾಲು ಎಕರೆ ಪ್ರದೇಶದಲ್ಲಿ ಅವರು ಆರ್ಕ, ನವಣೆ, ಸಾಮೆ, ಊದಲು ಹಾಗೂ ಕೊರ್ಲೆ ಬೆಳೆಯನ್ನು ಬೆಳೆದಿದ್ದಾರೆ. ತಾಲ್ಲೂಕಿನಲ್ಲಿ ಸಜ್ಜೆ, ನವಣೆ, ರಾಗಿ ಬೆಳೆಯುವ ರೈತರಿದ್ದರೂ, ಆರ್ಕ, ಸಾಮೆ, ಊದಲು ಹಾಗೂ ಕೊರ್ಲೆ ಬೆಳೆಯನ್ನು ಈ ಭಾಗಕ್ಕೆ ಹೊಸದಾಗಿ ಪರಿಚಯಿಸಲಾಗಿದೆ.

ತಮ್ಮ ಹೊಸ ಪ್ರಯತ್ನದ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ತೋಟಯ್ಯ ಹಾಗೂ ಅವರ ಮಗ ಎ.ಎಂ. ಕುಮಾರಸ್ವಾಮಿ, ಸುಭಾಷ್ ಪಾಳೇ

ಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಹಾಗೂ ಕಾಡುಕೃಷಿ ಹರಿಕಾರ ಡಾ. ಖಾದರ್ ಅವರ ಮಾತುಗಳ ಪ್ರಭಾವವನ್ನು ಸ್ಮರಿಸಿದರು. ‘ಸಿರಿ ಧಾನ್ಯಗಳಿಗೆ ಇತ್ತೀಚೆಗಿನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿರುವುದೂ ನಮ್ಮ ಪ್ರಯತ್ನಕ್ಕೆ ಪ್ರೇರಣೆ’ ಎಂದರು.

‘ನಾವು ದೇಶಿ ಬೀಜಗಳನ್ನು ಬಳಸಿ ಬಿತ್ತಿದ್ದೇವೆ. ಯಾವುದೇ ರಸಾಯನಿಕ ಗೊಬ್ಬರ, ಕೀಟನಾಶಕದ ಬದಲು ಕೊಟ್ಟಿಗೆ ಗೊಬ್ಬರ ಬಳಸಿದ್ದೇವೆ. ಪ್ರತಿ 15 ದಿನಕ್ಕೊಮ್ಮೆ ಜೀವಾಮೃತ ಸಿಂಪರಣೆ ಮಾಡುತ್ತೇವೆ. ಮಣ್ಣಲ್ಲಿ ತೇವಾಂಶವನ್ನು ಕಾಪಾಡಲು ‘ಮಲ್ಚಿಂಗ್’(ಬೆಳೆಯ ಸಾಲಿನ ಮಧ್ಯೆ ಜಾಗದ ಮಣ್ಣಿನ ಮೇಲೆ ಸೊಪ್ಪೆ, ದಂಡು, ಕಳೆ ಹಾಕಿ ಹೊದಿಕೆ ರೀತಿ ಮುಚ್ಚುವುದು) ಪದ್ಧತಿ ಅಳವಡಿಸಿದ್ದೇವೆ’ ಎಂದರು.

‘ಇಲಾಖೆ ಸೂಚಿಸುವ ತಂತ್ರಜ್ಞಾನ ಅಳವಡಿಸಿಕೊಂಡು ಸಿರಿ ಧಾನ್ಯ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ ₹1 ಸಾವಿರ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಚೋರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry