ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಅಘಲಯದ ದೊಡ್ಡಕೆರೆಗೆ ಬಾಗಿನ ಅರ್ಪಣೆ

Published:
Updated:
ಅಘಲಯದ ದೊಡ್ಡಕೆರೆಗೆ ಬಾಗಿನ ಅರ್ಪಣೆ

ಕೆ.ಆರ್.ಪೇಟೆ: ತಾಲ್ಲೂಕಿನ ದೊಡ್ಡಕೆರೆಗಳಲ್ಲಿ ಒಂದಾದ ಅಘಲಯದ ಕೆರೆಯು 10 ವರ್ಷಗಳ ನಂತರ ಭರ್ತಿಯಾದ ಕಾರಣ ಗ್ರಾಮಸ್ಥರು ಈಚೆಗೆ ಸಡಗರದಿಂದ ಗಂಗಾಪೂಜೆ ನೆರವೇರಸಿ ಬಾಗಿನ ಅರ್ಪಿಸಿದರು.

ಗ್ರಾಮದಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರು ಮತ್ತು ಮಹಿಳೆಯರು ಕೆರೆಯ ಬಳಿಗೆ ಬಂದು ಸಾಂಪ್ರದಾಯಕ ಪೂಜೆ ನೆರವೇರಿಸಿ ಕೆರೆಗೆ ಬಾಗಿನ ಅರ್ಪಿಸಿ ಜಯಘೋಷ ಹಾಕಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎಸ್.ರಮೇಶ್, ನಿವೃತ್ತ ಶಿಕ್ಷಕ ನಂಜಪ್ಪ , ಗ್ರಾಮದ ಮುಖಂಡರಾದ ಬೋರೇಗೌಡ, ಕಾಳೇಗೌಡ, ಎ.ಎಲ್.ನಂಜಪ್ಪ, ಕೆ.ಸಿದ್ದೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಇದ್ದರು.

Post Comments (+)