ಭತ್ತ ಬೆಳೆಗೆ ಕೆಂಪು ರೋಗದ ಬಾಧೆ

ಸೋಮವಾರ, ಜೂನ್ 24, 2019
29 °C

ಭತ್ತ ಬೆಳೆಗೆ ಕೆಂಪು ರೋಗದ ಬಾಧೆ

Published:
Updated:

ಕಕ್ಕೇರಾ: ಪಟ್ಟಣದಲ್ಲಿ ಕಳೆದ 15 ದಿನಗಳಿಂದ ಹಿಂದೆ ಸುರಿದ ನಿರಂತರ ಮಳೆಯಿಂದಾಗಿ ಭತ್ತದ ಬೆಳೆಗೆ ರೋಗ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಟ್ಟಣದ ಸಮೀಪದ ತಿಂಥಣಿ, ದೇವಾಪುರ, ಅರಳಹಳ್ಳಿ, ಜುಮ್ಮಾರ ಕ್ಯಾಂಪ್, ಮಂಜಲಾಪುರ, ರಾಯಗೇರಾ, ಚನ್ನಪಟ್ಟಣ, ಬನದೊಡ್ಡಿ, ಹೊಸೂರು, ಗೆದ್ದಲಮರಿ, ಬಲಶೆಟ್ಟಿಹಾಳ, ಕುಪ್ಪಿ, ದ್ಯಾಮನಾಳ ಸೇರಿದಂತೆ ಹಲವು ಕಡೆ ಭತ್ತ ಬೆಳೆಗೆ ಕೆಂಪು ರೋಗ ಕಾಣಿಸಿಕೊಂಡಿದೆ. ಅಲ್ಲದೇ ಕೀಟಗಳ ಹಾವಳಿ ಹೆಚ್ಚಿದೆ. ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಸಲಹೆ ಸೂಚನೆ ನೀಡದೇ ಇರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಕಕ್ಕೇರಾ ಪಟ್ಟಣ ವ್ಯಾಪ್ತಿಯಲ್ಲಿ 38,000 ಎಕರೆ ಕೃಷಿ ಭೂಮಿಯಿದ್ದು, 40 ಹಳ್ಳಿಗಳಿಗೆ ಒಬ್ಬನೇ ಕೃಷಿ ಅಧಿಕಾರಿ ಇರುವುದರಿಂದ ಮಂಜಲಾಪುರ, ಗೆದ್ದಲಮರಿ ಸೇರಿದಂತೆ ಕೆಲ ಕಡೆ ತೆರಳಿ ಔಷಧಿ ಹಾಗೂ ಕ್ರಿಮಿನಾಶಕ ಸಿಂಪಡಿಸಲು ಸಲಹೆ ನೀಡಿದ್ದಾರೆ. ‘ ಒಬ್ಬರೇ ಕೃಷಿ ಅಧಿಕಾರಿ ಪಟ್ಟಣದ ವ್ಯಾಪ್ತಿಯ ಎಲ್ಲ ಕಡೆಗೆ ತೆರಳಿ ಸಲಹೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಕೃಷಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಶೇಂಗಾ, ಹತ್ತಿ, ಸಜ್ಜೆ, ತೊಗರಿ ಬೆಳೆಗಳು ಮಳೆಯಿಂದ ಹಾನಿಗೊಂಡಿದ್ದರೂ ಯಾವೊಬ್ಬ ಅಧಿಕಾರಿಗಳೂ ರೈತರ ಬಳಿ ಸುಳಿದಿಲ್ಲ. ರೋಗಬಾಧೆ ಬೆಳೆಗಳಿಗೆ ಯಾವ ಗೊಬ್ಬರ ಹಾಗೂ ಔಷಧಿ ಸಿಂಪಡಿಸುವ ಬಗ್ಗೆ ಮಾಹಿತಿ ನೀಡಿಲ್ಲ ಕಕ್ಕೇರಾದ ಹಣಮಂತ ಮರಗಮ್ಮ ಪೂಜಾರಿ ಅಳಲು ತೋಡಿಕೊಂಡರು.

ಮೊದಲು ಒಂದು ಎಕರೆ ಜಮೀನಿನಲ್ಲಿ 12 ಚೀಲ ಸಜ್ಜೆ ಬೆಳೆಯುತ್ತಿದ್ದೆವು. ಈ ಬಾರಿ 2 ಎಕರೆಗೆ ಬಂದ ಬೆಳೆ ಕೇವಲ 3 ಚೀಲ ಬೆಳೆ ಬಂದಿರುವುದು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಬೆಳೆಗಾಗಿ ಸಾಲ ಮಾಡಿಕೊಂಡಿದ್ದು, ಈಗ ನಮಗೆ ದಿಕ್ಕು ತೋಚದಂತಾಗಿದೆ’ ಎಂದು ಹಾಳಮಡ್ಡಿಯ ರೈತ ಜಕ್ಕಪ್ಪ ನೋವಿನಿಂದ ನುಡಿದರು.

ಮಹಾಂತೇಶ ಸಿ, ಹೊಗರಿ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry