ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 30, 2017

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

1) ಅಬ್ದುಲ್ ಹಮೀದ್ ಲಾಹೋರಿ ಅವರು ಮೊಘಲ್‌ ಸಾಮ್ರಾಜ್ಯದ ದೊರೆ ಷಹಜಹಾನ್‌ ಆಸ್ಥಾನದಲ್ಲಿ ಏನಾಗಿದ್ದರು?
a) ಸಾಹಿತಿ b) ಮಂತ್ರಿ  c) ರಾಜಕೀಯ ಇತಿಹಾಸಕಾರ d) ವೈದ್ಯ

2) ಈ ಕೆಳಕಂಡ ಯಾವ ದೇಶಗಳ ಮೂಲಕ ಭೂಮಧ್ಯೆ ರೇಖೆ ಹಾದು ಹೋಗಿದೆ?
a) ಕೊಲಂಬಿಯಾ b) ಇಂಡೋನೇಷ್ಯಾ c) ಕೀನ್ಯಾ d) ಮೇಲಿನ ಎಲ್ಲವೂ

3) 1878ರಲ್ಲಿ ಪ್ರಾದೇಶಿಕ ಭಾಷೆಗಳ ಪತ್ರಿಕಾ ಕಾಯ್ದೆಯನ್ನು ಯಾರು ಜಾರಿಗೆ ತಂದರು? 
a) ಲಾರ್ಡ್ ಲಿಟ್ಟನ್ b) ಲಾರ್ಡ್ ರಿಪ್ಪನ್‌ c) ಲಾರ್ಡ್ ಡಾಲ್‌ಹೌಸಿ d) ಲಾರ್ಡ್ ವೆಲ್ಲೆಸ್ಲಿ

4) 2003ರಲ್ಲಿ ಮಾಡಿದ 91ನೇ ಸಂವಿಧಾನ ತಿದ್ದುಪಡಿ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿಮಂಡಲದಲ್ಲಿ ಸಚಿವರ ಸಂಖ್ಯೆ ಶೇಕಡ ಎಷ್ಟು ಇರಬೇಕು?
a) ಶೇ. 10 b) ಶೇ. 15 c) ಶೇ. 20 d) ಶೇ. 25

5)  ಕಪಿಲೇಂದ್ರ ರಾಜವಂಶ ಈ ಕೆಳಕಂಡ ಯಾವ ರಾಜ್ಯದಲ್ಲಿ ಆಳ್ವಿಕೆ ನಡೆಸಿತ್ತು? 
a) ಕರ್ನಾಟಕ b) ಕಾಶ್ಮೀರ c) ಒಡಿಶಾ d) ಗೋವಾ

6) ಸ್ವಾತಂತ್ರ್ಯಪೂರ್ವದ ಕಾನೂನು ಭಂಗ ಚಳವಳಿ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಬ್ರಿಟಿಷರ ಯಾವ ನಿಯಮಗಳನ್ನು ಮುರಿಯಲಾಯಿತು?
a) ಭೂ ಹಿಡುವಳಿ ನಿಯಮಗಳು b) ಪೊಲೀಸ್‌ ನಿಯಮಗಳು c) ಅರಣ್ಯ ನಿಯಮಗಳು d) ಸಾರಿಗೆ ನಿಯಮಗಳು

7)ಈ ಕೆಳಕಂಡ ಯಾವ ದಿನದಂದು ಕೊಂಕಣ ರೈಲ್ವೆಯನ್ನು ದೇಶಕ್ಕೆ ಸಮರ್ಪಿಸಲಾಯಿತು? 
a) 2000 ಜನವರಿ 14 b) 2000 ಜನವರಿ 26 c) 2001 ಜನವರಿ 14 d) 2001 ಜನವರಿ 26

8)1983ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗಾಗಿ ಕೇಂದ್ರ ಸರ್ಕಾರ ರಚಿಸಿದ ಆಯೋಗ ಯಾವುದು?
a) ಸರ್ಕಾರಿಯಾ ಆಯೋಗ b)  ಬಲವಂತರಾಯ್ ಮೆಹ್ತಾ  ಆಯೋಗ c) ಸದಾಶಿವ ಆಯೋಗ d) ಬಿ. ಎನ್. ಶ್ರೀಕೃಷ್ಣ ಆಯೋಗ

9) ಶಬ್ದಮಣಿದರ್ಪಣದ ಕರ್ತೃ ಕೇಶಿರಾಜನ ಪ್ರಕಾರ ಈ ಕೆಳಗಿನ ಯಾವ ವಿಭಕ್ತಿ ಪ್ರತ್ಯಯ ಇಲ್ಲ?
a) ಪ್ರಥಮ b) ಸಪ್ತಮಿ c) ಪಂಚಮಿ d) ಷಷ್ಠಿ‌

10) ಮುರ್ರಾ ಎಮ್ಮೆ ತಳಿಯು ಭಾರತದ ಯಾವ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ?  
a) ವಾಯವ್ಯ ಪ್ರಾಂತ್ಯ b) ಈಶಾನ್ಯ ಪ್ರಾಂತ್ಯ c) ನೈಋತ್ಯ  ಪ್ರಾಂತ್ಯ d) ಆಗ್ನೇಯ ಪ್ರಾಂತ್ಯ

ಉತ್ತರಗಳು 1-c, 2-d, 3- a, 4-b, 5-c, 6-c, 7-b, 8-a, 9-c, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT