3

ನಾಯಕ ಕೊಹ್ಲಿ ಮತ್ತೊಂದು ದಾಖಲೆ: ವೇಗದ 9ಸಾವಿರ ರನ್‌ ಗಳಿಸಿದ ಸಾಧನೆ

Published:
Updated:
ನಾಯಕ ಕೊಹ್ಲಿ ಮತ್ತೊಂದು ದಾಖಲೆ: ವೇಗದ 9ಸಾವಿರ ರನ್‌ ಗಳಿಸಿದ ಸಾಧನೆ

ಕಾನ್ಪುರ: ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ 9 ಸಾವಿರ ರನ್‌ ಕಲೆ ಹಾಕಿದ ಸಾಧನೆ ಮಾಡಿದ್ದಾರೆ.

ಈ ಮೂಲಕ ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.

ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ತಂಡದ ಎಬಿ ಡಿ ವಿಲಿಯರ್ಸ್‌ ಈ ದಾಖಲೆ ಹೊಂದಿದ್ದರು. ಇದಕ್ಕಾಗಿ ಅವರು 205 ಇನಿಂಗ್ಸ್‌ಗಳನ್ನು ಆಡಿದ್ದರು. ಸದ್ಯ ವಿರಾಟ್‌ ಕೇವಲ 194 ಇನಿಂಗ್ಸ್‌ ಗಳಲ್ಲಿ ಇಷ್ಟು ರನ್‌ ಗಳಿಸಿದ್ದು, ವಿಲಿಯರ್ಸ್‌ ದಾಖಲೆಯನ್ನು ಮುರಿದಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry