ಗುರುವಾರ, 28 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಬೆಸೆದ ಶಂಕರಾಚಾರ್ಯರು: ಶಂಕರರ ಕೊಡುಗೆ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ

Last Updated 29 ಅಕ್ಟೋಬರ್ 2017, 18:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಅಧ್ಯಾತ್ಮ ಚಿಂತನೆಯು ಇಡೀ ವಿಶ್ವವನ್ನು ಒಂದು ಕುಟುಂಬ ಎಂದುಕೊಳ್ಳುತ್ತದೆ. ಇಡೀ ವಿಶ್ವದ ಒಳಿತಿಗಾಗಿ ಭಾರತ ಸದಾ ಪ್ರಯತ್ನಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಅರಮನೆ ಮೈದಾನದಲ್ಲಿ ಭಾನುವಾರ ಸೌಂದರ್ಯಲಹರೀ ಪಾರಾಯಣ ಮಾಡಿದ ಸಾಧಕರನ್ನು ಉದ್ದೇಶಿಸಿ ಮಾತನಾಡಿದರು.

'ನಾನು ಈಚೆಗಷ್ಟೇ ಕೇದಾರಕ್ಕೆ ಹೋಗಿಬಂದೆ. ಅಲ್ಲಿಗೆ ಹೋದಾಗಲೆಲ್ಲ ಶಂಕರರ ಬಗ್ಗೆ ಗೌರವ ಹೆಚ್ಚಾಗುತ್ತೆ. ಇಷ್ಟೆಲ್ಲಾ ಆಧುನಿಕ ಸೌಕರ್ಯಗಳಿದ್ದರೂ ಅಲ್ಲಿಗೆ ಹೋಗುವುದು ಕಷ್ಟ. ಆದರೆ ಶಂಕರರು ಸಾವಿರಾರು ವರ್ಷಗಳ ಹಿಂದೆಯೇ ದೇಶದ ಮೂಲೆಮೂಲೆ ಸಂಚರಿಸಿ ಅಧ್ಯಾತ್ಮ ಜಾಗೃತಿ ಮೂಡಿಸಿದ್ದರು' ಎಂದು ನೆನಪಿಸಿಕೊಂಡರು.

'ನಾನು ಹಲವು ವರ್ಷಗಳಿಂದ ನವರಾತ್ರಿ ವ್ರತ ಆಚರಿಸುತ್ತಿದ್ದೇನೆ. ನಾನು ಹೇಳುವ ದೇವಿಸ್ತುತಿಗಳಲ್ಲಿ ಶಂಕರಾಚಾರ್ಯರ ಸೌಂದರ್ಯಲಹರೀಯೂ ಸೇರಿದೆ. ಸೌಂದರ್ಯಲಹರೀಯ ಪ್ರತಿ ಮಂತ್ರದಲ್ಲೂ ಮಹತ್ಬದ ಭಾವ ಇದೆ' ಎಂದು ಸ್ತೋತ್ರದ ಮಹತ್ವ ವಿವರಿಸಿದರು.

'ಸಾವಿರಾರು ಜನರು ಒಂದೇ ಸ್ಥಲದಲ್ಲಿ ಒಕ್ಕೊರಲಿನಿಂದ ಮಂತ್ರ ಹೇಳುವುದರಿಂದ ದೊಡ್ಡಮಟ್ಟದ ಶಕ್ತಿಸಂಚಯವಾಗುತ್ತೆ. ಈಗ ಇಲ್ಲಿ ನೆರೆದಿರುವವರು ಪಾರಾಯಣ ಮಾಡಿರುವುದರಿಂದ ಉಂಟಾಗಿರುವ ಶಕ್ತಿಯ ಅಲೆಗಳ ಅನುಭವ ನನಗೆ ಆಗುತ್ತಿದೆ' ಎಂದರು.

'ಬಂಧುಗಳೇ, ಸೌಂದರ್ಯಲಹರೀ ಮಹಾ ಸಮರ್ಪಣೆಗೆ ಬಂದಿರುವ ನಿಮಗೆಲ್ಲರಿಗೆ ಪ್ರಣಾಮಗಳು' ಎಂದು ಪ್ರಧಾನಿ ಕನ್ನಡದಲ್ಲಿ ಮಾತು ಆರಂಭಿಸಿದಾಗ ಸಭಿಕರು ಹರ್ಷೋದ್ಗಾರ ಮಾಡಿದರು. 'ಭಜಗುರು ಶರಣಂ, ಭವಭಯ ಹರಣಂ' ಸೇರಿದಂತೆ ಹಲವು ಅದ್ವೈತಪರ ಘೋಷಣೆಗಳೊಂದಿಗೆ ಪ್ರಧಾನಿಯನ್ನು ಸಾಧಕರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT