ದರೋಡೆಕೋರನ ಜತೆ ಕಾದಾಡಿದ ಎಟಿಎಮ್ ಸಿಬ್ಬಂದಿ, ಸಾಹಸದಿಂದ ಕಳ್ಳತನ ಯತ್ನ ವಿಫಲ

ಶುಕ್ರವಾರ, ಮೇ 24, 2019
26 °C
ಎಟಿಎಮ್‌ನ ಸಿಸಿಟಿವಿಯಲ್ಲಿ ಸೆರೆ

ದರೋಡೆಕೋರನ ಜತೆ ಕಾದಾಡಿದ ಎಟಿಎಮ್ ಸಿಬ್ಬಂದಿ, ಸಾಹಸದಿಂದ ಕಳ್ಳತನ ಯತ್ನ ವಿಫಲ

Published:
Updated:
ದರೋಡೆಕೋರನ ಜತೆ ಕಾದಾಡಿದ ಎಟಿಎಮ್ ಸಿಬ್ಬಂದಿ, ಸಾಹಸದಿಂದ ಕಳ್ಳತನ ಯತ್ನ ವಿಫಲ

ಪಣಜಿ: ಬ್ಯಾಂಕ್ ಆಫ್ ಮಹಾರಾಷ್ಟ್ರದ ಎಟಿಎಮ್‌ನಲ್ಲಿ ಕಳವು ಮಾಡಲು ಬಂದ ಇಬ್ಬರು ಮುಸುಕುಧಾರಿಗಳು ಅಲ್ಲಿನ ಭದ್ರತಾ ಸಿಬ್ಬಂದಿಗೆ ಸುತ್ತಿಗೆಯಿಂದ ಹಲ್ಲೆ ಮಾಡಿ ಓಡಿಹೋಗಿರುವ ಘಟನೆ ಶುಕ್ರವಾರ ನಡೆದಿದೆ.

ಕಳವು ಮಾಡುವಾಗ ಸಿಕ್ಕಿ ಬಿದ್ದ ಕಳ್ಳನನ್ನು ಹಿಡಿದ ಸಿಬ್ಬಂದಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಪರಾರಿಯಾಗಿರುವ ವಿಡಿಯೊ ಎಟಿಎಮ್‌ ಕೊಠಡಿಯಲ್ಲಿದ್ದ ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಣಜಿಯಲ್ಲಿನ ಪೊಲೀಸ್ ಮುಖ್ಯ ಕಚೇರಿ ಬಳಿ ಇರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಮ್‌ನಲ್ಲಿ ಈ ಘಟನೆ ನಡೆದಿದ್ದು, ಮಧ್ಯಪ್ರದೇಶದ ನಿವಾಸಿ ರಾಣು ಸಿಂಗ್ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಿಂಗ್ ಅವರ ಸಾಹಸದಿಂದ ದರೋಡೆಕೋರರ ಯತ್ನ ವಿಫಲವಾಗಿದೆ. ಈ ವೇಳೆ ಸಿಬ್ಬಂದಿ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರಿಗೆ ದೂರು ನೀಡಿದ ಸಿಂಗ್, ಮುಸುಕುಧಾರಿಗಳಾದ ಇಬ್ಬರು ತಡ ರಾತ್ರಿ 1ರಿಂದ 1.30ರ ಮಧ್ಯೆ ಎಟಿಎಮ್ ಬಳಿ ಬಂದರು. ಅದರಲ್ಲಿ ಒಬ್ಬ ಭದ್ರತಾ ಸಿಬ್ಬಂದಿಯಂತೆ ನಿಂತಿದ್ದರು. ಮತ್ತೊಬ್ಬ ಎಟಿಎಮ್ ಕೊಠಡಿಯೊಳಗೆ ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಎಟಿಎಮ್ ಕೊಠಡಿಯಲ್ಲಿನ ಸಿ.ಸಿ ಟಿ.ವಿಯನ್ನು ವಶಕ್ಕೆ ತೆಗೆದುಕೊಂಡ ಪಣಜಿ ಪೊಲೀಸರು (ದರೋಡೆಗೆ ಯತ್ನ ಹಾಗೂ ಅಪರಿಚಿತ ವ್ಯಕ್ತಿಯಿಂದ ಹಲ್ಲೆ) ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry