ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಪತ್ತೆಗೆ ಉಪಕರಣ

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೋಸ್ಟನ್: ಮನೆಯಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿಕೊಳ್ಳಲು ಸಾಧ್ಯವಾಗಬಹುದಾದ ರೀತಿಯ ಸ್ಮಾರ್ಟ್‌ಫೋನ್ ಆಧರಿತ ವಿನೂತನ ಶಬ್ದಾತೀತ ಉಪಕರಣವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಅಮೆರಿಕದ ನವೋದ್ಯಮ ‌ಬಟರ್‌ಫ್ಲೈ ನೆಟ್‌ವರ್ಕ್‌ನ ಸಂಶೋಧಕರು ‘ಬಟರ್‌ಫ್ಲೈ ಐಕ್ಯು’ ಎನ್ನುವ ಈ ಉಪಕರಣ ಅಭಿವೃದ್ಧಿಪಡಿಸಿದ್ದು, ಇದು ಎಲೆಕ್ಟ್ರಿಕ್ ರೇಜರ್‌ನ ಆಕಾರ ಮತ್ತು ಗಾತ್ರದಲ್ಲಿದೆ.

ಈ ’ಬಟರ್‌ಫ್ಲೈ ಐಕ್ಯು’, ವ್ಯಕ್ತಿಯ ದೇಹಕ್ಕೆ ಧ್ವನಿತರಂಗಗಳನ್ನು ಹಾಯಿಸಿ ಅವುಗಳ ಪ್ರತಿಧ್ವನಿಗಳನ್ನು ಸಂಗ್ರಹಿಸಿ ಕ್ಯಾನ್ಸರ್ ಇರುವುದನ್ನು ಪತ್ತೆಹಚ್ಚುತ್ತದೆ.

ಹರಳುಗಳನ್ನು ಬಳಸಿಕೊಂಡು ಈ ಉಪಕರಣ ಕಾರ್ಯನಿರ್ವಹಿಸುತ್ತದೆ ಎಂದು ‘ಎಂಐಟಿ ಟೆಕ್ನಾಲಜಿ ರಿವ್ಯು’ ವರದಿ ಮಾಡಿದೆ.

ಬಟರ್‌ಫ್ಲೈ ನೆಟ್‌ವರ್ಕ್‌ನ ಮುಖ್ಯ ವೈದ್ಯಾಧಿಕಾರಿ ಜಾನ್ ಮಾರ್ಟಿನ್ ಅವರು ಈ ಉಪಕರಣ ಪರೀಕ್ಷಿಸುವ ವೇಳೆ, ಸ್ವತಃ ತಮಗೆ ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಗಂಟಲು ಊದಿಕೊಂಡು ಕಿರಿಕಿರಿ ಅನುಭವಿಸುತ್ತಿದ್ದ ಮಾರ್ಟಿನ್, ಈ ಬಟರ್‌ಫ್ಲೈ ಐಕ್ಯು ಉಪಕರಣವನ್ನು ತಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಿ ಪರಿಶೀಲಿಸಿದಾಗ ಕಪ್ಪು ಬೂದುಬಣ್ಣದ ಚಿತ್ರಗಳು ಕಂಡುಬಂದವು.

ಇವು ಮೂರು ಸೆಂ.ಮೀ. ಉದ್ದ ಕ್ಯಾನ್ಸರ್ ಕೋಶಗಳ ಚಿತ್ರವಾಗಿದ್ದವು ಎನ್ನುವುದನ್ನು ಮಾರ್ಟಿನ್ ಕಂಡುಕೊಂಡರು. ಇದು ಒಂದು ರೀತಿಯ ಚರ್ಮದ ಕ್ಯಾನ್ಸರ್ ಆಗಿದ್ದು, ಚರ್ಮದ ಹೊರಭಾಗದಲ್ಲಿ ಉಂಟಾಗುತ್ತದೆ.

‘ಈ ಉಪಕರಣ ಬಳಸಿಕೊಂಡು ಮಲಗಿದ್ದಲ್ಲಿಯೇ ಸಂಪೂರ್ಣ ದೇಹವನ್ನು ಪರಿಶೀಲಿಸಿಕೊಳ್ಳಬಹುದು‘ ಎಂದು ಮಾರ್ಟಿನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT