ಬ್ರಿಟನ್ ರಾಜಕುಮಾರ ಜಾರ್ಜ್‌ ಹತ್ಯೆಗೆ ಐಎಸ್ ಸಂಚು

ಭಾನುವಾರ, ಮೇ 26, 2019
33 °C

ಬ್ರಿಟನ್ ರಾಜಕುಮಾರ ಜಾರ್ಜ್‌ ಹತ್ಯೆಗೆ ಐಎಸ್ ಸಂಚು

Published:
Updated:
ಬ್ರಿಟನ್ ರಾಜಕುಮಾರ ಜಾರ್ಜ್‌ ಹತ್ಯೆಗೆ ಐಎಸ್ ಸಂಚು

ಲಂಡನ್: ಬ್ರಿಟನ್ ಯುವರಾಜ ವಿಲಿಯಂ ಹಾಗೂ ಯುವರಾಣಿ ಕೇಟ್‌ ಮಿಡ್ಲ್‌ಟನ್ ಅವರ ನಾಲ್ಕು ವರ್ಷದ ಮಗ ಜಾರ್ಜ್‌ನನ್ನು ಹತ್ಯೆ ಮಾಡುವುದಾಗಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಬೆದರಿಕೆ ಹಾಕಿದೆ.

ಈ ಕುರಿತು ಐಎಸ್‌ ಸಾಮಾಜಿಕ ಜಾಲತಾಣಗಳಲ್ಲಿ  ಸಂದೇಶ ಹಾಕಿದೆ. ಲಂಡನ್ ಮಾಧ್ಯಮ ‘ಸ್ಟಾರ್ ಆನ್ ಸಂಡೆ’ ಈ ಕುರಿತು ವರದಿ ಮಾಡಿದೆ.

ಬಳಕೆದಾರರು ಇರುವ ಜಾಗದ ಗೋಪ್ಯತೆ ಕಾಯ್ದುಕೊಳ್ಳುವ ಹಾಗೂ ಗೂಢಲಿಪಿಯಲ್ಲಿ ಸಂದೇಶ ರವಾನಿಸುವ ಟೆಲಿಗ್ರಾಂ ಜಾಲತಾಣದಲ್ಲಿ ಐಎಸ್‌ ಸಾಮಾನ್ಯವಾಗಿ ಸಂದೇಶಗಳನ್ನು ಹಾಕುತ್ತದೆ. ಐಎಸ್‌ ರವಾನಿಸುವ ಸಂದೇಶಗಳ ಮೇಲೆ ಬ್ರಿಟನ್‌ ಗುಪ್ತಚರ ಇಲಾಖೆ ಅಧಿಕಾರಿಗಳು ನಿರಂತರವಾಗಿ ನಿಗಾ ಇರಿಸಿರುತ್ತಾರೆ.

ಐಎಸ್‌ ನೀಡಿದ ಬೆದರಿಕೆ ಬಳಿಕ ಜಾರ್ಜ್‌ ಶಾಲೆಯ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry