ಕೇಂದ್ರೀಯ ವಿದ್ಯಾಲಯಗಳಿಗೆ ಶ್ರೇಣಿ

ಗುರುವಾರ , ಜೂನ್ 20, 2019
31 °C

ಕೇಂದ್ರೀಯ ವಿದ್ಯಾಲಯಗಳಿಗೆ ಶ್ರೇಣಿ

Published:
Updated:
ಕೇಂದ್ರೀಯ ವಿದ್ಯಾಲಯಗಳಿಗೆ ಶ್ರೇಣಿ

ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಿಗೆ ಶ್ರೇಣಿ (ರ‍್ಯಾಂಕ್‌) ನೀಡುವ ಪ್ರಕ್ರಿಯೆಯನ್ನು ಮಾನವ ಸಂಪನ್ಮೂಲ ಸಚಿವಾಲಯ ಆರಂಭಿಸಿದೆ. ಈ ವಿದ್ಯಾಲಯಗಳ ನಡುವೆ ಸ್ಪರ್ಧೆ ಏರ್ಪಟ್ಟು ಗುಣಮಟ್ಟ ಉತ್ತಮಗೊಳ್ಳಲಿ ಎಂಬುದು ಶ್ರೇಣಿ ನೀಡಿಕೆಯ ಹಿಂದಿನ ಉದ್ದೇಶ. ದೇಶದಲ್ಲಿ ಸಾವಿರಕ್ಕೂ ಹೆಚ್ಚು ಕೇಂದ್ರೀಯ ವಿದ್ಯಾಲಯಗಳಿವೆ.

ಮುಂದಿನ ಜೂನ್‌ ಹೊತ್ತಿಗೆ ಕೇಂದ್ರೀಯ ವಿದ್ಯಾಲಯಗಳ ಶ್ರೇಣಿ ಪ್ರಕಟವಾಗಲಿದೆ. ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಅವರ ಸೂಚನೆಯಂತೆ ಶ್ರೇಣಿ ನೀಡಿಕೆ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕ್ರಿಯೆಯಲ್ಲಿ ಮೌಲ್ಯಮಾಪನ ತಂಡವು ಎರಡು ಬಾರಿ ಪ್ರತಿ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಲಿದೆ. ಮುಂದೆ ಪ್ರತಿ ವರ್ಷವೂ ಈ ಪ್ರಕ್ರಿಯೆ ನಡೆಯಲಿದೆ. ಮೌಲ್ಯಮಾಪನದಲ್ಲಿ ಒಟ್ಟು 1,000 ಅಂಕಗಳಿರುತ್ತವೆ. ವಿದ್ಯಾಲಯಗಳನ್ನು ನಾಲ್ಕು ವರ್ಗಗಳಿಗೆ ವಿಂಗಡಿಸಲಾಗುವುದು.

ಶ್ರೇಣಿ ನೀಡುವುದಕ್ಕೆ ಏಳು ಮಾನದಂಡಗಳನ್ನು ಅನುಸರಿಸಲಾಗುವುದು. ಶೈಕ್ಷಣಿಕ ದಕ್ಷತೆಗೆ ಅತ್ಯಂತ ಹೆಚ್ಚು ಅಂದರೆ 500 ಅಂಕ ನೀಡಲಾಗುವುದು. ಮೂಲಸೌಕರ್ಯಕ್ಕೆ 150 ಮತ್ತು ಶಾಲಾ ಆಡಳಿತಕ್ಕೆ 120 ಅಂಕಗಳು ಇರುತ್ತವೆ. ಹಣಕಾಸು ನಿರ್ವಹಣೆಗೆ 70, ಸಮುದಾಯದ ಸಹಭಾಗಿತ್ವಕ್ಕೆ 60, ಕೃಪಾಂಕ 90 ಮತ್ತು ಮೌಲ್ಯಮಾಪಕರ ವಿಶೇಷ ಅಂಕಗಳಾಗಿ 10 ಅಂಕಗಳನ್ನು ನೀಡುವುದಕ್ಕೆ ಅವಕಾಶ ಇದೆ.

ಕೇಂದ್ರೀಯ ವಿದ್ಯಾಲಯಗಳಿಗೆ ಶ್ರೇಣಿ ನೀಡುವ ಮೊದಲ ಪ್ರಯತ್ನ ಇದಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry