ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಸಮಸ್ಯೆ ಬಗೆಹರಿಸಿ

Published:
Updated:

ರಾಜ್ಯ ಉಪನ್ಯಾಸಕರ ಅಥವಾ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ- ಸೆಟ್) ಅಧಿಸೂಚನೆಯ ಕೆಲ ನಿಯಮಗಳು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿವೆ. ‘ಜಾತಿ ಮತ್ತು ಆದಾಯ ಪ್ರಮಾಣಪತ್ರವು 2016 ಸೆಪ್ಟೆಂಬರ್ 1ರ ಒಳಗೆ ಪಡೆದಿರಬೇಕು’ ಎಂದು ನಿಯಮದಲ್ಲಿ ತಿಳಿಸಿರುವುದೇ ಗೊಂದಲಕ್ಕೆ ಕಾರಣ. ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಐದು ವರ್ಷಗಳ ಮಾನ್ಯತೆ ಇದ್ದು, ಹಲವಾರು ವಿದ್ಯಾರ್ಥಿಗಳು 2013ರಿಂದ 2016ರೊಳಗಿನ ಅವಧಿಯಲ್ಲಿ ಒಮ್ಮೆ ಪ್ರಮಾಣಪತ್ರ ಪಡೆದಿದ್ದಾರೆ.

ನಿಯಮಾನುಸಾರ ಐದು ವರ್ಷಕ್ಕೆ ಒಂದುಬಾರಿ ಮಾತ್ರ ಈ ಪ್ರಮಾಣಪತ್ರ ಪಡೆಯಬಹುದು. ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳೆಲ್ಲ ಮತ್ತೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಬೇಕು.

ಈ ನಿಯಮದಿಂದ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಾಗಿದೆ. ಕೆ-ಸೆಟ್ ಅರ್ಜಿ ಸಲ್ಲಿಸಲು 21 ದಿನಗಳ ಅವಧಿ ಮಾತ್ರ ನೀಡಲಾಗಿದೆ. ಒಂದುವೇಳೆ ಹೊಸದಾಗಿ ಪ್ರಮಾಣಪತ್ರ ಪಡೆಯಬೇಕಾದರೂ ಇಷ್ಟು ದಿನಗಳು ಸಾಕಾಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ವಿದ್ಯಾರ್ಥಿಗಳ ಸಮಸ್ಯೆ ನೀಗಿಸಬೇಕು.

-ಫಾಜಿಲ್ ಅಹ್ಮದ್ ಹೊದಿಗೆರೆ, ಹರಿಹರ

Post Comments (+)