ಶ್ರೀಕಾಂತ್‌ಗೆ ಪ್ರಶಸ್ತಿ ಸಂಭ್ರಮ

ಗುರುವಾರ , ಜೂನ್ 20, 2019
31 °C

ಶ್ರೀಕಾಂತ್‌ಗೆ ಪ್ರಶಸ್ತಿ ಸಂಭ್ರಮ

Published:
Updated:
ಶ್ರೀಕಾಂತ್‌ಗೆ ಪ್ರಶಸ್ತಿ ಸಂಭ್ರಮ

ಪ್ಯಾರಿಸ್‌: ಭಾರತದ ಕಿದಂಬಿ ಶ್ರೀಕಾಂತ್‌ ಫ್ರೆಂಚ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.

ಈ ಋತುವಿನಲ್ಲಿ ಅಮೋಘ ಸಾಮರ್ಥ್ಯದಿಂದ ಆಡುತ್ತಿರುವ ಶ್ರೀಕಾಂತ್‌ ಜಯಿಸಿದ ನಾಲ್ಕನೇ ಸೂಪರ್‌ ಸರಣಿ ಪ್ರಶಸ್ತಿ ಇದಾಗಿದೆ. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ 21–14, 21–13ರಲ್ಲಿ ನೇರ ಗೇಮ್‌ಗಳಿಂದ ಜಪಾನ್‌ನ ಕೆಂಟ ನಿಶಿಮೊಟೊ ವಿರುದ್ಧ ಗೆದ್ದರು.

ಎಂಟನೇ ಶ್ರೇಯಾಂಕದ ಆಟಗಾರ ಶ್ರೀಕಾಂತ್‌ 34 ನಿಮಿಷಗಳಲ್ಲಿ ಪಂದ್ಯ ಗೆದ್ದರು. ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎದುರಾಳಿಯ ದೌರ್ಬಲ್ಯಗಳನ್ನು ಅರಿತುಕೊಂಡ ಭಾರತದ ಆಟಗಾರ ಸುಲಭದಲ್ಲಿ ಪಾಯಿಂಟ್ಸ್‌ ಕಲೆಹಾಕಿದರು.

ಶ್ರೀಕಾಂತ್ ಆಡಿದ ಐದನೇ ಸೂಪರ್ ಸರಣಿ ಫೈನಲ್ ಪಂದ್ಯ ಇದಾಗಿತ್ತು. ಮೊದಲ ಗೇಮ್‌ನಲ್ಲಿ ಅವರು ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದರು. 5–9ರಲ್ಲಿ ಹಿಂದಿದ್ದ ಶ್ರೀಕಾಂತ್ ಬಳಿಕ ಸೊಗಸಾದ ಬ್ಯಾಕ್‌ಹ್ಯಾಂಡ್ ಹೊಡೆತಗಳು ಹಾಗೂ ಆಕರ್ಷಕ ಸ್ಮ್ಯಾಷ್‌ಗಳಿಂದ ಎದುರಾಳಿ ಮೇಲೆ ಒತ್ತಡ ಹೇರಿದರು. ಆದರೆ ಎರಡನೇ ಗೇಮ್‌ನಲ್ಲಿ ಜಪಾನ್‌ನ ಆಟಗಾರ ಯಾವುದೇ ಪ್ರತಿರೋದ ಒಡ್ಡಲಿಲ್ಲ. ದೀರ್ಘವಾದ ರ‍್ಯಾಲಿಗಳ ವೇಳೆ ಸುಲಭದಲ್ಲಿ ಪಾಯಿಂಟ್ಸ್ ಬಿಟ್ಟರು.

ಸತತ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಶ್ರೀಕಾಂತ್‌ ಅಮೋಘ ಫಾರ್ಮ್‌ನಲ್ಲಿದ್ದಾರೆ. ನಿಶಿಮೊಟೊ ನೆಟ್ ಬಳಿ ಆಡುವಾಗ ಹೆಚ್ಚು ನಿಖರವಾಗಿ ಆಡುತ್ತಿದ್ದರು. ಈ ಸಂದರ್ಭದಲ್ಲಿ ಶ್ರೀಕಾಂತ್ ಜಾಣ್ಮೆ ಮೆರೆದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry