ಭಾರತ ತಂಡಕ್ಕೆ ಏಳನೇ ಸ್ಥಾನ

ಬುಧವಾರ, ಜೂನ್ 26, 2019
28 °C

ಭಾರತ ತಂಡಕ್ಕೆ ಏಳನೇ ಸ್ಥಾನ

Published:
Updated:

ನವದೆಹಲಿ: ಆತಿಥೇಯ ಭಾರತ ತಂಡ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಫೈನಲ್‌ ಪದಕಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಚೀನಾವನ್ನು ಹಿಂದಿಕ್ಕಿದ ಇಟಲಿ ಮೊದಲ ಸ್ಥಾನದಲ್ಲಿದೆ.

ಟೂರ್ನಿಯಲ್ಲಿ ಭಾರತ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚು ಸೇರಿದಂತೆ ಒಟ್ಟು ಮೂರು ಪದಕಗಳನ್ನು ಜಯಿಸಿದೆ. ಜಿತು ರಾಯ್ ಹಾಗೂ ಹೀನಾ ಸಿಧು 10ಮೀ ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದುಕೊಟ್ಟಿದ್ದಾರೆ.

ಸಂಗಮ್ ದಹಿಯಾ ಪುರುಷರ ಡಬಲ್‌ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಗೆದ್ದರೆ, ಅಮನ್‌ಪ್ರೀತ್ ಸಿಂಗ್‌ ಪುರುಷರ 50ಮೀ ಪಿಸ್ತೂಲು ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

ವಾರ್ಷಿಕ ಐಎಸ್‌ಎಸ್‌ಎಫ್‌ ಶೂಟಿಂಗ್‌ನಲ್ಲಿ ಇದು ಭಾರತದ ಅತ್ಯುತ್ತಮ ಸಾಧನೆಯಾಗಿದೆ. ಹೋದ ವರ್ಷ ಪಿಸ್ತೂಲ್‌ ವಿಭಾಗದಲ್ಲಿ ಜಿತು ಚಿನ್ನ ಗೆದ್ದುಕೊಂಡಿದ್ದರು.

ಅಂತಿಮ ದಿನ ಭಾನುವಾರ ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಸ್ಪೇನ್‌ನ ಅಲ್ಬರ್ಟೊ ಫರ್ನಾಂಡಿಸ್‌ ಚಿನ್ನಕ್ಕೆ ಗುರಿನೆಟ್ಟರು. ವಿಶ್ವಕಪ್‌ನಲ್ಲಿ ಅವರು ಆರು ಬಾರಿ ಚಿನ್ನ ಗೆದ್ದಿದ್ದಾರೆ. 50ರಲ್ಲಿ ಅವರು 48 ಪಾಯಿಂಟ್ಸ್ ಗಿಟ್ಟಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.

ಇಟಲಿಯ ಹಾಲಿ ಚಾಂಪಿಯನ್ ಡೇನಿಯೆಲೆ ರೇಸ್ಕಾ 46 ಪಾಯಿಂಟ್ಸ್‌ಗಳಿಂದ ಬೆಳ್ಳಿ ಗೆದ್ದರು. ಈ ಪದಕದ ಬಲದಿಂದ ಇಟಲಿ ತಂಡ ಚೀನಾ ದೇಶವನ್ನು ಹಿಂದಿಕ್ಕಲು ಸಾಧ್ಯವಾಯಿತು. ಇಟಲಿ ಒಟ್ಟು ಎರಡು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚು ಗೆದ್ದಿದೆ. ಚೀನಾ ತಂಡ ಎರಡು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚು ಜಯಿಸಿದೆ.

50ಮೀ ರೈಫಲ್‌ ತ್ರಿ ಪೊಸಿಷನ್‌ ವಿಭಾಗದಲ್ಲಿ ಫ್ರಾನ್ಸ್‌ನ ಅಲೆಕ್ಸಸ್‌ ರಾಯ್‌ನಡು ಚಿನ್ನ ಜಯಿಸಿದರು. ಅವರು ಅಂತಿಮ ಸುತ್ತಿನಲ್ಲಿ 461.7 ಪಾಯಿಂಟ್ಸ್‌ ಗಳಿಸಿದರು. ಈ ವಿಭಾಗದ ಬೆಳ್ಳಿ ಪದಕವನ್ನು ಜೆಕ್‌ ಫಿಲಿಪ್‌ನ ನೆಪೆಚಲ್‌ 458.5 ಪಾಯಿಂಟ್ಸ್‌ಗಳಿಂದ ಗೆದ್ದರು.

449.1 ಪಾಯಿಂಟ್ಸ್‌ ಗಳಿಸಿದ್ದ 20 ವರ್ಷದ ಹಂಗೇರಿಯ ಶೂಟರ್‌ ಇಸ್ತಾವನ್ ಪೆನಿ ಕಂಚಿಗೆ ಕೊರಳೊಡ್ಡಿದರು. ಇಸ್ತಾವನ್‌ 10ಮೀ ಏರ್‌ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ಪುರುಷರ 25ಮೀ ರ‍್ಯಾಪಿಡ್ ಫೈರ್ ಪಿಸ್ತೂಲ್‌ ವಿಭಾಗದಲ್ಲಿ ಅಮೆರಿಕದ ಕೇತ್ ಸ್ಯಾಂಡರ್ಸನ್‌ ಚಿನ್ನ ಗೆದ್ದರೆ, ಫ್ರೆಂಚ್‌ನ ಕ್ಲೆಮಂಟ್‌ ಬೆಳ್ಳಿ ಜಯಿಸಿದರು. ಕೇತ್‌ 40ರಲ್ಲಿ 31 ಗುರಿಗಳನ್ನು ಯಶಸ್ವಿಯಾಗಿ ಗೆದ್ದರು. ಕ್ಲೆಮಂಟ್‌ 25 ಪಾಯಿಂಟ್ಸ್ ಗಳಿಸಿದರೆ, ಕೊರಿಯಾದ ಜಾಂಗ್ ಹೊ 24 ಪಾಯಿಂಟ್ಸ್‌ಗಳಿಂದ ಕಂಚಿನ ಪದಕ ಜಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry