ರಾಜ್ಯದ ಅರ್ಚನಾಗೆ ಪ್ರಶಸ್ತಿ

ಗುರುವಾರ , ಜೂನ್ 20, 2019
26 °C

ರಾಜ್ಯದ ಅರ್ಚನಾಗೆ ಪ್ರಶಸ್ತಿ

Published:
Updated:
ರಾಜ್ಯದ ಅರ್ಚನಾಗೆ ಪ್ರಶಸ್ತಿ

ಬೆಂಗಳೂರು: ಅಪೂರ್ವ ಆಟ ಆಡಿದ ಕರ್ನಾಟಕದ ಅರ್ಚನಾ ಕಾಮತ್‌, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್‌ ಪೂರ್ವ ವಲಯದ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಶುಕ್ರವಾರ ನಡೆದ 18 ವರ್ಷದೊಳಗಿನವರ ಜೂನಿಯರ್‌ ಬಾಲಕಿಯರ ಫೈನಲ್‌ನಲ್ಲಿ ಅರ್ಚನಾ 12–10, 11–6, 12–10, 11–8ರಲ್ಲಿ ಸೆಲೆನಾ ದೀಪ್ತಿ ಸೆಲ್ವಕುಮಾರ್‌ ಅವರನ್ನು ಸೋಲಿಸಿದರು.

ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ (ಪಿಎಸ್‌ಪಿಬಿ) ತಂಡವನ್ನು ಪ್ರತಿನಿಧಿಸಿದ್ದ ಅರ್ಚನಾ ನಾಲ್ಕೂ ಗೇಮ್‌ಗಳಲ್ಲೂ ಮಿಂಚಿನ ಸಾಮರ್ಥ್ಯ ತೋರಿ ಎದುರಾಳಿಯ ಸವಾಲು ಮೀರಿದರು.

ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಬೆಂಗಳೂರಿನ ಅರ್ಚನಾ 11–8, 11–9, 11–8, 9–11, 13–11ರಲ್ಲಿ ದೆಹಲಿಯ ಇಶಿತಾ ಗುಪ್ತಾ ಎದುರು ಗೆದ್ದಿದ್ದರು.

ಮತ್ತೊಂದು ಹೋರಾಟದಲ್ಲಿ 11–8, 11–9, 12–10, 12–10ರಲ್ಲಿ ಮಹಾರಾಷ್ಟ್ರದ ಸೃಷ್ಟಿ ಹಳೆಂಗಡಿಗೆ ಸೋಲಿನ ರುಚಿ ತೋರಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry