ಎಫ್‌ಸಿ ಪುಣೆ ತಂಡಕ್ಕೆ ಅರ್ಜುನ್‌ ಕಪೂರ್‌ ಸಹ ಮಾಲೀಕ

ಗುರುವಾರ , ಜೂನ್ 20, 2019
24 °C

ಎಫ್‌ಸಿ ಪುಣೆ ತಂಡಕ್ಕೆ ಅರ್ಜುನ್‌ ಕಪೂರ್‌ ಸಹ ಮಾಲೀಕ

Published:
Updated:
ಎಫ್‌ಸಿ ಪುಣೆ ತಂಡಕ್ಕೆ ಅರ್ಜುನ್‌ ಕಪೂರ್‌ ಸಹ ಮಾಲೀಕ

ಮುಂಬೈ: ಬಾಲಿವುಡ್‌ ನಟ ಅರ್ಜುನ್‌ ಕ‍ಪೂರ್‌, ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಎಫ್‌ಸಿ ಪುಣೆ ಸಿಟಿ ತಂಡದ ಸಹ ಮಾಲೀಕತ್ವ ಪಡೆದಿದ್ದಾರೆ.ಈ ವಿಷಯವನ್ನು ಪುಣೆ ಫ್ರಾಂಚೈಸ್‌ ಗುರುವಾರ ಪ್ರಕಟಿಸಿದೆ.

‘ಅರ್ಜುನ್‌ ಕಪೂರ್‌ ಅವರು ತಂಡದ ಸಹ ಮಾಲೀಕತ್ವ ಪಡೆದಿರುವುದು ಖುಷಿಯ ವಿಷಯ. ಅವರ ಸೇರ್ಪಡೆಯಿಂದ ನಮಗೆ ಇನ್ನಷ್ಟು ಬಲ ಬಂದಂತಾಗಿದೆ. ಅಭಿಮಾನಿಗಳನ್ನು ಕ್ರೀಡಾಂಗಣದತ್ತ ಸೆಳೆಯಲು ಅವರ ತಾರಾ ವರ್ಚಸ್ಸು ನೆರವಾಗಲಿದೆ’ ಎಂದು ಕ್ಲಬ್‌ನ ಸಿಇಒ ಗೌರವ್‌ ಮಾಡ್ವೆಲ್‌ ತಿಳಿಸಿದ್ದಾರೆ.

‘ಫುಟ್‌ಬಾಲ್‌ ಆಟವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಎಳವೆಯಿಂದಲೂ ಈ ಕ್ರೀಡೆಯ ಬಗ್ಗೆ  ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದೇನೆ. ಬಿಡುವಾದಾಗಲೆಲ್ಲಾ ಈಗಲೂ ಗೆಳೆಯರೊಡನೆ ಫುಟ್‌ಬಾಲ್‌ ಆಡುತ್ತೇನೆ. ಸ್ನೇಹಿತರೂ ಕೂಡ ವಿವಿಧ ಕ್ಲಬ್‌ಗಳ ಸಹ ಒಡೆಯರಾಗಿದ್ದಾರೆ’ ಎಂದು ಅರ್ಜುನ್‌ ಕಪೂರ್‌ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry