ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣ: ಆರು ಜನರ ಬಂಧನ

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿ ಶನಿವಾರ ಸಿನಿಮೀಯ ರೀತಿಯಲ್ಲಿ ಅಪಹರಣಕ್ಕೆ ಒಳಗಾದ ಬಾಲಕನನ್ನು  ಕೆಲವೇ ಗಂಟೆಗಳಲ್ಲೇ ಆಂಧ್ರಪ್ರದೇಶದ ರಾಯದುರ್ಗದ ಬಳಿ ಅಲ್ಲಿನ ಪೊಲೀಸರು ರಕ್ಷಿಸಿದ್ದಾರೆ. ಈ ಸಂಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದೆ.

ಬಿ.ಜಿ.ಕೆರೆ ಗ್ರಾಮದ ಹಿರೇಹಳ್ಳಿ ರಸ್ತೆಯ ಮಾರಮ್ಮ ದೇವಸ್ಥಾನದ ಮುಂಭಾಗದಿಂದ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಎಂ.ಜಗದೀಶ್‌ (13) ನನ್ನು ಅಪಹರಣ ಮಾಡಿ ಕಾರಿನಲ್ಲಿ ಕರೆದುಕೊಂಡು ಹೋಗಲಾಗಿತ್ತು. ಜಗದೀಶ್‌ ಜೊತೆಗಿದ್ದ ಇನ್ನೊಬ್ಬ ಬಾಲಕ ಅಪಹರಣದ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ ಬಳಿಕ ಪೋಷಕರು ಪೊಲೀಸ್‌ ಠಾಣೆಗೆ ದೂರು ನೀಡಿದರು.

ಸ್ಥಳೀಯ ಪೊಲೀಸರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಆಂಧ್ರಪ್ರದೇಶದ ಪೊಲೀಸರು, ರಾಯದುರ್ಗ ಬಳಿ ರಾತ್ರಿ ವೇಳೆ ಅಪಹರಣಕಾರರ ಕಾರನ್ನು ತಡೆದು ಬಾಲಕನನ್ನು ರಕ್ಷಿಸಿದರು.

‘ವಿಶಾಖಪಟ್ಟಣದ ಸೋಮಾವರಂ ಗ್ರಾಮದ ದಮ್ಮಾ ಶಿವು, ದಿಮಿಲಿ ಗ್ರಾಮದವರಾದ ನಾಗಿರೆಡ್ಡಿ, ಗುರ್ಲೆ ನಾನಾಜಿ, ನಾಗಿರೆಡ್ಡಿ, ಚಪ್ಪತಲಪುಲ ರಾಜ, ಬೈಯುವರಂ ಗ್ರಾಮದ ಸಮುದ್ರಾಲ ದುರ್ಗಾಪ್ರಸಾದ್‌ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣಕ್ಕೆ ಕಾರಣ ತಿಳಿದುಬಂದಿಲ್ಲ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಪಿಎಸ್‌ಐ ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT