ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಟಿಫಿಕೇಟ್‌ಗೆ ಪಿಎಫ್ ಹಣ ನೀಡಬೇಕಿದೆ

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

1. ನನ್ನ ಮ‌ಗ ಎಸ್‌.ಎಸ್‌.ಎಲ್‌.ಸಿ. ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.90 ಅಂಕದೊಂದಿಗೆ ಪಾಸಾಗಿದ್ದ. ಅವರ ಆಶಯದಂತೆ ಬಿ.ಇ. ಮೆಕಾನಿಕಲ್ ಬ್ರಾಂಚ್‌ಗೆ ಸೇರಿದ್ದು 1, 2 ಹಾಗೂ 3ನೇ ಸೆಮಿಸ್ಟರ್‌ಗಳಲ್ಲಿ ಉತ್ತಮ ಅಂಕದೊಂದಿಗೆ ಪಾಸಾಗಿದ್ದಾನೆ. ಸಮಸ್ಯೆಯಾಗಿರುವ 2ನೇ ಸೆಮಿಸ್ಟರ್ ಎಂ–2 ಎಂದರೆ 2ನೇ ಸೆಮಿಸ್ಟರ್‌ನ ಗಣಿತ ವಿಷಯದಲ್ಲಿ ಅನುತ್ತೀರ್ಣನಾಗಿದ್ದು ಖಿನ್ನತೆಗೊಳಗಾಗಿದ್ದಾನೆ. ಸೈಕ್ರಿಯಾಟ್ರಿಸ್ಟ್‌ರಿಂದ ಕೌನ್ಸಲಿಂಗ್‌ ಮಾಡಿಸಿದ್ದೇನೆ. ಈಗ ಅವನಿಗೆ ಗಣಿತ 2ನೇ ಸಬ್ಜೆಕ್ಟ್‌ ಒಂದು ಸಮಸ್ಯೆ ಆಗಿದ್ದರಿಂದ ಬೇರೆ ಕೋರ್ಸ್‌ಗೆ  ಸೇರುವ ಇಚ್ಛೆಯನ್ನು ಸೈಕ್ರಿಯಾಟ್ರಿಸ್ಟ್‌ ಮುಂದೆ ಹೇಳಿಕೊಂಡಿದ್ದಾನೆ! ಅವನ ಒರಿಜಿನಲ್‌ ಸರ್ಟಿಫಿಕೇಟ್‌ ಕಾಲೇಜಿನಲ್ಲೆ ಇವೆ. ಅವುಗಳನ್ನು ಕೊಡಲು ಬಾಕಿ ಉಳಿದ 2 ವರ್ಷಗಳ ಫೀಯನ್ನು ತುಂಬಬೇಕು. ಈಗ ನನಗೆ ಸರ್ವಿಸ್‌ 4 ವರ್ಷ ಬಾಕಿ ಇದೆ. ಇದನ್ನು ಪಿಎಫ್‌ ಮೂಲಕ ತೆಗೆಸಿ ಮ್ಯಾನೇಜ್‌ ಮಾಡಬೇಕೆಂದಿದ್ದೇನೆ. ಯಾಕೆಂದರೆ ಮುಂದೆ ಅವನ ಕೆರಿಯರ್‌ ಚೆನ್ನಾಗಿ ಆಗಬೇಕು. ಎಲ್ಲಾ ಪಾಲಕರ ಆಶಯದಂತೆ ಇದೂ ನನ್ನ ಆಶಯ. ಮುಖ್ಯವಾಗಿ ಈಗ ಅವನು ಯಾವ ಕೋರ್ಸ್‌ಗಳನ್ನು ಆಯ್ದುಕೊಳ್ಳಬೇಕು. ಗಣಿತಶಾಸ್ತ್ರ ವಿಷಯ ಇರದೇ ಇರುವ ಕೋರ್ಸ್‌ ಯಾವುದಿದೆ. ಏಕೆಂದರೆ ಮತ್ತೆ ಗಣಿತ ಇರುವ ವಿಷಯವೆಂದರೆ ಅವನಿಗೂ ಸಮಸ್ಯೆ, ನಮಗೂ ಅವನ ಭವಿಷ್ಯದ ಸಮಸ್ಯೆಯ ಚಿಂತೆ. ಬಾಗಲಕೋಟೆ, ಅತ್ಯುತ್ತಮ ಶಿಕ್ಷಣ ಕೇಂದ್ರವಾಗಿದ್ದು ಎಲ್ಲಾ ಕೋರ್ಸ್‌ಗಳ ಲಭ್ಯತೆ ಇದೆ. ಸದ್ಯಕ್ಕೆ ಪಿಯುಸಿ ವಿಜ್ಞಾನವೇ ಅವನ ಅರ್ಹತೆಯಾಗಿದೆ. ಸಣ್ಣ ಪುಟ್ಟ ನೌಕರಿ ಮಾತ್ರ ಸಿಗುತ್ತವೆ. ಪದವಿಯಾದರೆ ಉತ್ತಮ ಎನ್ನುವುದು ನಮ್ಮ ಅನಿಸಿಕೆ. ಯಾವ ಕೋರ್ಸ್‌ಗಳೂ ಆಯ್ದುಕೊಳ್ಳಬೇಕು ದಯವಿಟ್ಟು ತಿಳಿಸಿ.

– ಶಿವಕುಮಾರ. ಕೊ. ಬಣಗಾರ, ಬಾಗಲಕೋಟೆ

ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ. 90 ಅಂಕಗಳನ್ನು ತೆಗೆದು ಬೇರೆ ಸೆಮಿಸ್ಟರ್‌ಗಳಲ್ಲೂ ಪಾಸಾಗಿ ಇದ್ದಕ್ಕಿದ್ದ ಹಾಗೇ ಗಣಿತದಲ್ಲಿ ತೊಂದರೆ ಹೇಗೆ ಬಂತು? ಕಾಲೇಜಿನ ಪ್ರಾಧ್ಯಾಪಕರು, ಸ್ನೇಹಿತರು ಇವರೆಲ್ಲರ ಜೊತೆ ಇವನಿಗೆ ಸಂಬಂಧ ಹೇಗಿದೆ? ಇವನೇನಾದರು ರ‍್ಯಾಗಿಂಗ್‌ಗೆ ‌ಬಲಿಯಾಗಿದ್ದಾನಾ? ಯಾವುದಾದರೂ ಹುಡುಗಿಯ ಸ್ನೇಹ, ಪ್ರೀತಿ, ನಿರಾಶೆ? ಮನಃಶಾಸ್ತ್ರಜ್ಞರು ಇದನೆಲ್ಲಾ ಕೇಳಿ, ಗಮನದಲ್ಲಿಟ್ಟುಕೊಂಡು ಟ್ರೀಟ್ ಮಾಡಿರುತ್ತಾರೆ.

ನಿಮ್ಮ ಜವಾಬ್ದಾರಿ. ಇವನಲ್ಲಿ ಆತ್ಮವಿಶ್ವಾಸ, ಉತ್ತೇಜನ, ನಂಬಿಕೆ ಇರಬೇಕು. ಮನಸ್ಸಿಗಿಂತ ದೊಡ್ಡದು ಯಾವುದು ಇಲ್ಲ. ಧೈರ್ಯವಿದ್ದರೆ ಗುರಿ ಸಾಧಿಸುತ್ತೇನೆ ಅನ್ನುವ ಧೃಡ ನಿರ್ಧಾರವನ್ನು ಅವನಲ್ಲಿ ತುಂಬಿ. ಹೀಯಾಳಿಸುವುದು, ಇತರರಿಗೆ ಹೋಲಿಸುವುದು, ಹಂಗಿಸುವುದು ಎಲ್ಲವನ್ನೂ ಕಡ್ಡಾಯವಾಗಿ ನಿಲ್ಲಿಸಬೇಕು ( ನೀವು ಮಾಡುತ್ತಿದ್ದರೆ) ಪ್ರೀತಿ, ವಿಶ್ವಾಸದಿಂದ ಎಲ್ಲವನ್ನು ಗೆಲ್ಲಬಹುದು. ಮಹಾ ವಿಜ್ಞಾನಿ ಮಾಸ್ಲೊ ತಮ್ಮ ಸಿದ್ಧಾಂತವಾದ ನೀಡ್ ಹೈರಾರ್‌ಕಿಯಲ್ಲಿ ಪ್ರೀತಿಗೆ ಅಗ್ರಸ್ಥಾನ ಕೊಟ್ಟಿದ್ದಾನೆ.

ಮೊದಲನೇ ಸಲಹೆ: ಪ್ರೈವೇಟ್ ಟ್ಯೂಷನ್ ಕೊಟ್ಟು ಬಾಕಿ ಇರುವ ವಿಷಯವನ್ನು ಪಾಸು ಮಾಡಲು ಸಾಧ್ಯವೇ ನೋಡಿ.

ಎರಡನೇ ಸಲಹೆ: ಪಿಯುಸಿ ಆ್ಯಸ್ ಬೇಸ್, ಬಿಬಿಎಂ ಕೋರ್ಸ್‌ ಸಿಲೇಬಸ್ ನೋಡಿ. ಅವನಿಗೆ ಇದು ಸುಲಭ ಎನ್ನಿಸಿದರೆ ಸೇರಿಸಿ. ಇದನ್ನು ಪಾಸ್ ಮಾಡಿದ ನಂತರ ಬೇಕಾದಷ್ಟು ಕೋರ್ಸ್‌ಗಳಿವೆ, ಪಾಸು ಮಾಡಲು.

ಮೂರನೇ ಸಲಹೆ: ಓಪನ್ ಯೂನಿವರ್ಸಿಟಿ ಕೋರ್ಸ್, ಡಿಸ್ಟೆನ್ಸ್ ಎಜುಕೇಷನ್‌ ಕೋರ್ಸ್‌, ಇದರ ಉತ್ತರ ಈಗಾಗಲೇ ಇದೇ ಪ್ರಕಟಣೆಯಲ್ಲಿದೆ.
ಇವನ ಅರ್ಹತೆ, ಆಸಕ್ತಿ, ಅಭಿರುಚಿ ಗೊತ್ತಿದ್ದಲ್ಲಿ ಇನ್ನೂ ಹೆಚ್ಚಿನ ಸಲಹೆ ನೀಡಬಹುದು.
ಯಾವುದಕ್ಕೂ ನಿರಾಶರಾಗಬೇಡಿ. ಸೋಲೇ ಗೆಲುವಿಗೆ ಮೆಟ್ಟಿಲು.

2. ನಾನು ಪ್ರಥಮ ‍ಪಿಯುಸಿ ಓದುತ್ತಿದ್ದು, ದ್ವಿತೀಯ ಪಿಯುಸಿ ನಂತರ ಸ್ಪೇಸ್‌ ರಿಸರ್ಚ್‌ ಓದಬೇಕೆಂಬ (Space Research) ಆಸೆ ಇದೆ. ಇದಕ್ಕೆ ಸಂಬಂಧಪಟ್ಟ ಕಾಲೇಜುಗಳು ಎಲ್ಲಿವೆ? ಇದಕ್ಕೆ ತಗಲುವ ವೆಚ್ಚ ಎಷ್ಟು? ಅದಕ್ಕೆ ಜೆಇಇ ಮೈನ್ಸ್‌ ಮತ್ತು ಅಡ್ವಾನ್ಸ್‌ ಎರಡರಲ್ಲೂ ಪಾಸಾಗಬೇಕೆ? ದ್ವಿತೀಯ ಪಿಯುಸಿ (PCME)ಯಲ್ಲಿ ಶೇ. ಎಷ್ಟು ಅಂಕ ಬರಬೇಕು? ಎಷ್ಟು ವರ್ಷ ಓದಬೇಕು?

– ಗ್ರೀಷ್ಮಋತು ಆರ್‌., ತುಮಕೂರು

ಮುಂದೆ ಏನು ಮಾಡಬೇಕು ಎನ್ನುವ ನಿರ್ಧಾರ ಬಹಳ ಮುಖ್ಯ. ನೀವು ಪಿಯುಸಿಯಲ್ಲೇ ಇದನ್ನು ಯೋಚಿಸಿರುವುದು ಬಹಳ ಒಳ್ಳೆಯದು. ಸ್ಪೇಸ್ ಸೈನ್ಸ್ ಎಲ್ಲರಿಗೂ ಕುತೂಹಲಕಾರಿ ವಿಷಯ. ಆದರೆ ಈ ಕೋರ್ಸ್ ಅನ್ನು ಮಾಡುವ ಅರ್ಹತೆ ಎಷ್ಟು ವಿದ್ಯಾರ್ಥಿಗಳಿಗೆ ಇರುತ್ತದೆ? ನೀವು ಎಷ್ಟು ಅಂಕಗಳನ್ನು ಗಳಿಸುತ್ತಿದ್ದೀರಾ ಗೊತ್ತಿಲ್ಲ. ಈ ಕೋರ್ಸ್‌ಗೆ ಸೇರಬೇಕಾದರೆ ಕನಿಷ್ಠ ಶೇ.75 ಅಂಕ ಗಳಿಸಿರಬೇಕು. ಸ್ಪೇಸ್ ಸೈನ್ಸ್‌ನಲ್ಲಿ ಬಿ.ಎಸ್ಸಿ, ಎಂ.ಎಸ್ಸಿ. ಇನ್ ಸ್ಪೇಸ್‌ ಸೈನ್ಸ್‌, ಬಿ.ಟೆಕ್‌. ಮತ್ತು ಎಂ.ಟೆಕ್‌.ನಲ್ಲಿ ಸ್ಪೇಸ್ ಸೈನ್ಸ್‌ ಈ ತರಹ ಡಿಗ್ರಿ ದೊರೆಯುವುದಿಲ್ಲ. ಫಿಸಿಕ್ಸ್‌, ಕೆಮಿಸ್ಟ್ರಿ, ಮ್ಯಾಥ್ಸ್‌, ಏರೋಸ್ಪೇಸ್ ಎಂಜಿನಿಯರಿಂಗ್ – ಹೀಗೆ ಹಲವಾರು ಸಬ್ಜೆಕ್ಟ್‌ನಲ್ಲಿ ವ್ಯಾಸಂಗ ಮಾಡಿದರೆ ನೀವು ನಿಮ್ಮ ಕನಸನ್ನು ನನಸಾಗಿಸಬಹುದು.

ಜೆಇಇ (ಮೈನ್‌) ಮತ್ತು ಜೆಇಇ (ಅಡ್ವಾನ್ಸ್ಡ್‌) ಪಾಸು ಮಾಡಬೇಕು. ನೀವು ಟಾಪ್ 20ನೇ ರ‍್ಯಾಂಕ್‌ ಇದ್ದರೂ ಸೀಟು ಸಿಗುತ್ತದೆ. ಈ ಪರೀಕ್ಷೆಯ ವಿವರ ಈಗಾಗಲೇ ತಿಳಿಸಿದ್ದೇನೆ. ( ಪ್ರೀವಿಯಸ್ ಇಶ್ಯೂಸ್‌)

ಸಂಕ್ಷಿಪ್ತವಾಗಿ ಅಪ್ಲಿಕೇಶನ್‌ನನ್ನು ಆನ್‌ಲೈನ್‌  ಮೂಲಕ ಮಾತ್ರ ಕಳುಹಿಸಬೇಕು. ನಿಮ್ಮ ಆಧಾರ್‌ ಕಾರ್ಡ್‌ ಬೇಕೇ ಬೇಕು, ಬಾಕಿ ವಿವರವನ್ನು jeemain.nic.in, jeeadv.ac.in ಇಂದ ಪಡೆಯಿರಿ.

ಬಿ.ಟೆಕ್ ಡಿಗ್ರಿ ವರ್ಷದ್ದು. ಡ್ಯೂಯಲ್ ಡಿಗ್ರಿ ಬಿ.ಎಸ್‌./ ಎಂ.ಸ್‌. 5 ವರ್ಷದ್ದು. ಪಿಎಚ್‌.ಡಿ. ಡಿಗ್ರಿ ಸಹಿತ ಮಾಡಬಹುದು.

a) ಬೆಂಗಳೂರಿನ ಹೆಸರಾಂತ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಬಿ.ಎಸ್‌. ಡಿಗ್ರಿ

ಅರ್ಹತೆ: ಕನಿಷ್ಠ ಶೇ.60 ಅಂಕ.

ಪ್ರವೇಶ ಪರೀಕ್ಷೆ: ಜೆಇಇ (ಮೈನ್‌), ಜೆಇಇ ( ಅಡ್ವಾನ್ಸ್ಡ್‌) ಕೆವಿಪಿವೈ

ವೆಬ್‌ಸೈಟ್‌: www.iisc. ernet.in

b) ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್‌ ಅಂಡ್‌ ಟೆಕ್ನಾಲಜಿ (ಐಐಎಸ್‌ಟಿ) ಗೌರ್ಮೆಂಟ್ ಆಫ್ ಇಂಡಿಯಾ, ಡಿಪಾರ್ಟ್‌ಮೆಂಟ್ ಆಫ್ ಸ್ಪೇಸ್‌.
ಕೋರ್ಸ್‌: ಪದವಿ ಅಥವಾ ಸ್ನಾತಕೋತ್ತರ ಪದವಿ
ಅರ್ಹತೆ: ಕನಿಷ್ಠ ಶೇ.75 ಅಂಕ.
ಪ್ರವೇಶ ಪರೀಕ್ಷೆ: ಜೆಇಇ ( ಮೈನ್‌) ಮತ್ತು ಅಡ್ವಾನ್ಸ್ಡ್‌.
ಐಎಸ್‌ಎಟಿ – ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ಅಡ್‌ಮಿಷನ್ ಟೆಸ್ಟ್‌. 
ವೆಬ್‌ಸೈಟ್‌: wwww.iist.ac.in
ಅಬ್‌ಸಾರ್‌ಷನ್‌ ಬೈ ಇಸ್ರೋ.

c) ಐಐಟಿ – ಕಾನ್ಪುರ್‌ ಆಫರ್ ಬಿಎಸ್‌ ಇನ್‌ ಫಿಸಿಕ್ಸ್, ಮಾಥ್ಸ್‌, ಸೈಂಟಿಫಿಕ್‌ ಕಂಪ್ಯೂಟರ್ಸ್‌. www.iitk.ac.in

ಐಐಐ ಮದ್ರಾಸ್‌ ಆಫರ್ಸ್ ಬಿಎಸ್‌ ಮತ್ತುಎಂಎಸ್‌ ಸ್ನಾತಕೋತ್ತರ ಪ್ರೋಗ್ರಾಂ ಇನ್ ಫಿಸಿಕ್ಸ್‌. www.iitm.ac.in

ಐಐಟಿ ಕಾನ್ಪುರ್‌ ಆಫರ್ಸ್ 5 ಇಂಟೆಗ್ರೇಟೆಡ್ ಎಂಎಸ್ಸಿ ಇನ್‌ ಫಿಸಿಕ್ಸ್‌. www.iitkgp.ac.in

ಐಐಟಿ ಮುಂಬೈ, ದೆಹಲಿ, ಗುಹಾವಟಿ ಮತ್ತು ಚೆನೈ ಆಫರ್ಸ್‌ ಬಿ.ಟೆಕ್ ಇನ್ ಎಂಜಿನಿಯರಿಂಗ್ ಫಿಸಿಕ್ಸ್‌.

d) ದಿ ಇಂಡಿಯಾ ಸ್ಕೂಲ್ ಆಫ್ ಮೈನ್ಸ್‌ 5 ವರ್ಷಗಳ ಇಂಟಿಗ್ರೇಟೆಡ್ ಎಂ.ಎಸ್ಸಿ. ಇನ್ ಅಪ್ಲಿಕೇಶನ್‌ ಫಿಸಿಕ್ಸ್ ಪ್ರವೇಶ ಪರೀಕ್ಷೆ ಜೆಇಇ (ಮೈನ್ )( ಅಡ್ವಾನ್ಸ್ಡ್).

e) ದಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ (ಐಐಎಸ್‌ಇಆರ್‌ಎಸ್‌) ತಿರುವನಂತಪುರಂ, ಪುಣೆ, ಭೋಪಾಲ್.

f) ನ್ಯಾಷನಲ್‌ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರೀಸರ್ಚ್‌ (ಎನ್‌ಐಎಸ್‌ಇಆರ್‌) ಭುವನೇಶ್ವರ ಅಂಡರ್ ದಿ ಡಿರ್ಪಾಮೆಂಟ್ ಆಫ್ ಆಟೋಮಿಕ್ ಎನರ್ಜಿ (ಡಿಎಇ) ಆಫರ್ಸ್ 5 ಇಯರ್ಸ್‌ ಇಂಟಿಗ್ರೇಟೆಡ್ ಎಂಎಸ್ಸಿ ಇನ್ ಫಿಸಿಕ್ಸ್, ಬಯೋಲಜಿ, ಕೆಮಿಕಲ್ ಮತ್ತು ಮಾಥಮ್ಯಾಟಿಕಲ್ ಸೈನ್ಸ್
web: www.niser.ac.in

g) ಬಿರ್ಲಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ( ಬಿಐಟಿಎಸ್‌) ಆಫರ್ಸ್ ಇಂಟಿಗ್ರೇಟೆಡ್‌ ಎಂ.ಎಸ್ಸಿ. ಇನ್ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್‌ ಅಂಡ್ ಬಯೋಲಾಜಿಕಲ್ ಸೈನ್ಸ್‌.

web: www.birlsadmession.com

ಇನ್ನೂ ಅನೇಕ ಸೆಂಟ್ರಲ್ ಯೂನಿವರ್ಸಿಟಿಗಳು ಕೂಡ ಸ್ಪೇಸ್ ಎಜುಕೇಷನ್ ನೀಡುತ್ತವೆ.

ನೀವು ಗಮನಿಸಬೇಕಾದ್ದು: ನಿಮ್ಮಲ್ಲಿ ಈ ಕೋರ್ಸ್ ಮಾಡಲು ಆಸಕ್ತಿ, ಆರ್ಹತೆ, ಅಭಿರುಚಿ ಇದೆಯಾ? ರೀಸರ್ಚ್ ಪ್ರೋಗ್ರಾಂ ಆಯ್ಕೆ ಮಾಡಿದಾಗ ನಿಮ್ಮಲ್ಲಿ ತಾಳ್ಮೆ ಇದೆ‌ಯಾ? ಎಜಿಲಿಬಿಲಿಟಿ ಕ್ರೈಟೀರಿಯಾ ನಿಮ್ಮಲ್ಲಿ ಇದೆಯೇ? ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನಿಮ್ಮ ಸಿದ್ಧತೆ ಮಾಡಿಕೊಳ್ಳಿ. ಸೈನ್ಸ್‌ನಲ್ಲಿ ಆಸಕ್ತಿ ತೋರುವ ವಿದ್ಯಾರ್ಥಿಗಳ ಕೊರತೆ ಇರುವ ಸಮಯದಲ್ಲಿ ನೀವು ಆಸಕ್ತಿ ತೋರಿರುವುದು ನನಗೆ ಸಂತೋಷವಾಗಿದೆ.

3.  ನನ್ನದು ಬಿ.ಕಾಂ. 3ನೇ ವರ್ಷದಲ್ಲಿ ಎರಡು ವಿಷಯಗಳು ಬಾಕಿ ಉಳಿದಿದ್ದವು. ಅದನ್ನು ಮರು ವರ್ಷ ಪರೀಕ್ಷೆ ಬರೆದೆ. ಆದರೆ ಅನಿವಾರ್ಯ ಕಾರಣಗಳಿಂದ ಫಲಿತಾಂಶ ನೋಡಲಾಗಲಿಲ್ಲ. ಇಲ್ಲಿಗೆ ಬಿ.ಕಾಂ. ಮುಗಿಸಿ 4 ವರ್ಷಗಳು ಕಳೆದಿದೆ. ಕ್ಲಿಯರೆನ್ಸ್ ಕೇಳಿದರೆ ಬಂದಿಲ್ಲ ಎಂದರು. ಮತ್ತೆ ಓಎಂಆರ್ ತುಂಬಲು ಬರುವುದಿಲ್ಲ, ಹೊಸದಾಗಿ ಅಡ್ಮಿಷನ್ ತೆಗೆದುಕೊಳ್ಳಬೇಕು ಎಂದು ಕಾಲೇಜಿನವರು ಹೇಳುತ್ತಿದ್ದಾರೆ. ಆದರೆ ಕೆಲಸಕ್ಕೆ ಡಿಗ್ರಿ ಸರ್ಟಿಫಿಕೇಟ್ ಬೇಕಾಗಿದೆ. ಮತ್ತೆ ಡಿಗ್ರಿ ಮಾಡಬೇಕಾ? ಪರಿಹಾರ ತಿಳಿಸಿ.

– ರಾಜಭಕ್ಷು. ಎಫ್‌.ಐ., ಹಾವೇರಿ

ಪ್ರತಿಯೊಬ್ಬರಿಗೂ ಡಿಗ್ರಿ ಇದ್ದರೆ ಉತ್ತಮ. ನೀವು ಹುಡುಕುತ್ತಿರುವ ರೀತಿಯಲ್ಲಿ ನಿಮಗೆ ಬಿ.ಕಾಂ. ಸರ್ಟಿಫಿಕೇಟ್ ದೊರೆಯುವುದರಲ್ಲಿ ತೊಂದರೆ ಇದೆ. ನೀವು ಓಪನ್ ಯೂನಿರ್ವಸಿಟಿನಲ್ಲಿ ದಾಖಲಾಗಿ ಪಿ.ಜಿ. ಡಿಗ್ರಿ ಪಡೆಯುವುದು ಉತ್ತಮ. ಪಿ.ಜಿ. ಕೋರ್ಸ್‌ಗೆ ದಾಖಲಾಗಿ ನೀವು ಕೋರ್ಸ್ ಮಾಡುತ್ತಿದ್ದೀರಾ ಅಂತ ನಿಮ್ಮ ಕಂಪನಿಗೆ ತೋರಿಸಿ. ಅವರು ಒಪ್ಪಬಹುದು. ‌‌

ಈ ಕೆಳಗಿನ ಹಲವು ಓಪನ್ ಯೂನಿವರ್ಸಿಟಿಗೆ ನೀವು ಅಪ್ಲೈ ಮಾಡಬಹುದು.

a) ಇಂದಿರಾ ಗಾಂಧಿ ನ್ಯಾಷನಲ್ ಓ‍ಪನ್ ಯೂನಿವರ್ಸಿಟಿ (ಇಗ್ನೊ). www.ignou.ac.in

b) ಡೈರೆಕ್ಟೊರೇಟ್ ಆಫ್ ಕರೆಸ್ಫಾಡೆಂಟ್ಸ್ ಕೋರ್ಸ್‌ ಅಂಡ್ ಡಿಸ್ಟೆನ್ಸ್‌ ಎಜುಕೇಷನ್‌ ಬೆಂಗಳೂರು ಯೂನಿರ್ವಸಿಟಿ, ಜ್ಞಾನಭಾರತಿ ಕ್ಯಾಂಪಸ್‌, ಬೆಂಗಳೂರು– 560056
web: www.bangaloreuniversity.ac.in/dcc-de

ಫೋನ್‌: 08022961261–67

c) ಡಾ. ಅಂಬೇಡ್ಕರ್ ಓಪನ್ ಯೂನಿವರ್ಸಿಟಿ, ಹೈದ್ರಾಬಾದ್‌. web: www.braov.ac.in

d) ಶ್ರೀ ವೆಂಕಟೇಶ್ವರ ಯೂನಿವರ್ಸಿಟಿ, ತಿರುಪತಿ web: www.svuniversity.in

e) ಕುವೆಂಪು ಯೂನಿವರ್ಸಿಟಿ, ಶಿವಮೊಗ್ಗ; web; www.kuvempuuniversitydde.org ಮತ್ತು ಇನ್ನೂ ಹಲವು.ಈ ಮೇಲ್ಕಂಡ ಯಾವುದೇ ಓಪನ್ ಯೂನಿವರ್ಸಿಟಿ ಡಿಸ್ಟೆನ್ಸ್ ಎಜುಕೇಷನ್ ಕೋರ್ಸ್‌ಗೆ ಅಪ್ಲೆ ಮಾಡಿ, ಈಗಾಗಲೇ ಕೆಲವು ಓಪನ್ ಯೂನಿವರ್ಸಿಟಿಗಳು ಅರ್ಜಿಗಳನ್ನು ಕರೆದಿವೆ.
ಈಗ ಚರ್ಚೆಯಲ್ಲಿರುವ ವಿಷಯ ನೀವು ಆಯ್ಕೆ ಮಾಡುವಾಗ ಗಮನಿಸಬೇಕಾದ ವಿಷಯವೇನೆಂದರೆ ರೆಕಗ್ನಿಷನ್ ಇದೆಯಾ ನೋಡಿ ಆಯ್ಕೆ ಮಾಡಿ.

4. ನಾನು 2016ರಲ್ಲಿ ಬಿ.ಇ. ಮುಗಿಸಿದ್ದೇನೆ. ನಾನು ಈಗ ಸಿವಿಲ್ ಸರ್ಮಿಸ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಪ್ರಸ್ತುತ ವಿದ್ಯಮಾನದ ವಿಷಯಗಳ ಬಗ್ಗೆ ನನಗೆ ಅನುಮಾನವಿದೆ. ಮತ್ತು ಪರೀಕ್ಷೆಯ ದೃಷ್ಟಿಯಲ್ಲಿ ನ್ಯೂಸ್‌ಪೇಪರ್‌ ಅನ್ನು ಹೇಗೆ ಓದಬೇಕು?

ನೀವು ಪೇಪರ್ ಅಥವಾ ಟೀವಿಯಲ್ಲಿ ನ್ಯೂಸ್ ನೋಡುವಾಗ ಜರುಗುತ್ತಿರುವ ವಿದ್ಯಮಾನಗಳನ್ನು ಒಂದು ಕಡೆ ನೋಟ್ ಮಾಡುತ್ತಾ ಬನ್ನಿ. ಹೆಸರಾಂತ ಪುಸ್ತಕದ ಅಂಗಡಿಯಲ್ಲಿ ಇದಕ್ಕೆ ಸಂಬಂಧಿಸಿದ ಪುಸ್ತಕಗಳಿವೆ; ನೋಡಿಕೊಳ್ಳಿ. ಹೆಸರಾಂತ ಟೀವಿ ಶೋ ಆದ ಕೆಬಿಸಿಯಲ್ಲೂ ಜನರಲ್ ನಾಲೆಜ್ಡ್ ಬಗ್ಗೆ ವಿಷಯ ಸಂಗ್ರಹಿಸಿ. ಆಸಕ್ತಿ ಇದ್ದಲ್ಲಿ ಜಯ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT