ಕರಕುಶಲ ಸರಕಿಗೆ ಜಿಎಸ್‌ಟಿ ಬೇಡ

ಗುರುವಾರ , ಜೂನ್ 20, 2019
24 °C

ಕರಕುಶಲ ಸರಕಿಗೆ ಜಿಎಸ್‌ಟಿ ಬೇಡ

Published:
Updated:
ಕರಕುಶಲ ಸರಕಿಗೆ ಜಿಎಸ್‌ಟಿ ಬೇಡ

ಮೈಸೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ಕರಕುಶಲ ವಸ್ತುಗಳ ಮಾರಾಟ ಶೇ 60ರಷ್ಟು ಕುಸಿದಿದ್ದು, ₹ 40–50 ಕೋಟಿ ನಷ್ಟ ಉಂಟಾಗಿದೆ. ಹೀಗಾಗಿ, ಕರಕುಶಲ ವಸ್ತುಗಳಿಗೆ ವಿಧಿಸಿದ ತೆರಿಗೆಯನ್ನು ಸಂಪೂರ್ಣ ತೆಗೆದುಹಾಕಬೇಕು ಎಂದು ದಕ್ಷಿಣ ಭಾರತ ಕರಕುಶಲ ಕೈಗಾರಿಕೆ ಸಂಘ ಆಗ್ರಹಿಸಿದೆ.

‘ಪೀಠೋಪಕರಣಗಳಿಗೆ ಶೇ28, ಲೋಹದ ವಿಗ್ರಹಗಳ ಮೇಲೆ ಶೇ 18ರಷ್ಟು  ವಿಧಿಸಲಾಗಿದೆ. ಇತರ ವಸ್ತುಗಳ ಮೇಲೆ ಶೇ 12ರಷ್ಟು ತೆರಿಗೆ ಹಾಕಲಾಗಿದೆ. ಇದರಿಂದ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಸಾವಿರಾರು ಕುಶಲಕರ್ಮಿಗಳು ಕೆಲಸ ಕಳೆದುಕೊಂಡಿದ್ದಾರೆ. ತೆರಿಗೆ ವಿಧಿಸಲೇಬೇಕು ಎಂದಿದ್ದರೆ ಶೇ 5ರ ಕಡಿಮೆ ದರ ನಿಗದಿಪಡಿಸಿ’ ಎಂದು ಸಂಘದ ಅಧ್ಯಕ್ಷ ಪಿ.ಸುಬ್ರಮಣಿಯನ್‌ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ಕೃಷಿ ಹಾಗೂ ಕೈಮಗ್ಗ ಹೊರತುಪಡಿಸಿದರೆ ಕರಕುಶಲ ಕ್ಷೇತ್ರವೇ ಮೂರನೇ ಅತಿದೊಡ್ಡ ಉದ್ಯಮ. ದಕ್ಷಿಣ ಭಾರತದಲ್ಲಿ 1.75 ಕೋಟಿ ಜನ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶೇ 40ರಷ್ಟು ಕರಕುಶಲ ವಸ್ತುಗಳು ವಿದೇಶಕ್ಕೆ ರಫ್ತಾಗುತ್ತಿವೆ. ವಿದೇಶಿ ವಿನಿಮಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 15 ರಾಜ್ಯಗಳು ತೆರಿಗೆ ವಿನಾಯ್ತಿ ಘೋಷಿಸಿದ್ದವು. ಆದಾಯ ತೆರಿಗೆ ಹಾಗೂ ಅಬಕಾರಿ ಸುಂಕದಿಂದಲೂ ವಿನಾಯ್ತಿ ನೀಡಲಾಗಿತ್ತು. ಜಿಎಸ್‌ಟಿ ಜಾರಿಯಾದ ಬಳಿಕ ತೆರಿಗೆ ವಿನಾಯ್ತಿಯೂ ರದ್ದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಎಸ್‌ಟಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನಷ್ಟೇ ಹೊಣೆ ಮಾಡಲು ಇಷ್ಟಪಡುವುದಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿಯೇ ಈ ತೆರಿಗೆ ಪ್ರಕ್ರಿಯೆ ಆರಂಭವಾಗಿತ್ತು. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಎಲ್ಲ ರಾಜ್ಯಗಳೊಂದಿಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಈ ತೆರಿಗೆಯ ದರದ ಕುರಿತು ಪ್ರಸ್ತಾಪ ಮಾಡಿರಲಿಲ್ಲ. ಜಿಎಸ್‌ಟಿ ಜಾರಿಗೂ 15 ದಿನಗಳ ಮುನ್ನ ತೆರಿಗೆ ದರವನ್ನು ನಿಗದಿ ಮಾಡಲಾಗಿದೆ. ಇದರಿಂದ ಇಂತಹ ಸಮಸ್ಯೆಗಳು ಉಂಟಾಗಿವೆ’ ಎಂದು ಅವರು ಆರೋಪಿಸಿದರು.

ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ತಯಾರಕರ ಸಂಘದ ಗೌರವ ಅಧ್ಯಕ್ಷ ಪಿ.ಗೌರಯ್ಯ, ಅಧ್ಯಕ್ಷ ಎಸ್‌.ರಾಮು, ಪ್ರಧಾನ ಕಾರ್ಯದರ್ಶಿ ಸೈಯದ್‌ ಇಸ್ಮಾಯಿಲ್‌ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry