ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಸಿ.ಡಿ. ಪ್ರಕರಣ ತನಿಖೆ ಹೊಣೆ ಸಿಬಿಐಗೆ

Last Updated 29 ಅಕ್ಟೋಬರ್ 2017, 19:39 IST
ಅಕ್ಷರ ಗಾತ್ರ

ರಾಯಪುರ : ಛತ್ತೀಸಗಡ ಬಿಜೆಪಿ ಸರ್ಕಾರದ ಸಚಿವ ರಾಜೇಶ್ ಮುನೋತ್ ಅವರಿಗೆ ಸಂಬಂಧಿಸಿದ ಅಕ್ರಮ ಲೈಂಗಿಕ ವಿಡಿಯೊ ಎನ್ನಲಾದ ಸಿ.ಡಿ.ಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಛತ್ತೀಸಗಡ ಸರ್ಕಾರ ನಿರ್ಧರಿಸಿದೆ.

‘ಶನಿವಾರ ರಾತ್ರಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದು ಕೊಳ್ಳಲಾಗಿದೆ’ ಎಂದು ಕಂದಾಯ ಸಚಿವ ಪ್ರೇಮ್ ಪ್ರಕಾಶ್ ಪಾಂಡೆ ಮಾಹಿತಿ ನೀಡಿದ್ದಾರೆ.

‘ಇದು ರಾಜೇಶ್ ಮುನೋತ್ ವಿರುದ್ಧ ಪತ್ರಕರ್ತ ವಿನೋದ್ವರ್ಮಾ ಮತ್ತು ಕಾಂಗ್ರೆಸ್‌ ಜತೆಗೂಡಿ ನಡೆಸಿರುವ ಷಡ್ಯಂತ್ರ. ಹೀಗಾಗಿ ಇದರ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ’ ಎಂದು ಪಾಂಡೆ ತಿಳಿಸಿದ್ದಾರೆ.

ತಮ್ಮ ಬಳಿ ರಾಜೇಶ್ ಮುನೋತ್ ಅವರ ಅಕ್ರಮ ಲೈಂಗಿಕತೆಯ ದೃಶ್ಯಗಳಿರುವ ಸಿ.ಡಿ. ಇರುವುದಾಗಿ ವಿನೋದ್ ವರ್ಮಾ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ರಾಜೇಶ್ ಆಪ್ತ ಪ್ರಕಾಶ್ ಬಜಾಜ್ ದೂರು ನೀಡಿದ್ದರು. ಹೀಗಾಗಿ ವಿನೋದ್‌ರನ್ನು ಬಂಧಿಸಲಾಗಿತ್ತು. ಅವರ ಮನೆಯಿಂದ ಅಶ್ಲೀಲ ದೃಶ್ಯಗಳಿರುವ ಸಿ.ಡಿ ಒಂದರ 500 ಪ್ರತಿಗಳು, ಪೆನ್‌ಡ್ರೈವ್, ಲ್ಯಾಪ್‌ಟಾಪ್, ₹ 2 ಲಕ್ಷ ನಗದು ಮತ್ತು ಡೈರಿಯನ್ನು ವಶಪಡಿಸಿಕೊಳ್ಳಲಾಗಿತ್ತು. ‘ಆ ಸಿ.ಡಿ.ಯ ಪ್ರತಿ ನನ್ನ ಬಳಿಯೂ ಇದೆ’ ಎಂದು ಛತ್ತೀಸಗಡ ಕಾಂಗ್ರೆಸ್‌ನ ಅಧ್ಯಕ್ಷ ಭೂಪೇಶ್ ವಾಘೆಲಾ ಹೇಳಿದ್ದರು.

ಈ ಸಂಬಂಧ ರಾಜೇಶ್ ದೂರು ನೀಡಿದ್ದರಿಂದ ಭೂಪೇಶ್ ವಿರುದ್ಧ ಶನಿವಾರ ಎಫ್‌ಐಆರ್ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT