ನಾಲ್ಕು ಚಿನ್ನಕ್ಕೆ ಮುತ್ತಿಕ್ಕಿದ ಕರ್ನಾಟಕ

ಶುಕ್ರವಾರ, ಮೇ 24, 2019
26 °C

ನಾಲ್ಕು ಚಿನ್ನಕ್ಕೆ ಮುತ್ತಿಕ್ಕಿದ ಕರ್ನಾಟಕ

Published:
Updated:

ಜಮಖಂಡಿ: ಕರ್ನಾಟಕದ ವಿಶ್ವನಾಥ ಗಡಾದ ಮತ್ತು ದಾನಮ್ಮ ಚಿಚಖಂಡಿ ಅವರು ಇಲ್ಲಿ ನಡೆಯುತ್ತಿರುವ 22ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ತಲಾ ಒಂದು ಚಿನ್ನದ ಪದಕ ಗೆದ್ದರು. ಎರಡನೇ ದಿನ ಆತಿಥೇಯರಿಗೆ ಒಟ್ಟು ನಾಲ್ಕು ಚಿನ್ನದ ಪದಕಗಳು ಒಲಿದವು.

ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್‌ ಮತ್ತು ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ವೈಯಕ್ತಿಕ ಸ್ಪರ್ಧೆಯ 10 ಕಿ.ಮೀ ಬಾಲ

ಕರ ಹಾಗೂ ಬಾಲಕಿಯರ ಜೂನಿಯರ್ ವಿಭಾಗಗಳಲ್ಲಿ ಕ್ರಮವಾಗಿ ವಿಶ್ವನಾಥ ಹಾಗೂ ದಾನಮ್ಮ ಪದಕದ ಸಾಧನೆ ಮಾಡಿದರು.

ಮೊದಲ ದಿನ ಮಹಾರಾಷ್ಟ್ರ ಸ್ಪರ್ಧಿಗಳ ಪ್ರಾಬಲ್ಯದ ಎದುರು ಮಂಕಾಗಿದ್ದ ಅತಿಥೇಯರು ಎರಡನೇ ದಿನ ಸೈಕಲ್‌ ವೇಗ ಹೆಚ್ಚಿಸಿಕೊಂಡರು. ವೈಯಕ್ತಿಕ ವಿಭಾಗದಲ್ಲಿ ಎರಡು ಚಿನ್ನ, ಒಂದು ಕಂಚು ಹಾಗೂ ತಂಡ ವಿಭಾಗದಲ್ಲಿ ಎರಡು ಚಿನ್ನದ ಪದಕಗಳು ರಾಜ್ಯದ ಸೈಕ್ಲಿಸ್ಟ್‌ಗಳ ಪಾಲಾದವು. ಮೊದಲ ಎರಡು ದಿನಗಳ ಅಂತ್ಯಕ್ಕೆ ಕರ್ನಾಟಕ ಆರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚು ಜಯಿಸಿ ಪದಕದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಸೀನಿಯರ್‌ ತಂಡಕ್ಕೆ ನಿರಾಸೆ: ಪುರುಷರ ಹಾಗೂ ಮಹಿಳೆಯರ ಎಲೀಟ್‌ ವಿಭಾಗದಲ್ಲಿ ರಾಜ್ಯ ತಂಡ ನಿರಾಸೆ ಅನುಭವಿಸಿತು. ಪುರುಷರ ತಂಡ ಐದನೇ ಸ್ಥಾನ ಪಡೆದರೆ, ಏಷ್ಯನ್‌ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ ಮೇಘಾ ಗುಗಾಡ ನೇತೃತ್ವದ ಮಹಿಳೆಯರ ತಂಡ ಕೂಡ ಹಿನ್ನಡೆ ಅನುಭವಿಸಿತು. ರೈಲ್ವೇಸ್ ತಂಡ ಈ ಎರಡೂ ವಿಭಾಗದಲ್ಲಿ ಚಿನ್ನ ತನ್ನದಾಗಿಸಿಕೊಂಡಿತು.

ಪುರುಷರ 40 ಕಿ.ಮೀ. ಜೂನಿಯರ್‌ ವಿಭಾಗದಲ್ಲಿ ವೆಂಕಪ್ಪ ಕೆಂಗಲಗುತ್ತಿ, ಸಂಗೂ ನಾಯಕ್, ರಾಜು ಬಾಟಿ ಹಾಗೂ ಜಿ.ಟಿ.ಗಂಗರಡ್ಡಿ ಒಳಗೊಂಡ ಕರ್ನಾಟಕ ತಂಡ ಮೊದಲ ಸ್ಥಾನ ಪಡೆಯಿತು. ನಿಗದಿತ ಗುರಿಯನ್ನು ತಂಡ 50 ನಿಮಿಷ. 52.019 ಸೆಕೆಂಡುಗಳಲ್ಲಿ ಮುಟ್ಟಿತು. ಮಹಿಳೆಯರ 30 ಕಿ.ಮೀ ಜೂನಿಯರ್ ವಿಭಾಗದಲ್ಲಿ ಮೇಘಾ ಗುಗಾಡ, ರಾಜೇಶ್ವರಿ ಡುಳ್ಳಿ, ಸಾವಿತ್ರಿ ಹೆಬ್ಬಾಳಟ್ಟಿ, ದಾನಮ್ಮ ಗುರವ ಅವರನ್ನೊಳಗೊಂಡ ತಂಡ ಮಹಾರಾಷ್ಟ್ರದ ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.

ಎರಡನೇ ದಿನದ ಫಲಿತಾಂಶ:ವೈಯಕ್ತಿಕ ವಿಭಾಗ: ಬಾಲಕರ ಸಬ್‌ಜೂನಿಯರ್ 10 ಕಿ.ಮೀ: ವಿಶ್ವನಾಥ ಗಡಾದ (ಕರ್ನಾಟಕ, 12ನಿ:10.771 ಸೆ.)–1, ಮುಲ್ಲಾ ರಾಮ್ (ರಾಜಸ್ಥಾನ, 12ನಿ: 25.207 ಸೆ.)–2, ವಿಶ್ವಜೀತ್ ಸಿಂಗ್ (ಪಂಜಾಬ್, 12ನಿ: 26.695 ಸೆ.)–3.

ಬಾಲಕಿಯರ ಸಬ್‌ಜೂನಿಯರ್ 10 ಕಿ.ಮೀ: ದಾನಮ್ಮ ಚಿಚಖಂಡಿ (ಕರ್ನಾಟಕ, 15ನಿ: 42.183 ಸೆ.)–1, ಎನ್.ಅನಿತಾ (ಮಧ್ಯಪ್ರದೇಶ, 16ನಿ:02.461 ಸೆ.)–2, ಸಹನಾ ಕುಡಿಗನೂರ (ಕರ್ನಾಟಕ, 16ನಿ:10.362 ಸೆ.)–3.

ತಂಡ ವಿಭಾಗ:ಪುರುಷರ ಜೂನಿಯರ್ ವಿಭಾಗ 40 ಕಿ.ಮೀ ಟೀಮ್ ಟ್ರಯಲ್ಸ್‌: ಕರ್ನಾಟಕ (50ನಿ:52.019ಸೆ.)–1, ರಾಜಸ್ಥಾನ (51ನಿ: 42.013 ಸೆ.)–2, ಪಂಜಾಬ್ (52ನಿ:38 ಸೆ.)–3.

ಮಹಿಳೆಯರ ಜೂನಿಯರ್ ವಿಭಾಗ–30 ಕಿ.ಮೀ ಟೀಮ್ ಟ್ರಯಲ್: ಕರ್ನಾಟಕ (44ನಿ:32.802 ಸೆ.)–1, ಮಹಾರಾಷ್ಟ್ರ (46ನಿ:33.581ಸೆ)–2, ಅಸ್ಸಾಂ (46ನಿ:58.440 ಸೆ)–3. ಪುರುಷರ ಎಲೀಟ್‌ ವಿಭಾಗ–60 ಕಿ.ಮೀ ಟೈಮ್ ಟ್ರಯಲ್: ರೈಲ್ವೇಸ್ (1 ಗಂಟೆ, 13 ನಿಮಿಷ, 04.177 ಸೆಕೆಂಡ್)–1, ಸರ್ವಿಸಸ್ (1 ಗಂಟೆ, 14ನಿಮಿಷ, 56.281 ಸೆಕೆಂಡ್)–2, ಪಂಜಾಬ್ (1 ಗಂಟೆ, 15 ನಿಮಿಷ, 14.024 ಸೆಕೆಂಡ್)–3.: ಮಹಿಳೆಯರ ಎಲೀಟ್‌ ವಿಭಾಗ–40 ಕಿ.ಮೀ ಟೈಮ್ ಟ್ರಯಲ್: ರೈಲ್ವೇಸ್ (1ಗಂಟೆ, 119 ಸೆ)–1, ಕೇರಳ (1ಗಂಟೆ,01 ನಿಮಿಷ, 58 ಸೆ)–2, ಮಹಾರಾಷ್ಟ್ರ (1 ಗಂಟೆ, 02 ನಿಮಿಷ, 09.219 ಸೆ)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry