ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಮಲಪ್ರಭಾ ನದಿಗೆ ಬಾಗಿನ ಅರ್ಪಣೆ

Published:
Updated:
ಮಲಪ್ರಭಾ ನದಿಗೆ ಬಾಗಿನ ಅರ್ಪಣೆ

ಸವದತ್ತಿ: ಇಲ್ಲಿನ ಹವ್ಯಾಸಿ ಈಜುಗಾರರ ಬಳಗದ ಸದಸ್ಯರು ಮಲಪ್ರಭಾ ನದಿಗೆ ಬಾಗಿನ ಅರ್ಪಿಸಿ, ಮಹಾಪ್ರಸಾದ ವಿತರಿಸಿದರು. ಹಿರಿಯ ವಕೀಲ ಸಿ.ಎಲ್‌ ಮೊಖಾಸಿ ನದಿಗೆ ಬಾಗಿನ ಅರ್ಪಿಸಿ, ನಿತ್ಯ ಬೆಳಿಗ್ಗೆ ಮಲಪ್ರಭಾ ನದಿಯಲ್ಲಿ ಈಜುವ ತಾವೆಲ್ಲ ಇಂದು ಗಂಗಾಮಾತೆಗೆ ಪೂಜೆ ಸಲ್ಲಿಸುವ ಮೂಲಕ ಇದು ಸದಾ ತುಂಬಿ ಹರಿಯುವುದರ ಜೊತೆಗೆ ನಂಬಿದ ರೈತರ ಪಾಲಿಗೆ ಕಲ್ಪವೃಕ್ಷ ವಾಗಿರಲಿ ಎಂದು ಆಶಿಸಿದರು.

‘ಈ ಭಾಗದಲ್ಲಿ ಉತ್ತಮ ಬೆಳೆ ಬೆಳೆಯುವ ಮೂಲಕ ಸಮೃದ್ಧ ನಾಡನ್ನಾಗಿ ಮಾಡುವಲ್ಲಿ ಮಲಪ್ರಭಾ ನದಿ ಪಾತ್ರ ದೊಡ್ಡದಿದೆ ಎಂದರು. ವಿಜಯ ಹಿರೇಮಠ ಪೂಜೆ ಸಲ್ಲಿಸಿ ಬಾಗೀನ ಅರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.ಡಾ. ಸಿ.ಬಿ. ನಾವದಗಿ, ಗಂಗಪ್ಪ ಸುಣಗಾರ, ರಾಮಣ್ಣ ಈಳಿಗೇರ, ಆನಂದ ಕಾಂತಿಮಠ, ಉಮೇಶ ಗೌಡರ, ಮೋಹನ ಜೋರಾಪೂರ, ಎಂ.ಎಸ್‌. ಇಜಂತಕರ ಇದ್ದರು.

Post Comments (+)