ಕಮ್ಯುನಿಸ್ಟರಿಂದ ಹಿಂದೂಗಳ ಹತ್ಯೆ: ಆರೋಪ

ಬುಧವಾರ, ಜೂನ್ 26, 2019
25 °C

ಕಮ್ಯುನಿಸ್ಟರಿಂದ ಹಿಂದೂಗಳ ಹತ್ಯೆ: ಆರೋಪ

Published:
Updated:

ಚಿಕ್ಕಬಳ್ಳಾಪುರ: ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಕಮ್ಯುನಿಸ್ಟ್ ಹಿಂಸಾಚಾರ ಖಂಡಿಸಿ ನವೆಂಬರ್ 11 ರಂದು ತಿರುವನಂತಪುರದಲ್ಲಿ ಹಮ್ಮಿಕೊಂಡಿರುವ ‘ಚಲೋ ಕೇರಳ’ ಮೆರವಣಿಗೆಯ ಭಿತ್ತಿಪತ್ರಗಳನ್ನು ನಗರದಲ್ಲಿ ನಟ ಸಾಯಿಕುಮಾರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಮ್ಮ ಪುರಾತನ ಸಂಸ್ಕೃತಿಯ ಗತವೈಭವವನ್ನು ಸಾರುವ ಹಲವು ದೇವಾಲಯಗಳನ್ನು ಹೊಂದಿ, ದೇವರ ನಾಡು ಎಂದು ಖ್ಯಾತಿ ಗಳಿಸಿರುವ ಕೇರಳದಲ್ಲಿ ರಾಷ್ಟ್ರೀಯ ಬದ್ಧತೆ ಸಂಘ ಪರಿವಾರದ ಹಾಗೂ ಎಬಿವಿಪಿಯ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವುದು ಖಂಡನೀಯ’ ಎಂದರು.

‘ಇವತ್ತು ಕೇರಳದಲ್ಲಿರುವ ಕಮ್ಯುನಿಸ್ಟ್‌ ಸರ್ಕಾರ ಆರ್‌.ಎಸ್‌.ಎಸ್‌, ಎಬಿವಿಪಿ ಕಾರ್ಯಕರ್ತರ ಹತ್ಯೆಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಈ ಹಿಂಸಾಚಾರಕ್ಕೆ ತಡೆ ಒಡ್ಡುವ ನಿಟ್ಟಿನಲ್ಲಿ ಎಬಿವಿಪಿ ಹಮ್ಮಿಕೊಂಡಿರುವ ಈ ಚಲೋ ಯಶಸ್ವಿಯಾಗಲಿ’ ಎಂದು ಹಾರೈಸಿದರು.

ಎಬಿವಿಪಿ ವಿಭಾಗ ಸಂಚಾಲಕ ಮಂಜುನಾಥ್‌ ರೆಡ್ಡಿ, ‘ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಮ್ಯುನಿಸ್ಟರು ಸೈದ್ಧಾಂತಿಕ ವಿರೋಧಿಗಳ ಹತ್ಯೆಗೈದು ಆ ದುಷ್ಕೃತ್ಯಗಳನ್ನು ಸಂಭ್ರಮಿಸುತ್ತಿದ್ದಾರೆ. ಕಳೆದ 7 ದಶಕಗಳಲ್ಲಿ ಕೇರಳದಲ್ಲಿ 280ಕ್ಕೂ ಅಧಿಕ ಹಿಂದುತ್ವವಾದಿಗಳ ಕಗ್ಗೊಲೆಯಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಎಬಿವಿಪಿ ಕೇರಳ ಚಲೋ ಹಮ್ಮಿಕೊಂಡಿದೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಘಟಕದ ಸಹ ಸಂಚಾಲಕ ಚರಣ್ ರೆಡ್ಡಿ, ಕಾರ್ಯಕರ್ತರಾದ ಮಲ್ಲಿಕಾರ್ಜುನರೆಡ್ಡಿ, ಭರತ್ ರೆಡ್ಡಿ, ಕಿರಣ್ ಕುಮಾರ್, ಚೇತನ್, ವಿನಯ್‌ ಕುಮಾರ್, ರಘು, ಸಂತೋಷ್, ರವಿ, ಮಿಥುನ್ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry