ಕಾಂಗ್ರೆಸ್‌ ಪಕ್ಷದಿಂದ ಜನಪರ ಆಡಳಿತ

ಗುರುವಾರ , ಜೂನ್ 20, 2019
24 °C

ಕಾಂಗ್ರೆಸ್‌ ಪಕ್ಷದಿಂದ ಜನಪರ ಆಡಳಿತ

Published:
Updated:

ಕುಷ್ಟಗಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ’ ಎಂದು ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು. ತಾಲ್ಲೂಕಿನ ಬಿಜಕಲ್ಲ ಗ್ರಾಮದಲ್ಲಿ ನಡೆದ ‘ಮನೆ ಮನೆಗೆ ಕಾಂಗ್ರೆಸ್’ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಸಾಲ ಮನ್ನಾ, ಜನಸಾಮಾನ್ಯರು, ದೀನ ದಲಿತರು ಸೇರಿದಂತೆ ಎಲ್ಲರಿಗೂ ಒಂದಲ್ಲ ಒಂದು ಯೋಜನೆಗಳ ಪ್ರಯೋಜನ ದೊರೆಯುವಂತೆ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಆಡಳಿತ ನೀಡಿದ್ದಾರೆ’ ಎಂದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರ್ಕಾರ ರೈತರಿಗೆ ಯಾವುದೇ ರೀತಿಯ ನೆರವು ನೀಡಿಲ್ಲ. ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತ ಬಂದ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಿ ರಾಷ್ಟ್ರೀಕೃತ ಬ್ಯಾಂಕ್‍ ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದರು.

ಪ್ರಮುಖರಾದ ಸಂಗಪ್ಪ ವಂಕಲಕುಂಟಿ, ರುದ್ರಯ್ಯ ಮಠಪತಿ, ಮಾನಪ್ಪ ತಳವಾರ, ಮಲ್ಲಿಕಾರ್ಜುನ ವಂಕಲಕುಂಟಿ, ತಿಪ್ಪಣ್ಣ ತಳುವಗೇರಿ, ಹನುಮಂತಪ್ಪ ಭೋವಿ, ಬಸವರಾಜ ತಳುವಗೇರಿ, ಆನಂದ ಭೋವಿ, ಶಿವು ಕರಕನಗೌಡ್ರ, ಕಿಡಿಯಪ್ಪ ಉಪನಾಳ, ಹುಸೇನಸಾಬ್ ಮುಜಾವರ, ಭೀಮಣ್ಣ ದಾಸರ, ಪ್ರಕಾಶ ಬಡಿಗೇರ, ಮಂಜುನಾಥ ಗುಜಮಾಗಡಿ ಇದ್ದರು.

ಹನುಮಸಾಗರ ವರದಿ: ಸಮೀಪದ ಹಿರೇಗೊಣ್ಣಾಗರ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರು ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದ ಪ್ರಚಾರ ನಡೆಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಬಸವರಾಜ ಮಾರನಬಸರಿ, ಯಮನೊರಪ್ಪ ಹನಮನಾಳ, ಯಲ್ಲಪ್ಪ ಬಾಗಲಿ, ರುದ್ರಪ್ಪ ಚಂದ್ರಗಿರಿ, ರಾಜೂ ಜಿಗಳೂರು, ಕಳಕೇಶ ಜೋಗಿನ, ಮಹಾಂತೇಶ ಯರಗೇರಿ, ವಿರೇಶ ಪಟ್ಟಣಶೆಟ್ಟಿ, ಹನುಮಪ್ಪ ಜಾಲಿಮರದ, ಮುತ್ತಪ್ಪ ಜಾಲಿಮರದ, ಸುರೇಶ ಹೊಸಮನಿ, ಇಮಾಸಾಬ ಬಳ್ಳಾರಿ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry