ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾರ್ಯಗಳೇ ಶಾಶ್ವತ; ಸಚಿವ

Last Updated 30 ಅಕ್ಟೋಬರ್ 2017, 8:39 IST
ಅಕ್ಷರ ಗಾತ್ರ

ಬನ್ನೂರು: ಅಧಿಕಾರ ಇದ್ದಾಗ ಮಾಡುವ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯಲು ಸಾಧ್ಯ. ಜನರ ಒಳಿತಿಗೆ ಮಾಡುವ ಕೆಲಸಗಳನ್ನು ಸಮರ್ಪಕವಾಗಿ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು. ಪಟ್ಟಣದ ಅತ್ತಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿಡಿಎಸ್ ನಾಲೆಯನ್ನು ಆಧುನೀಕರಣ ಮಾಡಿರುವುದರಿಂದ 24ಗಂಟೆಯಲ್ಲೇ ಬನ್ನೂರಿನ ಹೆಗ್ಗೆರೆಗೆ ನೀರು ತುಂಬುತ್ತಿದೆ. ಇದರಿಂದ ಸುಮಾರು 5,000 ಎಕರೆಗೆ ನೀರಿನ ಸೌಲಭ್ಯ ದೊರೆತಿದೆ ಎಂದರು.

ಅಭಿವೃದ್ಧಿಯ ವಿಚಾರದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಎಲ್ಲ ಕಡೆಗಳಿಗೂ ಹೆಚ್ಚು ಅನುದಾನ ನೀಡಲಾಗುತ್ತಿದೆ. ಬಸ್‌ ತಂಗುದಾಣ ಇಲ್ಲದ ಕಡೆ ಆದ್ಯತೆಯಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.

ತಿ.ನರಸೀಪುರ ಕ್ಷೇತ್ರದ ವಸತಿ ವಸತಿ ಯೋಜನೆಗಳ ಜಾಗೃತಿ ಸಮಿತಿ ಸದಸ್ಯ ಸುನೀಲ್‌ಬೋಸ್‌, ಮುಖಂಡರಾದ ವಜ್ರೇಗೌಡ, ಅತ್ತಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಕೃಷ್ಣೇಗೌಡ, ಬಿ.ಎಸ್‌. ರವೀಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್, ಬಸವರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಾಮೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಚಲುವರಾಜು, ಹೊನ್ನಗಿರಿಗೌಡ, ದೊಳ್ಳಯ್ಯ, ರಾಜು, ಶ್ರೀಕಂಠೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT