‘ವಿಜಯಶಂಕರ್ ಬಿಜೆಪಿ ತೊರೆಯಲು ನಾನು ಕಾರಣನಲ್ಲ’

ಮಂಗಳವಾರ, ಜೂನ್ 25, 2019
27 °C

‘ವಿಜಯಶಂಕರ್ ಬಿಜೆಪಿ ತೊರೆಯಲು ನಾನು ಕಾರಣನಲ್ಲ’

Published:
Updated:

ಪಿರಿಯಾಪಟ್ಟಣ: ಬಿಜೆಪಿ ತೊರೆದ ಸಿ.ಎಚ್‌.ವಿಜಯಶಂಕರ್‌ ಪಕ್ಷ ಬಿಡಲು ನೆಪವಾಗಿ ವಿನಾ ಕಾರಣ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಮಂಜುನಾಥ್ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿ ಪಕ್ಷದ ಮತ್ತೊಂದು ಕಚೇರಿ ಸ್ಥಾಪಿಸಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ವಿಜಯಶಂಕರ್‌ ಆರೋಪಿಸಿದ್ದರು.

ಆದರೆ, ನನ್ನ ಅಭಿಮಾನಿ ಬಳಗದ ಸ್ವಂತ ಕಚೇರಿ ಹೊಂದಿ ಅಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಹಾಕಲಾಗಿತ್ತು ಎಂದು ಹೇಳಿದರು. ಬಿಜೆಪಿ ಬಲವರ್ಧನೆಗೆ ವರಿಷ್ಠರು ಸೂಚಿಸಿರುವ ಮೇರೆಗೆ ತಾಲ್ಲೂಕಿನಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry