'ಪಿಡಿಮ್ಯಾನ್- ಒಡೆಯನಿಗಿಂತ ಚತುರ ನಾಯಿಯೊಂದರ ಕತೆ'; ರಾಹುಲ್‍ ಟ್ವೀಟ್‍ಗೆ ಟಾಂಗ್ ನೀಡಿದ ಬಿಜೆಪಿ

ಬುಧವಾರ, ಜೂನ್ 26, 2019
28 °C

'ಪಿಡಿಮ್ಯಾನ್- ಒಡೆಯನಿಗಿಂತ ಚತುರ ನಾಯಿಯೊಂದರ ಕತೆ'; ರಾಹುಲ್‍ ಟ್ವೀಟ್‍ಗೆ ಟಾಂಗ್ ನೀಡಿದ ಬಿಜೆಪಿ

Published:
Updated:
'ಪಿಡಿಮ್ಯಾನ್- ಒಡೆಯನಿಗಿಂತ ಚತುರ ನಾಯಿಯೊಂದರ ಕತೆ'; ರಾಹುಲ್‍ ಟ್ವೀಟ್‍ಗೆ ಟಾಂಗ್ ನೀಡಿದ ಬಿಜೆಪಿ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್‌ಗಳನ್ನು ಯಾರು ಮಾಡುತ್ತಾರೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಈ ಪ್ರಶ್ನೆಗೆ ರಾಹುಲ್ ಭಾನುವಾರ ತಮಾಷೆಯಾಗಿ ಉತ್ತರಿಸಿದ್ದರು.

ತಮ್ಮ ನಾಯಿ ‘ಪಿಡಿ’ಗೆ ಬಿಸ್ಕತ್ ತಿನ್ನಿಸುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿದ್ದ ರಾಹುಲ್, ‘ಈತನ ಪರವಾಗಿ ಯಾರು ಟ್ವೀಟ್‌ ಮಾಡುತ್ತಿದ್ದಾರೆ ಎಂದು ಜನ ಕೇಳುತ್ತಿದ್ದಾರೆ... ನಾನು ಪಿಡಿ... ನಾನು ಆತನಿಗಿಂತ ಬಹಳ ಪ್ರಶಾಂತ. ನೋಡಿ ಟ್ವೀಟ್‌ ಜತೆ ನಾನೇನು ಮಾಡಬಲ್ಲೆ... ಊಪ್ಸ್... ಟ್ರೀಟ್’ ಎಂದು ಒಕ್ಕಣೆ ಬರೆದಿದ್ದರು. ರಾಹುಲ್ ಅವರ ಈ ಟ್ವೀಟ್ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.

ಅಸ್ಸಾಂನ ಬಿಜೆಪಿ ಸರ್ಕಾರದ ಸಚಿವ ಹಿಮಂತ್ ಬಿಸ್ವಾ ಶರ್ಮಾ ಅವರು,‘ನಾವು ಅಸ್ಸಾಂನ ಗಂಭೀರ ವಿಷಯಗಳ ಬಗ್ಗೆ ಚರ್ಚಿಸುತ್ತಿರುವಾಗಲೂ ಅವರು ಬಿಸ್ಕತ್‌ ತಿನ್ನಿಸುತ್ತಿದ್ದರು’ ಎಂದು ರಾಹುಲ್ ಅವರನ್ನು ಲೇವಡಿ ಮಾಡಿದ್ದರು.

ಇದರ ಬೆನ್ನಲ್ಲೇ ಬಿಜೆಪಿ ಐಟಿ ಸೆಲ್ ಉಸ್ತುವಾರಿ ವಹಿಸಿರುವ ಅಮಿತ್ ಮಾಳವಿಯಾ ಅವರು 'ಪಿಡಿ ಲಾವೋ, ಕಾಂಗ್ರೆಸ್ ಬಚಾವೊ' ಎಂಬ ಒಕ್ಕಣೆಯೊಂದಿಗೆ ಪಿಡಿಮ್ಯಾನ್ ಎಂಬ ಪೋಸ್ಟರ್ ಟ್ವೀಟ್ ಮಾಡಿದ್ದಾರೆ.

ಶೀಘ್ರದಲ್ಲೇ ತೆರೆಕಾಣಲಿರುವ ಅಕ್ಷಯ್ ಕುಮಾರ್ ನಟನೆಯ ಬಾಲಿವುಡ್ ಚಿತ್ರ ಪ್ಯಾಡ್‍ಮ್ಯಾನ್ ಪೋಸ್ಟರ್‍‍ನಲ್ಲಿ ರಾಹುಲ್ ಚಿತ್ರವನ್ನಿರಿಸಿ ಫೋಟೊಶಾಪ್ ಮಾಡಿದ ಪೋಸ್ಟರ್‍‍ನ್ನು ಬಿಜೆಪಿ ಬಳಸಿಕೊಂಡಿದೆ. ಸೈಕಲ್‍ವೊಂದರಲ್ಲಿ ರಾಹುಲ್ ಗಾಂಧಿ ಕುಳಿತುಕೊಂಡಿದ್ದು ಮುಂದೆ ನಾಯಿ ಪಿಡಿಯನ್ನು ಕೂರಿಸಲಾಗಿದೆ. ಈ ಪೋಸ್ಟರ್‍‍ನಲ್ಲಿ ಪಿಡಿಮ್ಯಾನ್- ಒಡೆಯನಿಗಿಂತ ಚತುರ ನಾಯಿಯೊಂದರ ಕತೆ ಎಂಬ ಟ್ಯಾಗ್‍ಲೈನ್ ಜತೆಗೆ ಚಿತ್ರಕತೆ ಮತ್ತು ನಿರ್ದೇಶನ ಕಾಂಗ್ರೆಸ್...ಟ್ವಿಟರ್‍‍ನಲ್ಲಿ ಇಂದು ತೆರೆಕಾಣಲಿದೆ ಎಂದು ಬರೆಯಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry