‘ಕಾಲೇಜ್‌ಕುಮಾರ್‌’ ಬಿಡುಗಡೆಗೆ ಸಿದ್ಧ

ಮಂಗಳವಾರ, ಜೂನ್ 25, 2019
24 °C

‘ಕಾಲೇಜ್‌ಕುಮಾರ್‌’ ಬಿಡುಗಡೆಗೆ ಸಿದ್ಧ

Published:
Updated:
‘ಕಾಲೇಜ್‌ಕುಮಾರ್‌’ ಬಿಡುಗಡೆಗೆ ಸಿದ್ಧ

ಬೆಂಗಳೂರು: ಕಾಲೇಜ್‌ಕುಮಾರ್‌ ಚಿತ್ರದ ಟ್ರೇಲರ್‌ ಯುಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಈಗಾಲೇ ಟ್ರೇಲರ್‌ 2.66 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ.

ಮಗ ಹುಟ್ಟಿದಾಗಲೇ ಭವಿಷ್ಯದ ಕನಸಿಗೆ ರೆಕ್ಕೆಪುಕ್ಕ ಕಟ್ಟಿಕೊಂಡ ಅಪ್ಪ. ಪುತ್ರನ ಮೇಲೆ ಅಪ್ಪನಿಗೆ ಬೆಟ್ಟದಷ್ಟು ಪ್ರೀತಿ. ಮಗ ದೊಡ್ಡವನಾಗಿ ಉನ್ನತ ಹುದ್ದೆಗೇರುತ್ತಾನೆಂಬ ಆಸೆ. ಆದರೆ, ಕಾಲೇಜು ಸೇರಿದ ಮಗ ಲಾಸ್ಟ್‌ ಬೆಂಚ್‌ ಹುಡುಗರ ಲೀಡರ್! ಈ ‘ಕಾಲೇಜ್‌ಕುಮಾರ್’ ಮಾಡುವ ಅವಾಂತರಗಳ ಸುತ್ತ ಕಥೆ ಹೆಣೆದಿದ್ದಾರೆ ನಿರ್ದೇಶಕ ‘ಅಲೆಮಾರಿ’ ಸಂತು.

‘ಕಾಲೇಜ್‌ಕುಮಾರ್‌’ ಚಿತ್ರ ಬಿಡುಗಡೆ ಸಿದ್ಧವಾಗಿದೆ. ಎಂ.ಆರ್. ಪಿಕ್ಚರ್ಸ್‌ನಡಿ ಈ ಚಿತ್ರ ತೆರೆ ಕಾಣುತ್ತಿದೆ. ಬಿಡದಿ ಬಳಿ ಇರುವ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ನಿವಾಸದಲ್ಲಿ ಚಿತ್ರದ ಟ್ರೈಲರ್‌ ಮತ್ತು ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

‘ನಾನು ಮೂರು ಹೈಸ್ಕೂಲ್‌ ಮತ್ತು ಐದು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದೆ. ನನ್ನ ಸ್ನೇಹಿತರ ಪಡೆ ಹೆಚ್ಚಿತ್ತು. ಹಾಗಾಗಿ, ಕಾಲೇಜಿನಿಂದ ಕಾಲೇಜಿಗೆ ಹೋಗಬೇಕಾಯಿತು’ ಎಂದರು ಟ್ರೈಲರ್‌ ಬಿಡುಗಡೆಗೊಳಿಸಿದ ಮುತ್ತ‍‍ಪ್ಪ ರೈ.

‘ಕಾಲೇಜ್‌ಕುಮಾರ್‌’ ಚಿತ್ರವು ಉತ್ತಮ ಕಥಾವಸ್ತು ಹೊಂದಿದೆ. ಮಗನ ಮೇಲೆ ತಂದೆ–ತಾಯಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ, ಆತ ಏನೆಲ್ಲಾ ಅವಾಂತರ ಮಾಡುತ್ತಾನೆ. ಕೊನೆಗೆ ಹೇಗೆ ಸರಿದಾರಿಗೆ ಬರುತ್ತಾನೆ ಎಂಬುದನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಇದೊಂದು ಕೌಟುಂಬಿಕ ಚಿತ್ರ. ಸಿನಿಮಾವು ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದ ಅವರ ಮಾತಿನಲ್ಲಿ ವಿಶ್ವಾಸ ಇತ್ತು.

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಎಲ್‌. ಪದ್ಮನಾಭ ಬಂಡವಾಳ ಹೂಡಿರುವ ಈ ಚಿತ್ರವು ಮುಂದಿನ ತಿಂಗಳು ರಾಜ್ಯದಾದ್ಯಂತ ತೆರೆಕಾಣಲು ಸಿದ್ಧವಾಗಿದೆ. ನಟ ರವಿಶಂಕರ್‌, ಶ್ರುತಿ, ವಿಕ್ಕಿ, ಸಂಯುಕ್ತಾ ಹೆಗಡೆ ತಾರಾಬಳಗದಲ್ಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry