‘ಸಂಹಾರ’ ಟ್ರೇಲರ್ ಬಿಡುಗಡೆ

ಸೋಮವಾರ, ಜೂನ್ 17, 2019
31 °C

‘ಸಂಹಾರ’ ಟ್ರೇಲರ್ ಬಿಡುಗಡೆ

Published:
Updated:
‘ಸಂಹಾರ’ ಟ್ರೇಲರ್ ಬಿಡುಗಡೆ

ಚಿರಂಜೀವಿ ಸರ್ಜಾ ಅಭಿನಯದ ‘ಸಂಹಾರ’ ಚಿತ್ರದ ಟ್ರೇಲರ್‌, ಅವರ ಹುಟ್ಟು ಹಬ್ಬದ ದಿನವೇ ಬಿಡುಗಡೆ ಆಯಿತು.

ಚಿರಂಜೀವಿ ಸರ್ಜಾ ಅವರು ಈ ಸಿನಿಮಾದಲ್ಲಿ ಅಂಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣ ಮೈಸೂರು ಹಾಗೂ ಮಂಗಳೂರು ಕಡೆ ನಡೆದಿದೆ. ಅಂಧನಾಗಿದ್ದರೂ, ಹೋಟೆಲ್‌ನಲ್ಲಿ ಅಡುಗೆ ಮಾಡುವುದು ಚಿರಂಜೀವಿ ಅವರ ಪಾತ್ರದ ವೈಶಿಷ್ಟ್ಯ. ಸಿನಿಮಾವನ್ನು ನವೆಂಬರ್‌ನಲ್ಲಿ ತೆರೆಗೆ ತರುವ ಉದ್ದೇಶ ತಂಡದ್ದು.

ಯಶವಂತ ಶೆಟ್ಟಿ ಖಳನ ‍ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ, ಅರುಣಾ ಬಾಲರಾಜ್ ತಾರಾಬಳಗದಲ್ಲಿದ್ದಾರೆ. ರವಿ ಬಸ್ರೂರು, ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಗದೀಶ್‍ ವಾಲಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎ. ವೆಂಕಟೇಶ್, ಆರ್.ಸುಂದರ ಕಾಮರಾಜ್ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಗುರುದೇಶ್‌ಪಾಂಡೆ ಇದರ ನಿರ್ದೇಶಕರು. ಕಾವ್ಯಾ ಶೆಟ್ಟಿ ಹಾಗೂ ಹರಿಪ್ರಿಯಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry