ಮನಫೋರ್ಟ್, ಗೇಟ್ಸ್ ವಿರುದ್ಧ ದೋಷಾರೋಪ

ಬುಧವಾರ, ಜೂನ್ 26, 2019
28 °C

ಮನಫೋರ್ಟ್, ಗೇಟ್ಸ್ ವಿರುದ್ಧ ದೋಷಾರೋಪ

Published:
Updated:
ಮನಫೋರ್ಟ್, ಗೇಟ್ಸ್ ವಿರುದ್ಧ ದೋಷಾರೋಪ

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರ ಸಮಿತಿಯ ಮಾಜಿ ಮುಖ್ಯಸ್ಥ ಪೌಲ್ ಮನಫೋರ್ಟ್ ಹಾಗೂ ವ್ಯವಹಾರದ ಮಾಜಿ ಪಾಲುದಾರ ರಿಕ್ ಗೇಟ್ಸ್ ಅವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಅಮೆರಿಕದ ವಿರುದ್ಧ ಸಂಚು, ಅಕ್ರಮ ಹಣ ವರ್ಗಾವಣೆ ಹಾಗೂ ಇತರೆ ಹಣಕಾಸು ಅವ್ಯವಹಾರ ಆರೋಪಗಳನ್ನು ಇಬ್ಬರ ಮೇಲೆ ಹೊರಿಸಲಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್ ಅವರ ಪ್ರಚಾರ ಸಮಿತಿ ಹಾಗೂ ರಷ್ಯಾ ನಡುವೆ ನಡೆದಿರಬಹುದಾದ ಒಪ್ಪಂದ ಸಾಧ್ಯತೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈ ಆರೋಪಗಳನ್ನು ಮಾಡಿದೆ.

ವಿದೇಶಿ ಕಂಪೆನಿಗಳು ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಕೋಟ್ಯಂತರ ಡಾಲರ್ ಹಣ ರವಾನೆಯಾಗಿದೆ ಎಂದು ಫೆಡರಲ್ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮನಫೋರ್ಟ್ ಹಾಗೂ ಗೇಟ್ಸ್ ಅವರು ಅಧಿಕಾರಿಗಳಿಗೆ ಶರಣಾಗಿದ್ದು, ಕೋರ್ಟ್‌ಗೆ ಅವರನ್ನು ಶೀಘ್ರವೇ ಹಾಜರುಪಡಿಸಲಾಗುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry