ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪನ ತಡೆಯಲಿದೆ ಈ ಕಾಂಕ್ರೀಟ್ ಪದರ!

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಟೊರಾಂಟೊ: ಉತ್ತರಾಖಂಡದ ರೂರ್ಕಿಯಲ್ಲಿ ಶಾಲಾ ಕಟ್ಟಡವೊಂದಕ್ಕೆ ವಿನೂತನವಾಗಿ ಸಿದ್ಧಪಡಿಸಿರುವ ಕಾಂಕ್ರೀಟ್ ಪದರವನ್ನು ಲೇಪಿಸಲು ಸಂಶೋಧಕರು ಯೋಜನೆ ರೂಪಿಸಿದ್ದಾರೆ. ಇದು ಭೂಕಂಪನ ತಡೆಯುವ ಶಕ್ತಿಯಿಲ್ಲದ ಕಟ್ಟಡಗಳ ಸಾಮರ್ಥ್ಯವನ್ನು ಅಚ್ಚರಿಯ ರೀತಿಯಲ್ಲಿ ವೃದ್ಧಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಫೈಬರ್‌ನಿಂದ ಬಲಪಡೆದಿರುವ ಈ ಕಾಂಕ್ರೀಟ್ ಅನ್ನು ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಇದು ಶಕ್ತಿಯುತ, ಮೆದುವಾದ ಹಾಗೂ ಹೊಂದಿಕೊಳ್ಳಬಲ್ಲ ಗುಣವನ್ನು ಹೊಂದಿದೆ. ಬಲಹೀನ ಕಟ್ಟಡಗಳಲ್ಲಿ ಇದನ್ನು ಬಳಸಿದರೆ ಅವುಗಳ ಸಾಮರ್ಥ್ಯ ಹೆಚ್ಚುತ್ತದೆ. ಇದನ್ನು ಪರಿಸರಸ್ನೇಹಿ ‘ಮೆದುವಾದ ಸಿಮೆಂಟಿಯಸ್ ಸಮ್ಮಿಶ್ರ’ (ಇಡಿಸಿಸಿ) ಎಂದು ಕರೆಯಲಾಗಿದೆ.

2011ರಲ್ಲಿ ಜಪಾನ್‌ನ ತೊಹೊಕುದಲ್ಲಿ ಸೃಷ್ಟಿಯಾದ 9.09ರಷ್ಟು ತೀವ್ರತೆಯ ಕಂಪನಗಳನ್ನು ಸೃಷ್ಟಿಸಿ ಇದನ್ನು ಪರೀಕ್ಷೆಗೊಳಪಡಿಸಲಾಗಿದೆ.

ಇಡಿಸಿಸಿಯನ್ನು ಗೋಡೆಯೊಂದರ ಮೇಲೆ 10 ಮಿಲಿಮೀಟರ್‌ನಷ್ಟು ದಪ್ಪ ಇರುವಂತೆ ಎರಚಲಾಗುತ್ತದೆ. ಕಂಪನ ತಡೆಯಲು ಇಷ್ಟು ಸಾಕು ಎನ್ನುತ್ತಾರೆ ಸಂಶೋಧಕರು.

ಭಾರತ–ಕೆನಡಾ ಸಂಶೋಧನಾ ಕೇಂದ್ರ ಐಸಿ–ಇಂಪ್ಯಾಕ್ಟ್ಸ್ ಈ ಸಂಶೋಧನೆ ನಡೆಸಿದೆ. ಉಭಯ ದೇಶಗಳ ನಡುವಿನ ಸಂಶೋಧನಾ ಪಾಲುದಾರಿಕೆಯನ್ನು ಇದು ಉತ್ತೇಜಿಸುತ್ತದೆ.

ಭೂಕಂಪನಕ್ಕೆ ಹೆಚ್ಚಾಗಿ ಒಳಗಾಗುವ ಸಾಧ್ಯತೆಯಿರುವ ರೂರ್ಕಿಯ ಶಾಲೆಯೊಂದರಲ್ಲಿ ಇಡಿಸಿಸಿಯನ್ನು ಐಸಿ–ಇಂಪ್ಯಾಕ್ಟ್ ಪ್ರಯೋಗಿಸುತ್ತಿದೆ.

ಸಿಮೆಂಟ್‌ಗೆ ಪರ್ಯಾಯ
ಸಿಮೆಂಟ್, ಪಾಲಿಮರ್‌ನಿಂದ ಕೂಡಿದ ಫೈಬರ್, ಬೂದಿ ಹಾಗೂ ಇತರ ಕೈಗಾರಿಕಾ ವಸ್ತುಗಳಿಂದ ಈ ಕಾಂಕ್ರಿಟ್ ಅನ್ನು ತಯಾರಿಸಲಾಗಿದ್ದು, ಹೆಚ್ಚು ಸುಸ್ಥಿರವಾಗಿದೆ ಎಂದು ಸಂಶೋಧಕರ ತಂಡದ ಮುಖ್ಯಸ್ಥ ಪ್ರೊ. ನೆಮಿ ಬಂತಿಯಾ ಹೇಳುತ್ತಾರೆ. ಸದ್ಯ ಬಳಕೆಯಲ್ಲಿರುವ ಸಿಮೆಂಟ್‌ ಮೇಲಿನ ಅವಲಂಬನೆಯನ್ನು ಇದು ಶೇ 70ರಷ್ಟು ಕಡಿತಗೊಳಿಸಲಿದೆ. ಎನ್ನುತ್ತಾರೆ ಅವರು.

ಒಂದು ಟನ್ ಸಿಮೆಂಟ್ ಉತ್ಪಾದನೆಯಾದರೆ ಒಂದು ಟನ್‌ನಷ್ಟು ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗಮನಿಸಿದರೆ ಇದರಲ್ಲಿ ಸಿಮೆಂಟ್ ಕೈಗಾರಿಕೆಯ ಪಾಲು ಶೇ 7 ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT