ಗೋಲಿನ ಮಳೆ ಸುರಿಸಿದ ಜೊಶುವಾ

ಬುಧವಾರ, ಜೂನ್ 26, 2019
24 °C

ಗೋಲಿನ ಮಳೆ ಸುರಿಸಿದ ಜೊಶುವಾ

Published:
Updated:

ಬೆಂಗಳೂರು: ಜೊಶುವಾ ಡೇನಿಯಲ್‌ ಅವರ ಕಾಲ್ಚಳಕದಲ್ಲಿ ಅರಳಿದ ‘ಹ್ಯಾಟ್ರಿಕ್‌’ ಸಹಿತ ಏಳು ಗೋಲುಗಳ ಬಲದಿಂದ ಸೇಂಟ್‌ ಜೋಸೆಫ್‌ ಪದವಿ ಪೂರ್ವ ಕಾಲೇಜು ತಂಡ ರಿಲಯನ್ಸ್‌ ಫೌಂಡೇಷನ್‌ ಆಶ್ರಯದ ಯೂತ್‌ ಸ್ಪೋರ್ಟ್ಸ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಸೇಂಟ್‌ ಜಾನ್ಸ್‌ ವೈದ್ಯಕೀಯ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಸೀನಿಯರ್‌ ಬಾಲಕರ ಅರ್ಹತಾ ಪಂದ್ಯದಲ್ಲಿ ಸೇಂಟ್‌ ಜೋಸೆಫ್‌ ಕಾಲೇಜು 9–0 ಗೋಲುಗಳಿಂದ ಬೆಂಗಳೂರು ಇಂಟರ್‌ನ್ಯಾಷನಲ್‌ ಸಮೂಹ ಸಂಸ್ಥೆ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಮಿಂಚಿನ ಆಟ ಆಡಿದ ಜೊಶುವ ಎದುರಾಳಿ ತಂಡದ ದುರ್ಬಲ ರಕ್ಷಣಾ ಕೋಟೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ದರು. ಅವರು ನಾಲ್ಕು ಗೋಲು ದಾಖಲಿಸಿದ್ದರಿಂದ ತಂಡ 4–0ರ ಮುನ್ನಡೆ ಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲೂ ಡೇನಿಯಲ್‌ ಗೋಲಿನ ಮಳೆ ಸುರಿಸಿ ಕ್ರೀಡಾಂಗಣ

ದಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು. ಜಸ್ಟಿನ್‌ ಜೋಸೆಫ್‌ ಮತ್ತು ರಕ್ಷಿತ್‌ ವಿಜಯ್‌ ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ದೆಹಲಿ ಪಬ್ಲಿಕ್‌ ಶಾಲೆ (ಈಸ್ಟ್‌) ತಂಡ 7–0 ಗೋಲುಗಳಿಂದ ಜೆ.ಎಸ್‌.ಎಸ್‌.ಪಬ್ಲಿಕ್‌ ಶಾಲೆ ಎದುರು ಗೆದ್ದಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry