ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ರ‍್ಯಾಂಕಿಂಗ್; ಅಗ್ರಸ್ಥಾನಕ್ಕೆ ಮಿಥಾಲಿ ಬಡ್ತಿ

ಬೌಲರ್‌ ಜೂಲನ್‌ಗೆ ಎರಡನೇ ಸ್ಥಾನ
Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದುಬೈ: ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಸೋಮವಾರ ಪ್ರಕಟಗೊಂಡ ಐಸಿಸಿ ಏಕದಿನ ರ‍್ಯಾಂಕಿಂಗ್‌ ಬ್ಯಾಟ್ಸ್‌ವುಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಎಲಿಸ್ಸಾ ಪೆರೆ ಹಾಗೂ ನ್ಯೂಜಿಲೆಂಡ್‌ನ ಆಮಿ ಸತರ್ತ್‌ವೇಟ್‌ ಕೂಡ ಒಂದು ಸ್ಥಾನ ಮೇಲಕ್ಕೇರಿದ್ದಾರೆ. ಅವರು ಕ್ರಮವಾಗಿ  ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.

ಗಾಯದ ಕಾರಣ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡದ ಆಸ್ಟ್ರೇಲಿಯಾ ತಂಡದ ಆಟಗಾರ್ತಿ ಮೆಗ್‌ ಲ್ಯಾನಿಂಗ್ ಮೊದಲ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮಿಥಾಲಿ 753 ಪಾಯಿಂಟ್ಸ್ ಹೊಂದಿದ್ದರೆ, ಪೆರಿ ಮತ್ತು ಆಮಿ ಕ್ರಮವಾಗಿ 725 ಹಾಗೂ 720 ಪಾಯಿಂಟ್ಸ್‌ ಗಳಿಸಿದ್ದಾರೆ. ಭಾರತದ ಹರ್ಮನ್‌ಪ್ರೀತ್ ಕೌರ್ 677 ಪಾಯಿಂಟ್ಸ್‌ಗಳಿಂದ ಆರನೇ ಸ್ಥಾನದಲ್ಲಿ ಇದ್ದಾರೆ.

*

ಜೂಲನ್‌ಗೆ ಎರಡನೇ ಸ್ಥಾನ: ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಜೂಲನ್ ಗೋಸ್ವಾಮಿ 652 ರೇಟಿಂಗ್ ಪಾಯಿಂಟ್ಸ್‌ಗಳಿಂದ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮರಿಜನ್ನೆ ಕಪ್‌ 656 ಪಾಯಿಂಟ್ಸ್‌ಗಳಿಂದ ಮೊದಲ ಸ್ಥಾನದಲ್ಲಿ ಇದ್ದಾರೆ.

ಐಸಿಸಿ ಮಹಿಳೆಯರ ಚಾಂಪಿಯನ್‌ ಷಿಪ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 2–1ರಲ್ಲಿ ಇಂಗ್ಲೆಂಡ್ ಎದುರು ಗೆದ್ದಿದೆ. ಇದರಿಂದಾಗಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ.

ತಂಡಗಳ ರ‍್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮೊದಲ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದವು. ತವರಿನಲ್ಲಿ ಸರಣಿ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ತಂಡ 129 ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನ ಉಳಿಸಿಕೊಂಡಿದೆ. ಬಳಿಕ ಇಂಗ್ಲೆಂಡ್ (127),ನ್ಯೂಜಿಲೆಂಡ್‌ (118) ಹಾಗೂ ಭಾರತ (116) ಸ್ಥಾನ ಗಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT