ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುವಾದಿಸಿದ್ದು ಗಿಲ್‌ ಜೊತೆ ಅಲ್ಲ’

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ರನ್ನನ ಗದಾಯುದ್ಧ ಕೃತಿಯನ್ನು ತಾವು ಅಮ್ಮೆಲ್‌ ಶರೋನ್ ಹಾಗೂ ಡಾ.ಅಕ್ಕಮಹಾದೇವಿ ಜೊತೆ ಅನುವಾದ ಮಾಡುತ್ತಿರುವುದಾಗಿ ಹಾಗೂ ಪ್ರೊ.ಶುಭಚಂದ್ರ ಮತ್ತು ಪ್ರೊ.ಕೋಮಲೇಶ್‌ ಅವರ ಜೊತೆಯಲ್ಲಿ ವಡ್ಡಾರಾಧನೆಯ ಇಂಗ್ಲಿಷ್‌ ಅನುವಾದ ಮಾಡುತ್ತಿರುವುದಾಗಿ ಎಂದು ಪ್ರೊ.ಆರ್ವಿಯಸ್‌ ಸುಂದರಂ ತಿಳಿಸಿದ್ದಾರೆ.

ಅ.30ರಂದು ಪ್ರಕಟಗೊಂಡ ‘ಇಂಗ್ಲಿಷಿಗೆ ಗದಾಯುದ್ಧ, ವಡ್ಡಾರಾಧನೆ’ ವರದಿಗೆ ಸಂಬಂಧಿಸಿದಂತೆ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಈ ಎರಡೂ ಕೃತಿಗಳ ಅನುವಾದವನ್ನು ಗಿಲ್‌ ಬೆನ್‌ ಹೆರುತ್‌ ಜೊತೆ ಮಾಡುತ್ತಿಲ್ಲ. ಅವರೊಂದಿಗೆ ‘ಉದಯಾದಿತ್ಯ ಅಲಂಕಾರ’ ಕೃತಿಯನ್ನು ಅನುವಾದಿಸಿದ್ದೇನೆ. ಈಗ ಅವರೊಂದಿಗೆ ಹರಿಹರನ ರಗಳೆಗಳ ಅನುವಾದ ನಡೆಯುತ್ತಿದೆ. ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಲ್ಲಿ ನನ್ನ ಸಹೋದ್ಯೋಗಿ ಗಿಲ್‌ ಅಲ್ಲ; ದೇವೇನ್‌ ಪಟೇಲ್. ಅವರೊಂದಿಗೆ ಇಂಗ್ಲಿಷ್‌ ಅನುವಾದ ಮಾಡಿದ್ದು ‘ಕವಿರಾಜಮಾರ್ಗ’ ಕೃತಿ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT