ಕಾರ್ನಾಡ್‌ಗೆ ಟಾಟಾ ಸಾಹಿತ್ಯ ಪ್ರಶಸ್ತಿ

ಶನಿವಾರ, ಮೇ 25, 2019
22 °C

ಕಾರ್ನಾಡ್‌ಗೆ ಟಾಟಾ ಸಾಹಿತ್ಯ ಪ್ರಶಸ್ತಿ

Published:
Updated:
ಕಾರ್ನಾಡ್‌ಗೆ ಟಾಟಾ ಸಾಹಿತ್ಯ ಪ್ರಶಸ್ತಿ

ಬೆಂಗಳೂರು: ನಾಟಕ ರಚನೆಕಾರ, ನಟ ಗಿರೀಶ್ ಕಾರ್ನಾಡ್ ಅವರಿಗೆ ಟಾಟಾ ಸಾಹಿತ್ಯ ಜೀವಮಾನ ಪ್ರಶಸ್ತಿ ಘೋಷಿಸಲಾಗಿದೆ.

ಮುಂಬೈನಲ್ಲಿರುವ ಪ್ರದರ್ಶನ ಕಲೆಗಳ ರಾಷ್ಟ್ರೀಯ ಕೇಂದ್ರದಲ್ಲಿ ನ.19ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.

ಈ ಕುರಿತು ಪ್ರತಿಕ್ರಿಯಿಸಿದ ಗಿರೀಶ್ ಕಾರ್ನಾಡ್, ‘ನಾಟಕ ರಚನೆಕಾರನಾದ ನನಗೆ ಟಾಟಾ ಸಾಹಿತ್ಯ ಪ್ರಶಸ್ತಿ ಸಿಕ್ಕಿರುವುದು ಗೌರವ ತಂದಿದೆ. ಇದಕ್ಕಿಂತ ಹೆಚ್ಚಿನದು ಇನ್ನೇನು ಬಯಸಲಿ. ನಾಟಕಕಾರನ ಜೀವನದಲ್ಲಿ ಇದು ಅಮೂಲ್ಯ ಕ್ಷಣ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry